HomeKarnatakaಗ್ರೇಡ್-1 ಗ್ರಾಮ ಪಂಚಾಯತಿಗಳಿಗೆ ಹೆಚ್ಚುವರಿ 'ಗ್ರಾಮ ಒನ್ ಕೇಂದ್ರ'ಗಳ ಆರಂಭಿಸಲು ಅರ್ಜಿ ಆಹ್ವಾನ

ಗ್ರೇಡ್-1 ಗ್ರಾಮ ಪಂಚಾಯತಿಗಳಿಗೆ ಹೆಚ್ಚುವರಿ ‘ಗ್ರಾಮ ಒನ್ ಕೇಂದ್ರ’ಗಳ ಆರಂಭಿಸಲು ಅರ್ಜಿ ಆಹ್ವಾನ

ಧಾರವಾಡ  :   ಮಾನ್ಯ ನಿರ್ದೇಶಕರು, ಇ.ಡಿ.ಸಿ.ಎಸ್, ಬೆಂಗಳೂರುರವರ ಇಲಾಖೆಯಿಂದ ಧಾರವಾಡ ಜಿಲ್ಲೆಯ ಗ್ರೇಡ್-1 ಮತ್ತು ಗ್ರೇಡ್-2 ಗ್ರಾಮ ಪಂಚಾಯಿತಿಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತುತ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತಿಗಳ ವಿವರಗಳನ್ನು ನವೀಕರಿಸಲಾಗಿದ್ದು, (UPDATED) ವರ್ಗಿಕರಣದಲ್ಲಿ ಕೆಲವು ಬದಲಾವಣೆಗಳಾಗಿದ್ದು, ಕೆಲವು ಪಂಚಾಯತಿಗಳನ್ನು ಗ್ರೇಡ್-2 ರಿಂದ ಗ್ರೇಡ್-1 ಕ್ಕೆ ಮೇಲ್ದರ್ಜೆಗೇರಿಸಲಾಗಿದೆ.

ಅಂತಹ ಪಂಚಾಯತಿಗಳಿಗೆ ಯಾವುದೇ ನಿಷ್ರ್ಕಿಯಗೊಳಿಸುವಿಕೆಯನ್ನು ಕೈಗೊಳ್ಳಲಾಗುವುದಿಲ್ಲ. ಉನ್ನತೀಕರಿಸಿದ ಪಂಚಾಯತ್‍ಗಳನ್ನು (ಗ್ರೇಡ್-2 ರಿಂದ ಗ್ರೇಡ್-1ಕ್ಕೆ) ಹಾಗೂ ಹೊಸದಾಗಿ ಸೇರ್ಪಡೆಯಾದ ಪಂಚಾಯತಿಗಳಿಗೆ ಮಾರ್ಚ ತಿಂಗಳಲ್ಲಿ ಅಧಿಸೂಚನೆ ಪರಿಗಣಿಸಲಾಗುತ್ತದೆ. ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರಗಳನ್ನು ಸೃಜನೆ ಮಾಡಲಾಗಿರುತ್ತದೆ. ಸೃಜನೆ ಮಾಡಲಾಗಿರುವ ಗ್ರಾಮ ಪಂಚಾಯಿತಿಗಳಾದ ಧಾರವಾಡ ತಾಲ್ಲೂಕಿನ ವ್ಯಾಪ್ತಿಯಲ್ಲಿ ರಾಮಾಪೂರ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಛಬ್ಬಿ, ಹೆಬಸೂರ, ಕೋಳಿವಾಡ, ಮಂಟೂರ, ರಾಯನಾಳ, ಶಿರಗುಪ್ಪಿ ಹಾಗೂ ಕುಂದಗೋಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ದೇವನೂರ, ಮಳಲಿ, ಯರೇಬೂದಿಹಾಳ ಹಾಗೂ ಕಲಘಟಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಗಂಜಿಗಟ್ಟಿ ಗ್ರಾಮ.

ಹೊಸ ಗ್ರಾಮ ಪಂಚಾಯತಿಗಳಿಗೂ ಹೊಸದಾಗಿ ಗ್ರಾಮ ಒನ್ ಕೇಂದ್ರಗಳು ಸೃಜನೆಯಾಗಿದ್ದು, ಧಾರವಾಡ ತಾಲ್ಲೂಕಿನ ಗುಳೆದಕೊಪ್ಪ ಹಾಗೂ ಕುಂದಗೋಳ ತಾಲ್ಲೂಕಿನ ಬಾರದ್ವಾಡ ಗ್ರಾಮಗಳಿಗೆ ಗ್ರಾಮ ಒನ್ ಕೇಂದ್ರಗಳ ಆರಂಭಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ https://sevasindhuservices.karnataka.gov.in/directApply… ವೆಬ್‍ಸೈಟ್ ಮೂಲಕ ಮಾರ್ಚ 15, 2026 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಛೇರಿ ಹಾಗೂ ತಹಶೀಲ್ದಾರ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular