HomeLatest NewsALERT : ಕರ್ನಾಟಕದಲ್ಲಿ 'ಡಿಜಿಟಲ್ ಅರೆಸ್ಟ್' ಮಾಯಜಾಲ : 3 ವರ್ಷದಲ್ಲಿ ಕನ್ನಡಿಗರ ₹469 ಕೋಟಿ...

ALERT : ಕರ್ನಾಟಕದಲ್ಲಿ ‘ಡಿಜಿಟಲ್ ಅರೆಸ್ಟ್’ ಮಾಯಜಾಲ : 3 ವರ್ಷದಲ್ಲಿ ಕನ್ನಡಿಗರ ₹469 ಕೋಟಿ ಹಣ ಲೂಟಿ !

ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಬಲವಾಗುತ್ತಿದ್ದು, ಅಮಾಯಕ ಜನರನ್ನು ‘ಡಿಜಿಟಲ್ ಅರೆಸ್ಟ್’ (Digital Arrest) ಎಂಬ ಮಾಯಾಜಾಲಕ್ಕೆ ಸಿಲುಕಿಸಿ ಕೋಟ್ಯಂತರ ರೂಪಾಯಿ ದೋಚಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಾದ್ಯಂತ ಕೇವಲ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲೇ ಸಾರ್ವಜನಿಕರು ಬರೋಬ್ಬರಿ 469 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಹೌದು.   ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಆತಂಕಕಾರಿ ರೀತಿಯಲ್ಲಿ ಏರಿಕೆಯಾಗುತ್ತಿವೆ. ಅದರಲ್ಲೂ ‘ಡಿಜಿಟಲ್ ಅರೆಸ್ಟ್’ (Digital Arrest) ಎಂಬ ಹೊಸ ಮಾದರಿಯ ವಂಚನೆಯ ಜಾಲಕ್ಕೆ ಬಿದ್ದು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಜನತೆ ಸುಮಾರು 468 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಗೃಹ ಇಲಾಖೆಯ ವರದಿ ತಿಳಿಸಿದೆ.ಪೊಲೀಸರು ಮತ್ತು ಸೈಬರ್ ತಜ್ಞರು ಎಷ್ಟೇ ಜಾಗೃತಿ ಮೂಡಿಸಿದರೂ, ವಿದ್ಯಾವಂತರು ಹಾಗೂ ನಿವೃತ್ತ ಅಧಿಕಾರಿಗಳೇ ಈ ವಂಚಕರ ಪ್ರಮುಖ ಗುರಿಯಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.

ವರ್ಷವಾರು ದಾಖಲಾದ ಪ್ರಕರಣಗಳು ಮತ್ತು ಹಣದ ವಿವರ:

ವರದಿಯ ಪ್ರಕಾರ, 2023ರಿಂದ 2026ರ ಫೆಬ್ರವರಿವರೆಗೆ ಒಟ್ಟು 1,695 ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • 2023: 196 ಪ್ರಕರಣಗಳು – ಕಳೆದುಕೊಂಡ ಹಣ ₹22,52,38,078
  • 2024: 1,129 ಪ್ರಕರಣಗಳು – ಕಳೆದುಕೊಂಡ ಹಣ ₹219,42,53,299
  • 2025: 345 ಪ್ರಕರಣಗಳು – ಕಳೆದುಕೊಂಡ ಹಣ ₹215,14,04,655
  • 2026 (ಫೆಬ್ರವರಿವರೆಗೆ): 25 ಪ್ರಕರಣಗಳು – ಕಳೆದುಕೊಂಡ ಹಣ ₹11,57,85,710

ಏನಿದು ಡಿಜಿಟಲ್ ಅರೆಸ್ಟ್?

ವಂಚಕರು ಸ್ಕೈಪ್ ಅಥವಾ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಪೊಲೀಸ್ ಅಧಿಕಾರಿಗಳು, ಸಿಬಿಐ ಅಥವಾ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳಂತೆ ನಟಿಸುತ್ತಾರೆ. ನಿಮ್ಮ ಹೆಸರಿನಲ್ಲಿ ಬಂದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಅಥವಾ ಅಕ್ರಮ ವಸ್ತುಗಳಿವೆ ಎಂದು ಬೆದರಿಸುತ್ತಾರೆ. ವಿಚಾರಣೆಯ ಹೆಸರಿನಲ್ಲಿ ನಿಮ್ಮನ್ನು ವಿಡಿಯೋ ಕಾಲ್‌ನಲ್ಲೇ ಇರುವಂತೆ ಒತ್ತಾಯಿಸಿ (ಡಿಜಿಟಲ್ ಅರೆಸ್ಟ್), ಪ್ರಕರಣದಿಂದ ಮುಕ್ತಗೊಳಿಸಲು ಲಕ್ಷಾಂತರ ರೂಪಾಯಿ ಬೇಡಿಕೆಯಿಡುತ್ತಾರೆ.

ಸಾರ್ವಜನಿಕರಿಗೆ ಎಚ್ಚರಿಕೆ:

  • ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಬಂಧಿಸುವುದಿಲ್ಲ ಅಥವಾ ಹಣಕ್ಕೆ ಬೇಡಿಕೆಯಿಡುವುದಿಲ್ಲ.
  • ಅಪರಿಚಿತ ವಿಡಿಯೋ ಕರೆಗಳಿಗೆ ಉತ್ತರಿಸಬೇಡಿ.
  • ಒಂದೊಮ್ಮೆ ವಂಚನೆಗೊಳಗಾದರೆ ತಕ್ಷಣ ಸೈಬರ್ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿ ಅಥವಾ www.cybercrime.gov.in ಮೂಲಕ ದೂರು ದಾಖಲಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular