ಡೆಹ್ರಾಡೂನ್: ದೆಹಲಿಯಿಂದ ಉತ್ತರಾಖಂಡದ ನೈನಿತಾಲ್ಗೆ ಪ್ರವಾಸಕ್ಕೆಂದು ಬಂದಿದ್ದ ಯುವತಿ ಮೇಲೆ ಟ್ಯಾಕ್ಸಿ ಡ್ರೈವರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ತಡರಾತ್ರಿ ಮಹಿಳೆ ನೈನಿತಾಲ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆ ಹೋಗಬೇಕಿದ್ದ ಪ್ರದೇಶದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಬಲ್ದಿಯಾಖಾನ್ ಬಳಿ, ಟ್ಯಾಕ್ಸಿ ಚಾಲಕನೊಬ್ಬ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮಹಿಳೆ ವಿರೋಧಿಸಿದಾಗ, ಚಾಲಕ ಆಕೆಯ ವಸ್ತುಗಳು ಮತ್ತು ಮೊಬೈಲ್ ಫೋನ್ನೊಂದಿಗೆ ಪರಾರಿಯಾಗಿದ್ದಾನೆ. ಆಘಾತಕ್ಕೊಳಗಾದ ಮಹಿಳೆ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಆಕೆಯನ್ನು ರಕ್ಷಿಸುವವರೆಗೂ ಹತ್ತಿರದ ಕಾಡಿನಲ್ಲಿ ರಾತ್ರಿ ಇಡೀ ಯುವತಿ ಕಾಲ ಕಳೆದಿದ್ದಾರೆ.
ಘಟನೆ ನಡೆದ 10 ಗಂಟೆಗಳಲ್ಲಿಯೇ ಪೊಲೀಸರು ಆರೋಪಿಯನ್ನು ಬಂಧಿಸೊದ್ದಾರೆ. ಆರೋಪಿಯನ್ನು ಉತ್ತರಾಖಂಡದ ಹಲ್ದ್ವಾನಿ ನಿವಾಸಿ ದೀಪಕ್ ಸಿಂಗ್ ಬೋರಾ ಎಂದು ಗುರುತಿಸಲಾಗಿದೆ.
ಆತನ ವಿರುದ್ಧ ಅತ್ಯಾಚಾರ ಯತ್ನ ಸೇರಿದಂತೆ ಕಾನೂನಿನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ಕದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಘಟನೆಯಲ್ಲಿ ಬಳಸಲಾದ ವಾಹನವನ್ನು ಜಪ್ತಿಮಾಡಲಾಗಿದೆ.
ದೆಹಲಿಯವರಾದ ಯುವತಿ ರಾತ್ರಿ ಕಥ್ಗೋಡಮ್ ನಿಂದ ನೈನಿತಾಲ್ ಗೆ ಟ್ಯಾಕ್ಸಿಯಲ್ಲಿ ಹೊರಟಿದ್ದರು. ಬಾಲ್ಡಿಯಾಖಾನ್ ಬಳಿ, ಟ್ಯಾಕ್ಸಿ ಚಾಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅತ್ಯಾಚಾರ ಮತ್ತು ಹಲ್ಲೆಗೆ ಯತ್ನಿಸಿದ್ದಾನೆ. ಯುವತಿ ಆತನಿಂದ ತಪ್ಪಿಸಿಕೊಂಡು ಕಾಡಿಗೆ ಓಡಿಹೋಗಿ ಅಡೈಕೊಂಡಿದ್ದಾಳೆ ಎಂದು ನೈನಿತಾಲ್ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿಸಿ ತಿಳಿಸಿದ್ದಾರೆ.

