HomeBusinessಚಿನ್ನ ಪ್ರಿಯರಿಗೆ ಬಿಗ್ ರಿಲೀಫ್: ಯುದ್ಧದ ಆತಂಕದ ನಡುವೆಯೂ ಚಿನ್ನದ ಬೆಲೆಯಲ್ಲಿ ₹9,800 ಭಾರಿ ಇಳಿಕೆ

ಚಿನ್ನ ಪ್ರಿಯರಿಗೆ ಬಿಗ್ ರಿಲೀಫ್: ಯುದ್ಧದ ಆತಂಕದ ನಡುವೆಯೂ ಚಿನ್ನದ ಬೆಲೆಯಲ್ಲಿ ₹9,800 ಭಾರಿ ಇಳಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮನೆಮಾಡಿದ್ದರೂ, ಭಾರತೀಯ ಚಿನ್ನದ ಮಾರುಕಟ್ಟೆಯಿಂದ ಹೂಡಿಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಈಗ ಗೋಲ್ಡನ್ ಟೈಮ್ ಶುರುವಾಗಿದೆ.ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಎರಡೂ ವಿಭಾಗಗಳಲ್ಲಿ ಬೆಲೆ ಇಳಿಕೆಯಾಗಿದೆ. ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಹೊಸ್ತಿಲಲ್ಲಿರುವ ಜನಸಾಮಾನ್ಯರಿಗೆ ಈ ಬೆಲೆ ಇಳಿಕೆ ತುಸು ನೆಮ್ಮದಿ ತಂದಿದೆ.

ಆಭರಣ ಪ್ರಿಯರ ನೆಚ್ಚಿನ ಈ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡಿದೆ. ಶುದ್ಧ ಚಿನ್ನ ಅಥವಾ ಹೂಡಿಕೆ ಮಾಡುವವರಿಗೆ ಇಂದು ದರದಲ್ಲಿ ರಿಯಾಯಿತಿ ಸಿಕ್ಕಂತಾಗಿದೆ.ಮಾರುಕಟ್ಟೆಯ ಏರಿಳಿತದ ನಡುವೆಯೂ ಈ ಇಳಿಕೆ ತಾತ್ಕಾಲಿಕವೇ ಅಥವಾ ಇನ್ನು ಕುಸಿಯಲಿದೆಯೇ ಎಂಬ ಕುತೂಹಲ ಗ್ರಾಹಕರಲ್ಲಿದೆ. ಆದರೆ ತಜ್ಞರ ಪ್ರಕಾರ, ಹೂಡಿಕೆ ಮಾಡಲು ಇದು ಸೂಕ್ತ ಸಮಯ

ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ ಪಟ್ಟಿ

1 ಗ್ರಾಂ ಚಿನ್ನ: ₹16,124

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

8 ಗ್ರಾಂ ಚಿನ್ನ ₹1,28,992

10 ಗ್ರಾಂ ಚಿನ್ನ:₹1,61,240

100 ಗ್ರಾಂ ಚಿನ್ನ:₹16,12,400

ಬೆಳ್ಳಿ ದರ:

1 ಗ್ರಾಂ ಬೆಳ್ಳಿ:₹280

10 ಗ್ರಾಂ ಬೆಳ್ಳಿ:₹2,800

100 ಗ್ರಾಂ ಬೆಳ್ಳಿ:₹28,000

1 ಕಿಲೋಗ್ರಾಂ ಬೆಳ್ಳಿ:₹2,80,000

ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಬೆಳ್ಳಿಯ ದರವು ಮಾತ್ರ ನಿನ್ನೆಯ ದರದಲ್ಲೇ ಮುಂದುವರಿದಿದೆ

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ 24K ಚಿನ್ನದ ಬೆಲೆ (1 ಗ್ರಾಂ)

ನಗರಗಳು 24 ಕ್ಯಾರೆಟ್ ಇಂದಿನ ದರ (1 ಗ್ರಾಂ)

ಚೆನ್ನೈ ₹16,256

ದೆಹಲಿ ₹16,139

ಅಹಮದಾಬಾದ್ ₹16,129

ವಡೋದರಾ ₹16,129

ಬೆಂಗಳೂರು ₹16,124

ಮುಂಬೈ ₹16,124

ಕೋಲ್ಕತ್ತಾ ₹16,124

ಹೈದರಾಬಾದ್ ₹16,124

ಕೇರಳ ₹16,124

ಪುಣೆ ₹16,124

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular