ಪೋಡಿ ದುರಸ್ತಿ, ಪೌತಿ ಖಾತೆ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಎಲ್ಲಾ ಕಂದಾಯ ಸೇವೆಗಳನ್ನು ಆನ್ಲೈನ್ ಮೂಲಕ ಡಿಜಿಟಲೀಕರಣಗೊಳಿಸಿ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದು, ನಮ್ಮ ಸಾವಿರ ದಿನಗಳ ಆಡಳಿತದ ಸಾಧನೆ. ವರ್ಷಾಂತ್ಯದೊಳಗೆ ಇಲಾಖೆಯನ್ನು ಕಾಗದರಹಿತ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಕಂದಾಯ ಇಲಾಖೆ ವರ್ಷಾಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣವಾಗಲಿದ್ದು ಪ್ರತಿಯೊಂದು ದಾಖಲೆಯ ಪ್ರತಿಯೂ ಡಿಜಿಟಲ್ ರೂಪದಲ್ಲಿ ಸಿಗಲಿದೆ. ರೋವರ್ ಮೂಲಕ ಸರ್ವೆ ಪೂರ್ಣಗೊಳಿಸಿದರೆ ಸ್ಕೆಚ್, ಟಿಪ್ಪಣಿ, ಆಕಾರ್ ಬಂದ್, ಕೈ ಬರಹ ಸೇರಿ ಪ್ರತಿಯೊಂದು ಡಿಜಿಟಲ್ ಪ್ರತಿ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ.

