ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಚಿಮುಲ್) ಸಿಹಿ ಸುದ್ದಿ ನೀಡಿದೆ.
ಲೀಟರ್ ಹಾಲಿಗೆ 50 ಪೈಸೆ ಹೆಚ್ಚಳ ಮಾಡಿ ಚಿಮುಲ್ ನಿಂದ ನಿರ್ಣಯ ಕೈಗೊಳ್ಳಲಾಗಿದೆ. ಹೊಸ ವರ್ಷಕ್ಕೆ ಜನವರಿ 1ರಂದು ಲೀಟರ್ ಗೆ ಒಂದು ರೂಪಾಯಿ ಹೆಚ್ಚಳ ಮಾಡಿದ್ದ ಚಿಮುಲ್ ಈಗ ಮತ್ತೆ 50 ಪೈಸೆಯಷ್ಟು ಹೆಚ್ಚಳ ಮಾಡಿದೆ.
ಇದರಿಂದ ಹೈನುಗಾರರಿಗೆ ಪ್ರತಿ ಲೀಟರ್ ಗೆ 36.40 ರೂಪಾಯಿ ಸಿಗಲಿದೆ. ಮೇ ಅಂತ್ಯದವರೆಗೂ ಈ 50 ಹೆಚ್ಚಳ ಪೈಸೆ ಹೆಚ್ಚಳ ಇರಲಿದ್ದು, ಇದರಿಂದ ಹಾಲು ಉತ್ಪಾದಕ ರೈತರಿಗೆ ಲಾಭವಾಗಲಿದೆ. ಚಿಮುಲ್ ಲಾಭಾಂಶ ನೋಡಿಕೊಂಡು ಹಾಲು ಉತ್ಪಾದಕರಿಗೆ ದರ ಹೆಚ್ಚಳ ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

