HomeLatest Newsಬೊಜ್ಜು ಕರಗಿಸಲು ಇಲ್ಲಿದೆ ಸುಲಭ ದಾರಿ: ಸಂಜೆ 5ರ ನಂತರ ಈ ಒಂದು ನಿಯಮ ಪಾಲಿಸಿದ್ರೆ...

ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ದಾರಿ: ಸಂಜೆ 5ರ ನಂತರ ಈ ಒಂದು ನಿಯಮ ಪಾಲಿಸಿದ್ರೆ ಸಾಕು, ನಿಮ್ಮ ತೂಕ 100% ಇಳಿಯುತ್ತೆ

ಜಿಮ್‌ಗೆ ಹೋಗಿ ಬೆವರಿಳಿಸಿದರೂ, ನೆಚ್ಚಿನ ಆಹಾರ ಬಿಟ್ಟು ಡಯಟ್ ಮಾಡಿದರೂ ತೂಕ ಇಳಿಯುತ್ತಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಹಾಗಿದ್ದರೆ ಸಮಸ್ಯೆ ನೀವು ಏನು ತಿನ್ನುತ್ತೀರಿ ಎನ್ನುವುದಕ್ಕಿಂತ ಯಾವಾಗ ತಿನ್ನುತ್ತೀರಿ ಎನ್ನುವುದರಲ್ಲಿ ಇರಬಹುದು ಪ್ರಸ್ತುತ ಆರೋಗ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿರುವ ಸಮಯ ನಿರ್ಬಂಧಿತ ಆಹಾರ ಪದ್ಧತಿ (Time-Restricted Eating) ಈಗ ತೂಕ ಇಳಿಕೆಗೆ ಹೊಸ ಆಯುಧವಾಗಿ ಹೊರಹೊಮ್ಮಿದೆ.

ಏನಿದು 16:8 ಸೂತ್ರ?

ನಮಗೆ ಹಸಿವಾದಾಗಲೆಲ್ಲಾ ತಿನ್ನುವ ಅಭ್ಯಾಸವೇ ನಮ್ಮ ಬೊಜ್ಜಿಗೆ ಮುಖ್ಯ ಕಾರಣ. ಆದರೆ ಈ ಹೊಸ ಪದ್ಧತಿಯಲ್ಲಿ ದಿನದ 24 ಗಂಟೆಗಳಲ್ಲಿ ಕೇವಲ 8 ಗಂಟೆ ಮಾತ್ರ ಆಹಾರ ಸೇವನೆಗೆ ಅವಕಾಶವಿರುತ್ತದೆ. ಉಳಿದ 16 ಗಂಟೆ ದೇಹಕ್ಕೆ ಕಂಪ್ಲೀಟ್ ರೆಸ್ಟ್

ಉದಾಹರಣೆಗೆ: ನೀವು ಬೆಳಗ್ಗೆ 9 ಗಂಟೆಗೆ ಮೊದಲ ಊಟ ಮಾಡಿದರೆ, ಸಂಜೆ 5 ಗಂಟೆಯೊಳಗೆ ನಿಮ್ಮ ದಿನದ ಕೊನೆಯ ತುತ್ತು ಮುಗಿದಿರಬೇಕು. ಸಂಜೆ 5ರ ನಂತರ ಮರುದಿನ ಬೆಳಗ್ಗೆಯವರೆಗೆ ನೀರು ಅಥವಾ ಎಳನೀರು ಹೊರತುಪಡಿಸಿ ಬೇರೆ ಯಾವುದೇ ಘನ ಆಹಾರ ಸೇವಿಸುವಂತಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಹದೊಳಗೆ ನಡೆಯುವ ಫ್ಯಾಟ್ ಬರ್ನಿಂಗ್ ಮ್ಯಾಜಿಕ್:

