ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸೃಷ್ಟಿಯಾಗಿದ್ದ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯ ಆತಂಕ ಇದೀಗ ದೂರವಾಗುತ್ತಿದೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿದ್ದ ಪೂರೈಕೆ ವ್ಯತ್ಯಯ ಇದೀಗ ತಹಬದಿಗೆ ಬರುತ್ತಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ.
ಹೌದು. ಕಳೆದ ಕೇವಲ 3 ದಿನಗಳಲ್ಲಿ ರಾಜ್ಯದಲ್ಲಿ ಸಿಲಿಂಡರ್ ಸರಬರಾಜು ಶೇ. 20ರಷ್ಟುಮಾರ್ಚ್ 12 ರಂದು 3.57 ಲಕ್ಷ ಇದ್ದ ಪೂರೈಕೆ, ಮಾರ್ಚ್ 14 ರ ವೇಳೆಗೆ 4.11 ಲಕ್ಷಕ್ಕೆ ಏರಿಕೆಯಾಗಿದೆ.
ಬುಕ್ಕಿಂಗ್ ಪ್ರಮಾಣ ಇಳಿಕೆ : ದೇಶಾದ್ಯಂತ ಇದ್ದ ಅಭಾವದ ಭೀತಿ ಕಡಿಮೆಯಾಗಿದ್ದು, ಒಟ್ಟು ಬುಕ್ಕಿಂಗ್ ಪ್ರಮಾಣ 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿದಿದೆ. ಇದು ಗ್ರಾಹಕರಲ್ಲಿ ಭರವಸೆ ಮೂಡಿರುವುದಕ್ಕೆ ಸಾಕ್ಷಿಯಾಗಿದೆ.
ವಾಣಿಜ್ಯ ಬಳಕೆಗೆ ಬಲ: ಗೃಹ ಬಳಕೆ ಮಾತ್ರವಲ್ಲದೆ, ತೀವ್ರ ಸಂಕಷ್ಟದಲ್ಲಿದ್ದ ವಾಣಿಜ್ಯ ಎಲ್‌ಪಿಜಿ ಮತ್ತು ಆಟೋ ಎಲ್‌ಪಿಜಿ ಪೂರೈಕೆಯಲ್ಲೂ ಗಣನೀಯ ಸುಧಾರಣೆ ಕಂಡುಬಂದಿದೆ.ಸಿಲಿಂಡರ್ ಕೊರತೆಯ ಲಾಭ ಪಡೆಯುತ್ತಿದ್ದವರ ವಿರುದ್ಧ ಆಹಾರ ಇಲಾಖೆ ದಾಳಿ ನಡೆಸಿದ್ದು, ರಾಜ್ಯಾದ್ಯಂತ 514 ಅಕ್ರಮ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತಕ್ಕೆ ಮತ್ತೊಂದು ಕಚ್ಚಾ ತೈಲ ಹೊತ್ತ ಹಡಗು ಆಗಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನ ಮತ್ತು ಗ್ಯಾಸ್ ಪೂರೈಕೆ ಸಂಪೂರ್ಣವಾಗಿ ಸುಗಮವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಎಲ್‌ಪಿಜಿ ಅಭಾವವನ್ನು ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ವಿಧಾನಮಂಡಲದಲ್ಲಿ ಸರ್ಕಾರದ ವತಿಯಿಂದ ಈ ಬಗ್ಗೆ ಈಗಾಗಲೇ ಉತ್ತರ ನೀಡಲಾಗಿದೆ. ಆಹಾರಕ್ಕಾಗಿ ಹೋಟೆಲ್ ಗಳ ಮೇಲೆ ಅವಲಂಬಿತರಾಗುವ ಜನಸಂಖ್ಯೆ ಸಾಕಷ್ಟಿದೆ. ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ. ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿಯವರು ಎಲ್ ಪಿ ಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ಪರಿಸ್ಥಿತಿ ನಿರ್ವಹಿಸುವ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಎಲ್ ಪಿ ಜಿ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿರುವುದಲ್ಲ, ದೇಶದ ಎಲ್ಲ ಕಡೆಯೂ ಇದೇ ಪರಿಸ್ಥಿತಿ ಇದೆ. ರಾಜ್ಯ ಬಿಜೆಪಿಯವರು ಅರ್ಥವಿಲ್ಲದಂತೆ ಮಾತನಾಡುವ ಬದಲು, ಎಲ್ ಪಿ ಜಿ ಹೆಚ್ಚಿನ ಸರಬರಾಜಿಗೆ ಕ್ರಮ ವಹಿಸಲು ಕೇಂದ್ರವನ್ನು ಒತ್ತಾಯಿಸಲಿ ಎಂದಿದ್ದಾರೆ.

