HomeLatest Newsಮಕ್ಕಳ ಕೈ ಸೇರಲಿದೆ ವಾಟ್ಸಾಪ್ 13 ವರ್ಷದೊಳಗಿನವರಿಗಾಗಿ ಬಂತು ಹೊಸ ಫೀಚರ್: ಫುಲ್ ಕಂಟ್ರೋಲ್ ಪೋಷಕರ...

ಮಕ್ಕಳ ಕೈ ಸೇರಲಿದೆ ವಾಟ್ಸಾಪ್ 13 ವರ್ಷದೊಳಗಿನವರಿಗಾಗಿ ಬಂತು ಹೊಸ ಫೀಚರ್: ಫುಲ್ ಕಂಟ್ರೋಲ್ ಪೋಷಕರ ಕೈಯಲ್ಲೇ

ನವದೆಹಲಿ: ಸ್ಮಾರ್ಟ್‌ಫೋನ್ ಯುಗದಲ್ಲಿ ಮಕ್ಕಳನ್ನು ಡಿಜಿಟಲ್ ಲೋಕದಿಂದ ದೂರವಿಡುವುದು ಪೋಷಕರಿಗೆ ದೊಡ್ಡ ತಲೆನೋವಾಗಿತ್ತು. ಆದರೆ ಈಗ ಮೆಟಾ (Meta) ಒಡೆತನದ ವಾಟ್ಸಾಪ್ ಇದಕ್ಕೆ ಸೂಪರ್ ಪರಿಹಾರ ತಂದಿದೆ. 13 ವರ್ಷದೊಳಗಿನ ಮಕ್ಕಳಿಗಾಗಿ ಪ್ರತ್ಯೇಕ ಪೇರೆಂಟ್-ಮ್ಯಾನೇಜ್ಡ್ (Parent-managed accounts) ಫೀಚರ್ ಬಿಡುಗಡೆ ಮಾಡುವ ಮೂಲಕ ಮಕ್ಕಳ ಸುರಕ್ಷತೆಗೆ ಹೊಸ ಭಾಷ್ಯ ಬರೆದಿದೆ.

ಪೋಷಕರೇ ಈಗ ಅಡ್ಮಿನ್: ಏನಿದು ಹೊಸ ಸಿಸ್ಟಮ್?

ವಾಟ್ಸಾಪ್ ಬಳಸಲು ಅಧಿಕೃತವಾಗಿ 13 ವರ್ಷ ತುಂಬಿರಬೇಕು ಎಂಬ ನಿಯಮವಿದ್ದರೂ, ಅನೇಕ ಮಕ್ಕಳು ಈಗಾಗಲೇ ಅಕೌಂಟ್ ಹೊಂದಿದ್ದಾರೆ. ಇದನ್ನೇ ಮನಗಂಡು ವಾಟ್ಸಾಪ್, ಪೋಷಕರಿಗೆ ಸಂಪೂರ್ಣ ನಿಯಂತ್ರಣ ನೀಡುವ ವ್ಯವಸ್ಥೆ ತಂದಿದೆ.

QR ಕೋಡ್ ಕನೆಕ್ಷನ್: ಪೋಷಕರು ತಮ್ಮ ಫೋನ್‌ನಿಂದ ಮಗುವಿನ ಡಿವೈಸ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಎರಡೂ ಅಕೌಂಟ್‌ಗಳು ಲಿಂಕ್ ಆಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿನ್ ಪ್ರೊಟೆಕ್ಷನ್: 6 ಅಂಕಿಗಳ ವಿಶೇಷ ಪೇರೆಂಟ್ ಪಿನ್ ಮೂಲಕ ಮಗುವಿನ ಪ್ರೈವಸಿ ಸೆಟ್ಟಿಂಗ್ಸ್ ಬದಲಿಸಬಹುದು. ಪೋಷಕರ ಅನುಮತಿಯಿಲ್ಲದೆ ಮಕ್ಕಳು ಇದನ್ನು ಮುಟ್ಟಲು ಸಾಧ್ಯವಿಲ್ಲ

ಈ ಹೊಸ ಫೀಚರ್ ಪೋಷಕರಿಗೆ ‘ರಿಮೋಟ್ ಕಂಟ್ರೋಲ್’ ನೀಡಿದಂತಿದೆ:

ಕಾಂಟ್ಯಾಕ್ಟ್ ಕಂಟ್ರೋಲ್: ಮಗು ಯಾರಿಗೆ ಮೆಸೇಜ್ ಮಾಡಬೇಕು ಅಥವಾ ಯಾರಿಂದ ಕರೆ ಸ್ವೀಕರಿಸಬೇಕು ಎಂಬುದನ್ನು ಪೋಷಕರೇ ಸೆಟ್ ಮಾಡಬಹುದು.