ನಾವು ನಿರಂತರವಾಗಿ ತಿನ್ನುತ್ತಿದ್ದರೆ ದೇಹಕ್ಕೆ ಜೀರ್ಣಕ್ರಿಯೆಯಿಂದ ವಿಶ್ರಾಂತಿಯೇ ಸಿಗುವುದಿಲ್ಲ. ನಾವು ಆಹಾರ ಸೇವಿಸಿದಾಗ ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ, ಇದು ಕೊಬ್ಬನ್ನು ಸಂಗ್ರಹಿಸಲು ದೇಹಕ್ಕೆ ಸೂಚನೆ ನೀಡುತ್ತದೆ. ನಾವು 16 ಗಂಟೆ ಉಪವಾಸವಿದ್ದಾಗ ಇನ್ಸುಲಿನ್ ಮಟ್ಟ ಗಣನೀಯವಾಗಿ ಇಳಿಯುತ್ತದೆ. ಇದರಿಂದ ಸಂಗ್ರಹವಾಗಿರುವ ಕೊಬ್ಬು ಶಕ್ತಿಯಾಗಿ ಬಳಕೆಯಾಗಲು ಶುರುವಾಗುತ್ತದೆ.

ಬರೀ ತೂಕ ಇಳಿಕೆಯಲ್ಲ, ಲಾಭಗಳು ಹತ್ತು-ಹಲವು

ಮಧುಮೇಹ ನಿಯಂತ್ರಣ: ಟೈಪ್ 2 ಮಧುಮೇಹ ಇರುವವರಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ರಾಮಬಾಣ.

ಹೃದಯದ ಆರೋಗ್ಯ: ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯದ ಕಾರ್ಯಕ್ಷಮತೆ ಹೆಚ್ಚುತ್ತದೆ.

ಗಾಢ ನಿದ್ರೆ: ರಾತ್ರಿ ಬೇಗ ಊಟ ಮುಗಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗಿ, ಪೀಸ್‌ಫುಲ್ ನಿದ್ದೆ ನಿಮ್ಮದಾಗುತ್ತದೆ.

ಹೈಡ್ರೇಶನ್: 16 ಗಂಟೆ ಉಪವಾಸದ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ. ನಿರ್ಜಲೀಕರಣವಾಗದಂತೆ ಎಚ್ಚರವಹಿಸಿ.

8 ಗಂಟೆಗಳ ಕಾಲ ತಿನ್ನಲು ಅವಕಾಶವಿದೆ ಎಂದು ಜಂಕ್ ಫುಡ್ ಅಥವಾ ಅತಿಯಾದ ಸಿಹಿ ಪದಾರ್ಥಗಳನ್ನು ತಿನ್ನಬೇಡಿ. ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರಕ್ಕೇ ಆದ್ಯತೆ ನೀಡಿ.

ಯಾರು ದೂರವಿರಬೇಕು?

ಈ ಪದ್ಧತಿ ಎಲ್ಲರಿಗೂ ಒಪ್ಪುವಂಥದ್ದಲ್ಲ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಸಣ್ಣ ಮಕ್ಕಳು ಮತ್ತು ತೀವ್ರ ಅನಾರೋಗ್ಯ ಪೀಡಿತರು ವೈದ್ಯರ ಸಲಹೆ ಇಲ್ಲದೆ ಇದನ್ನು ಅನುಸರಿಸಬೇಡಿ. ಕ್ರೀಡಾಪಟುಗಳು ಕೂಡ ತಮ್ಮ ಕೋಚ್ ಮಾರ್ಗದರ್ಶನ ಪಡೆಯುವುದು ಉತ್ತಮ.

ಆರಂಭಿಸುವವರಿಗೆ ಸಲಹೆ:
ಒಂದೇ ದಿನದಲ್ಲಿ 16 ಗಂಟೆ ಉಪವಾಸ ಮಾಡುವುದು ಕಷ್ಟವಾಗಬಹುದು. ಮೊದಲು 12 ಗಂಟೆ ಫಾಸ್ಟಿಂಗ್‌ನಿಂದ ಶುರು ಮಾಡಿ (ಉದಾಹರಣೆಗೆ ರಾತ್ರಿ 8 ರಿಂದ ಬೆಳಗ್ಗೆ 8 ರವರೆಗೆ). ವಾರಕ್ಕೊಮ್ಮೆ ಸಮಯವನ್ನು ಹೆಚ್ಚಿಸುತ್ತಾ 16 ಗಂಟೆಗೆ ತಲುಪಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular