HomeLatest Newsಸಾರ್ವಜನಿಕರೇ ಗಮನಿಸಿ : ಸಿಲಿಂಡರ್ ಬುಕ್ ಮಾಡಿದ್ರೂ ವಿತರಣೆಯಾಗದಿದ್ರೆ ಜಸ್ಟ್ ಹೀಗೆ ದೂರು ನೀಡಿ!

ಸಾರ್ವಜನಿಕರೇ ಗಮನಿಸಿ : ಸಿಲಿಂಡರ್ ಬುಕ್ ಮಾಡಿದ್ರೂ ವಿತರಣೆಯಾಗದಿದ್ರೆ ಜಸ್ಟ್ ಹೀಗೆ ದೂರು ನೀಡಿ!

ಇರಾನ್-ಇಸ್ರೇಲ್ ಯುದ್ಧದ  ಹಿನ್ನೆಲೆಯಲ್ಲಿ ಭಾರತದಲ್ಲಿ ಗ್ಯಾಸ್ ಕೊರತೆ ಉಂಟಾಗಬಹುದು ಎಂಬ ವರದಿಗಳ ನಡುವೆ, ಅನೇಕರು ಎಲ್‌ಪಿಜಿ ಸಿಲಿಂಡರ್ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ಕೆಲವು ಪ್ರದೇಶಗಳಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಜನರು ಸಿಲಿಂಡರ್ ಬುಕ್ ಮಾಡಲು ಮುಗಿಬೀಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವು “ದೇಶೀಯ ಎಲ್‌ಪಿಜಿ ದಾಸ್ತಾನು ನಮಗೆ ಸಾಕಷ್ಟಿದೆ, ಜನರು ಗಾಬರಿಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ಸರ್ಕಾರವು ಕೊರತೆಯಿಲ್ಲ ಎಂದು ಹೇಳುತ್ತಿದ್ದರೂ, ಸಿಲಿಂಡರ್ ಬುಕ್ ಮಾಡಿದ ನಂತರವೂ ಸಕಾಲಕ್ಕೆ ವಿತರಣೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರಿಗಾಗಿ ವಿವಿಧ ಗ್ಯಾಸ್ ಕಂಪನಿಗಳು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿವೆ.

25 ದಿನಗಳ ಅಂತರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗಷ್ಟೇ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬುಕಿಂಗ್ ಅವಧಿಯನ್ನು ಬದಲಾಯಿಸಲಾಗಿದೆ. ಈ ಹಿಂದೆ ಹೊಸ ಸಿಲಿಂಡರ್ ಬುಕ್ ಮಾಡಲು 21 ದಿನಗಳ ಅಂತರವಿತ್ತು, ಈಗ ಅದನ್ನು 25 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಒಂದು ಸಿಲಿಂಡರ್ ವಿತರಣೆಯಾದ ನಂತರ ಮುಂದಿನ ರೀಫಿಲ್ ಬುಕ್ ಮಾಡಲು ಕನಿಷ್ಠ 25 ದಿನಗಳ ಗ್ಯಾಪ್ ಇರಬೇಕು.

ಡೀಲರ್‌ಗಳು ಹೆಚ್ಚಿನ ದರ ಕೇಳಿದರೆ ಏನು ಮಾಡಬೇಕು?

ಕೆಲವು ಡೀಲರ್‌ಗಳು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ದೂರುಗಳಿವೆ. ವಿತರಣೆ ವಿಳಂಬ ಮಾಡುವುದು ಅಥವಾ ಅಧಿಕ ಹಣ ವಸೂಲಿ ಮಾಡುವಂತಹ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ನೇರವಾಗಿ ಕಂಪನಿಗೆ ದೂರು ನೀಡಬಹುದು.

ವಿವಿಧ ಕಂಪನಿಗಳ ಸಹಾಯವಾಣಿ ಸಂಖ್ಯೆಗಳು:

  • ಇಂಡೇನ್ ಗ್ಯಾಸ್ (Indane Gas): ಸಿಲಿಂಡರ್ ವಿತರಣೆಯಲ್ಲಿ ಸಮಸ್ಯೆ ಎದುರಾದರೆ ಟೋಲ್-ಫ್ರೀ ಸಂಖ್ಯೆ 1800-2333-555 ಗೆ ಕರೆ ಮಾಡಿ. ನಿಮ್ಮ ಬುಕಿಂಗ್ ಅಥವಾ ದೂರಿನ ಮಾಹಿತಿಗಾಗಿ 7718955555 ಸಂಖ್ಯೆಯನ್ನೂ ಸಂಪರ್ಕಿಸಬಹುದು.
  • ಭಾರತ್ ಗ್ಯಾಸ್ (Bharat Gas): ಸಕಾಲಕ್ಕೆ ವಿತರಣೆಯಾಗದಿದ್ದರೆ ಅಥವಾ ಡೀಲರ್ ಜೊತೆ ಸಮಸ್ಯೆಗಳಿದ್ದರೆ ಟೋಲ್-ಫ್ರೀ ಸಂಖ್ಯೆ 1800-22-4344 ಗೆ ಕರೆ ಮಾಡಿ. ಹೆಚ್ಚಿನ ಮಾಹಿತಿಗಾಗಿ 7715012345 ಸಂಖ್ಯೆಯನ್ನು ಬಳಸಬಹುದು.
  • ಹೆಚ್‌ಪಿ ಗ್ಯಾಸ್ (HP Gas): ಹೆಚ್‌ಪಿ ಗ್ರಾಹಕರು ಸಮಸ್ಯೆಗಳಿದ್ದಲ್ಲಿ ಟೋಲ್-ಫ್ರೀ ಸಂಖ್ಯೆ 1800-2333-555 ಗೆ ಕರೆ ಮಾಡಬಹುದು. ಬುಕಿಂಗ್ ಅಥವಾ ದೂರುಗಳಿಗಾಗಿ 9493602222 ಸಂಖ್ಯೆಯನ್ನು ಸಂಪರ್ಕಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular