HomeLive NewsBUDGET BREAKING : ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಜೊತೆ ವಿಧಾನಸೌಧಕ್ಕೆ ಆಗಮಿಸಿದ CM...

BUDGET BREAKING : ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಜೊತೆ ವಿಧಾನಸೌಧಕ್ಕೆ ಆಗಮಿಸಿದ CM ಸಿದ್ದರಾಮಯ್ಯ

ಬೆಂಗಳೂರು :   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 6, 2026) ತಮ್ಮ  ದಾಖಲೆಯ 17ನೇ ಬಜೆಟ್ ಮಂಡಿಸಲು ಸಕಲ ಸಿದ್ಧತೆಗಳೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಸಾಂಪ್ರದಾಯಿಕವಾಗಿ ಬಜೆಟ್ ಪ್ರತಿಗಳಿರುವ ಸೂಟ್‌ಕೇಸ್‌ ಹಿಡಿದು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವರು ಮತ್ತು ಶಾಸಕರು ಸ್ವಾಗತಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಬಜೆಟ್ ಪತ್ರಿಕೆಗಳಿರುವ ಬ್ಯಾಗ್ ಅಥವಾ ಸೂಟ್‌ಕೇಸ್‌ ಅನ್ನು ಎತ್ತಿ ಹಿಡಿದು ಫೋಟೋಗೆ ಫೋಸ್ ನೀಡುವ ಮೂಲಕ ಸಂಪ್ರದಾಯವನ್ನು ಮುಂದುವರಿಸಿದರು.

ಬಜೆಟ್‌ನಲ್ಲಿ, ಐದು ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸುವುದರ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಹೇಗೆ ಸಮತೋಲನ ಸಾಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕರ್ನಾಟಕದ ರಾಜಕೀಯ ಮತ್ತು ಆರ್ಥಿಕ ಇತಿಹಾಸದಲ್ಲಿ ಒಂದು ಐತಿಹಾಸಿಕ ದಿನ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು  ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಇದು ಅವರ ವೈಯಕ್ತಿಕ 17ನೇ ಬಜೆಟ್ ಎಂಬುದು ವಿಶೇಷ. ಈ ಮೂಲಕ ಅವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ರಾಜ್ಯದ ಮೊದಲ ಹಣಕಾಸು ಸಚಿವ ಎಂಬ ದಾಖಲೆ ಬರೆಯಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular