ಮಡಿಕೇರಿ : ಕುಟುಂಬದ ಕಲಹ ಮತ್ತು ಕುಡಿತದ ನಶೆ ಇಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಕೊಡಗಿನ ಭಾಗಮಂಡಲ ವ್ಯಾಪ್ತಿಯಲ್ಲಿ, ತನ್ನ ಅಣ್ಣ ಮತ್ತು ತಂಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಪಾಪಿ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು.ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅಣ್ಣ ಮತ್ತು ತಂಗಿಯನ್ನೇ ಕಡಿದು ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಮಾರ್ಚ್ 11ರಂದು ನಡೆದಿದೆ.
ಮೃತರನ್ನು ಅಡಿಯರ ಯಶೋಧ (45 ವರ್ಷ) ಮತ್ತು ಕುಂಜಿರಾಮ (47 ವರ್ಷ) ಎಂದು ಗುರುತಿಸಲಾಗಿದೆ . ಆರೋಪಿ ಚಂದು (65 ವರ್ಷ) ಎಂಬಾರ ಈ ಕೃತ್ಯ ಎಸಗಿದ್ದಾನೆ.
ಆರೋಪಿ ಚಂದು ಕುಡಿದ ಮತ್ತಿನಲ್ಲಿ ತನ್ನ ಅಣ್ಣ ಕುಂಜಿರಾಮ ಮತ್ತು ತಂಗಿ ಯಶೋಧ ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಶಂಕಿಸಲಾಗುತ್ತಿದೆ.ಈತ ಮೃತರ ಸೋದರ ಸಂಬಂಧಿ ಎಂದು ಹೇಳಳಲಾಗುತ್ತಿದೆ.
ಕೊಲೆ ನಡೆದ ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಬಿಂದುಮಣಿ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿ ಚಂದುನನ್ನು ಪೊಲೀಸರು ಬಂಧಿಸಿದ್ದಾರೆ. ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