ಗ್ರೂಪ್ ಅಲರ್ಟ್: ಹೊಸ ಗ್ರೂಪ್ ಸೇರಬೇಕಾದರೆ ಅಥವಾ ಹೊಸಬರು ಮೆಸೇಜ್ ಮಾಡಿದರೆ ತಕ್ಷಣ ಪೋಷಕರಿಗೆ ನೋಟಿಫಿಕೇಶನ್ ಹೋಗುತ್ತದೆ.

ಹೆಚ್ಚುವರಿ ಕಣ್ಗಾವಲು: ಮಗು ತನ್ನ ಹೆಸರು, ಪ್ರೊಫೈಲ್ ಪಿಕ್ಚರ್ ಬದಲಿಸಿದರೆ ಅಥವಾ ಮೆಸೇಜ್ ಡಿಲೀಟ್ ಮಾಡಿದರೆ ಪೋಷಕರಿಗೆ ಆ ಬಗ್ಗೆ ಅಪ್‌ಡೇಟ್ ಸಿಗುತ್ತದೆ.

ಜಾಹೀರಾತು ಮುಕ್ತ ಮತ್ತು ಎನ್‌ಕ್ರಿಪ್ಟೆಡ್

ಮಕ್ಕಳ ಈ ಅಕೌಂಟ್‌ಗಳಲ್ಲಿ ಕಿರಿಕಿರಿ ಉಂಟುಮಾಡುವ ಯಾವುದೇ ಜಾಹೀರಾತುಗಳು (Ads) ಇರುವುದಿಲ್ಲ. ವಿಶೇಷವೆಂದರೆ, ಪೋಷಕರು ಚಟುವಟಿಕೆ ಗಮನಿಸಬಹುದಾದರೂ ಮಗುವಿನ ಸಂಭಾಷಣೆಗಳು ‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ಅಡಿಯಲ್ಲೇ ಇರುತ್ತವೆ. ಅಂದರೆ ನಿಮ್ಮ ಮೆಸೇಜ್ ಸುರಕ್ಷಿತ

13 ವರ್ಷ ತುಂಬಿದ ಮೇಲೆ ಏನಾಗುತ್ತೆ?

ಮಗುವಿಗೆ 13 ವರ್ಷ ತುಂಬಿದಾಗ ಸಾಮಾನ್ಯ ಖಾತೆಗೆ ಅಪ್‌ಗ್ರೇಡ್ ಆಗಲು ವಾಟ್ಸಾಪ್ ಸೂಚನೆ ನೀಡುತ್ತದೆ. ಆದರೆ ಪೋಷಕರು ಬಯಸಿದರೆ ಇನ್ನೂ 12 ತಿಂಗಳವರೆಗೆ ಅಂದರೆ 14 ವರ್ಷದವರೆಗೂ ಈ ಉಸ್ತುವಾರಿಯನ್ನು ಮುಂದುವರಿಸಬಹುದು

ಭಾರತದ ಹೊಸ ಡಿಜಿಟಲ್ ದತ್ತಾಂಶ ಸಂರಕ್ಷಣಾ ನಿಯಮ (DPDP 2025) ಜಾರಿಯಾಗುತ್ತಿರುವ ಬೆನ್ನಲ್ಲೇ ಈ ಫೀಚರ್ ಬಂದಿರುವುದು ಮಹತ್ವದ ಬೆಳವಣಿಗೆ. ಆದರೆ, ಪೋಷಕರ ಗುರುತಿನ ದೃಢೀಕರಣವನ್ನು ವಾಟ್ಸಾಪ್ ಎಷ್ಟು ಕಟ್ಟುನಿಟ್ಟಾಗಿ ಮಾಡುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular