HomeKarnatakaಬೆಳಗಾವಿಯ ರಸ್ತೆ ಯೋಜನೆಗಳು, ಮಹತ್ವದ ಅಪ್‌ಡೇಟ್

ಬೆಳಗಾವಿಯ ರಸ್ತೆ ಯೋಜನೆಗಳು, ಮಹತ್ವದ ಅಪ್‌ಡೇಟ್

ಕರ್ನಾಟಕದ ಗಡಿನಾಡು ಬೆಳಗಾವಿಯ ರಸ್ತೆ ಯೋಜನೆಗಳ ಕುರಿತು ಮಹತ್ವದ ಅಪ್‌ಡೇಟ್ ಒಂದಿದೆ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಈ ಕುರಿತು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ.

ನವದೆಹಲಿಯ ನೂತನ ಸಂಸದ ಭವನದ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ, ಬೆಳಗಾವಿ ಲೋಕಸಭಾ ವ್ಯಾಪ್ತಿಯಡಿ ಕೈಗೊಳ್ಳಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು ಎಂದು ಸಂಸದರು ಪೋಸ್ಟ್ ಹಾಕಿದ್ದಾರೆ.

ರಸ್ತೆ ಯೋಜನೆಗಳ ವಿವರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (CRIF): ಬೆಳಗಾವಿ ಲೋಕಸಭೆಯ ವ್ಯಾಪ್ತಿಯಲ್ಲಿ ಸುಮಾರು 80.33 ಕಿ.ಮೀ. ಉದ್ದದ ರಸ್ತೆಯನ್ನು ಮೂಲಸೌಕರ್ಯ ಕೇಂದ್ರ ರಸ್ತೆ (Central Road Infrastructure Fund), ಯೋಜನೆ ಅಡಿ ಅಂದಾಜು ರೂ 86.40 ಕೋಟಿ ಅನುದಾನದಲ್ಲಿ ಸುಧಾರಣೆ ಕೈಗೊಳ್ಳಲು ಅವಶ್ಯಕತೆ ಇರುವುದನ್ನು ಗುರುತಿಸಿದ್ದು, ಇವುಗಳ ಸುಧಾರಣೆ ಮಾಡುವ ಕುರಿತು ಅಗತ್ಯ ಅನುಮೋದನೆ ನೀಡುವ ಬಗ್ಗೆ ಪ್ರಸ್ತಾಪ.
  • ಗೋಕಾಕ್ ಯರಗಟ್ಟಿ ಹಾಗೂ ಸವದತ್ತಿ ಮಾರ್ಗವಾಗಿ ಧಾರವಾಡದ ವರೆಗೆ ಈಗಿರುವ ದ್ವಿಪಥ ರಸ್ತೆಯನ್ನು ಚರ್ತುಪಥ ರಸ್ತೆಯನ್ನಾಗಿ ಪರಿವರ್ತಿಸುವುದು ಅವಶ್ಯಕ. ಈ ರಸ್ತೆಯು ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮದೇವಿಯ ದೇವಸ್ಥಾನಕ್ಕೆ ತೆರಳಲು ಏಕೈಕ ಮಾರ್ಗವಾಗಿದ್ದು ವಾಹನ ದಟ್ಟಣೆಯಿಂದ ಕೂಡಿರುತ್ತದೆ.
  • ವಾಹನ ಅಪಘಾತ ಸರ್ವೆ ಸಾಮಾನ್ಯವಾಗಿದ್ದು, ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸಂಚರಿಸುವ ಹಿನ್ನಲೆಯಲ್ಲಿ ಈ ಮಾರ್ಗವನ್ನು ಚರ್ತುಪಥವನ್ನಾಗಿ ಮಾಡುವುದು ತುಂಬಾ ಅವಶ್ಯಕತೆ ಇರುವ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ.
  • ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದಿಂದ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ (Vehicle Tracking System) ಬಲಪಡಿಸುವ ಯೋಜನೆಯಡಿ ಕೇಂದ್ರ ಸರಕಾರದಿಂದ ಸುಮಾರು ರೂ 25.39 ಕೋಟಿ ಅನುದಾನವನ್ನು ಒದಗಿಸುವ ಬಗ್ಗೆ ಪ್ರಸ್ತಾವನೆ ರಾಜ್ಯ ಸರಕಾರದಿಂದ ಕೇಂದ್ರ ಸಚಿವಾಲಯಕ್ಕೆ ಕಳುಹಿಸಿದ್ದು, ಇದಕ್ಕೆ ಅನುಮೋದನೆ ನೀಡಲು ಮನವಿ.
  • ಸಂಸ್ಥೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ದೃಷ್ಟಿಕೊನದಿಂದ ಸುಮಾರು 1000 ಬಸ್ಸುಗಳಲ್ಲಿ, ಬಸ್ ಡಿಪೋಗಳಲ್ಲಿ, ಬಸ್ ನಿಲ್ದಾಣದಲ್ಲಿ, ವಿಭಾಗೀಯ ಕಚೇರಿಯಲ್ಲಿ ಕೇಂದ್ರ ಸರಕಾರದ ನಿರ್ಭಯ ನಿಧಿ ಯೋಜನೆಯಡಿ ಕ್ಯಾಮರಾ ಅಳವಡಿಸುವ ಕುರಿತಾದ ಸುಮಾರು ರೂ 59.13 ಕೋಟಿ ಅನುದಾನದ ಯೋಜನೆ/ ಪ್ರಸ್ತಾವನೆ ತಮ್ಮ ಸಚಿವಾಲಯಕ್ಕೆ ಬಂದಿರುವ ಬಗ್ಗೆ ತಿಳಿಸಿ, ನಮ್ಮ ಮತಕ್ಷೇತ್ರದ ಮಹಿಳೆಯ ಸುರಕ್ಷತಾ ಹಿತಾದೃಷ್ಠಿಯಿಂದ ಶೀಘ್ರ ಅನುಮೋದನೆಗೆ ಮನವಿ.

ಎಲ್ಲಾ ವಿಷಯಗಳನ್ನು ಹಾಗೂ ಸಲ್ಲಿಕೆ ಮಾಡಿದ ಮನವಿಗಳನ್ನು ಅವಲೋಕಿಸಿದ ನಿತಿನ್ ಗಡ್ಕರಿ ಅವರು ಈ ಕುರಿತು ಅವಲೋಕಿಸುವುದಾಗಿ ಹೇಳಿದ್ದಾರೆ ಎಂದು ಜಗದೀಶ್ ಶೆಟ್ಟರ್ ಪೋಸ್ಟ್ ಹಾಕಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular