HomeLatest Newsಕನ್ನಡಿಗನ ಸಾಧನೆಗೆ ಒಲಿದ ಮಹಾ ಗೌರವ ಬಿಸಿಸಿಐನಿಂದ ದಿ ವಾಲ್ ರಾಹುಲ್ ದ್ರಾವಿಡ್‌ಗೆ...

ಕನ್ನಡಿಗನ ಸಾಧನೆಗೆ ಒಲಿದ ಮಹಾ ಗೌರವ ಬಿಸಿಸಿಐನಿಂದ ದಿ ವಾಲ್ ರಾಹುಲ್ ದ್ರಾವಿಡ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ಘೋಷಣೆ

ನವದೆಹಲಿ: ಭಾರತೀಯ ಕ್ರಿಕೆಟ್‌ನ ಅಧಿಪತಿ ಬಿಸಿಸಿಐ (BCCI), ತನ್ನ ವಾರ್ಷಿಕ ನಮನ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಮಾರ್ಚ್ 15ರಂದು ದೆಹಲಿಯಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡಿಗ, ಕ್ರಿಕೆಟ್ ಲೋಕದ ಅಜಾತಶತ್ರು ರಾಹುಲ್ ದ್ರಾವಿಡ್ ಅವರಿಗೆ ಪ್ರತಿಷ್ಠಿತ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ದ್ರಾವಿಡ್: ಆಟಗಾರನಾಗಿ ವಾಲ್ ಕೋಚ್ ಆಗಿ ಚಾಂಪಿಯನ್

ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ಗೋಡೆಯಾಗಿದ್ದ ದ್ರಾವಿಡ್, ಕೋಚ್ ಆಗಿಯೂ ಭಾರತಕ್ಕೆ ಬಂಗಾರದ ಕ್ಷಣಗಳನ್ನು ತಂದುಕೊಟ್ಟಿದ್ದಾರೆ.ಇವರ ಮಾರ್ಗದರ್ಶನದಲ್ಲಿ ಭಾರತ 2018ರ ಅಂಡರ್-19 ವಿಶ್ವಕಪ್ ಮತ್ತು 2024ರ ಟಿ20 ವಿಶ್ವಕಪ್ ಜಯಿಸಿದೆ.ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ (13,288) ಗಳಿಸಿದ ಎರಡನೇ ದಿಗ್ಗಜ ಇವರು.

ಮಹಿಳಾ ಕ್ರಿಕೆಟ್‌ನ ಐಕಾನ್ ಮಾಜಿ ನಾಯಕಿ ಮಿಥಾಲಿ ರಾಜ್ ಅವರಿಗೂ ಈ ಬಾರಿ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಭಾರತೀಯ ಮಹಿಳಾ ಕ್ರಿಕೆಟ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಮಿಥಾಲಿ ಅವರ ಸಾಧನೆಗೆ ಈ ಪ್ರಶಸ್ತಿ ಕಿರೀಟ ಪ್ರಾಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶುಭಮನ್ ಗಿಲ್ – ವರ್ಷದ ಅತ್ಯುತ್ತಮ ಕ್ರಿಕೆಟಿಗ

ಯುವ ಆಟಗಾರ, ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಈ ಬಾರಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಕಳೆದ ವರ್ಷ ಮೂರು ಸ್ವರೂಪಗಳಲ್ಲಿ ಭರ್ಜರಿ 1764 ರನ್ ಬಾರಿಸಿರುವ ಗಿಲ್ ಇಂಗ್ಲೆಂಡ್ ಪ್ರವಾಸದಲ್ಲಿ 4 ಶತಕ ಸಿಡಿಸಿ ಮಿಂಚಿದ್ದರು.ಇವರ ನಾಯಕತ್ವದಲ್ಲಿ ಭಾರತ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವುದು ವಿಶೇಷ.

ಟೀಂ ಇಂಡಿಯಾಗೆ 131 ಕೋಟಿ ರೂ. ಬಹುಮಾನ

2026ರ ಟಿ20 ವಿಶ್ವಕಪ್ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಈ ಸಮಾರಂಭದಲ್ಲಿ 131 ಕೋಟಿ ರೂ. ಬಹುಮಾನ ವಿತರಿಸಿ ಸನ್ಮಾನಿಸಲಿದೆ. ಈ ಸಂಭ್ರಮದಲ್ಲಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡ ಮತ್ತು ಅಂಡರ್-19 ತಂಡಗಳೂ ಭಾಗಿಯಾಗಲಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular