HomeJobsBig Update: ಈ ತಿಂಗಳು 24,300 ಸರ್ಕಾರಿ ಹುದ್ದೆಗಳ ಭರ್ತಿ

Big Update: ಈ ತಿಂಗಳು 24,300 ಸರ್ಕಾರಿ ಹುದ್ದೆಗಳ ಭರ್ತಿ

ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಆಗ್ರಹಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 30 ದಿನಗಳಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿತ್ತು.

ಈ 56,432 ಹುದ್ದೆಗಳ ಪೈಕಿ 24,300 ಹುದ್ದೆಗಳ ಭರ್ತಿಗೆ ಮಾರ್ಚ್ ತಿಂಗಳಿನಲ್ಲಿಯೇ ಅಧಿಸೂಚನೆ ಪ್ರಕಟಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ವಿವಿಧ ಇಲಾಖೆಗಳು ತಯಾರಿಯನ್ನು ಆರಂಭಿಸಿವೆ.

ಮಾರ್ಚ್‌ 2ನೇ ವಾರದಲ್ಲಿ ಕೆಪಿಎಸ್‌ಸಿ, ಕೆಇಎ ಮೂಲಕ ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಲಿದೆ. ಆರ್ಥಿಕ ಇಲಾಖೆಯ ಮುಂದೆ ಕಡತವಿದ್ದು, ಈ ವಾರದಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ-ಯಾವ ಇಲಾಖೆ?; ಶೇ 50ರಷ್ಟು ಮೀಸಲಾತಿಯಲ್ಲಿಯೇ 56,432 ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಿಬ್ಬಂದಿ ಕೊರತೆ ಭಾರೀ ಇರುವ ಇಲಾಖೆಗಳನ್ನು ಪಟ್ಟಿ ಮಾಡಿ ಸಾಮೂಹಿಕವಾಗಿ ಅಥವ ಬೇರೆ ಬೇರೆ ಇಲಾಖೆಗೆ ಬೇರೆ ಬೇರೆಯಾಗಿ ಅಧಿಸೂಚನೆ ಪ್ರಕಟಿಸಲಾಗುತ್ತದೆ.

ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿವೆ. ಸಾರಿಗೆ ಇಲಾಖೆಗೆ ಹೆಚ್ಚು ಪ್ರಾತಿನಿಧ್ಯ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ.

 ಸಾರಿಗೆ ಇಲಾಖೆಯಲ್ಲಿಯೇ 6,847 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಬಳಿಕ ಶಿಕ್ಷಣ ಇಲಾಖೆಯ 5,267 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು 32 ಇಲಾಖೆಗಳ ಎ, ಬಿ ಮತ್ತು ಸಿ ದರ್ಜೆಯ 23,119 ಹುದ್ದೆಗಳ ಭರ್ತಿಗೆ ಈ ತಿಂಗಳು ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.

ಸಾರಿಗೆ ಇಲಾಖೆ 6847, ಶಿಕ್ಷಣ 5,267, ಆರ್ಥಿಕ 2,243, ಇಂಧನ 2,400, ಕಂದಾಯ 1,350, ಆರೋಗ್ಯ 1,725, ಪರಿಶಿಷ್ಟ ಜಾತಿ ಕಲ್ಯಾಣ 892, ಅಲ್ಪ ಸಂಖ್ಯಾತರ ಕಲ್ಯಾಣ 784, ಒಳಾಡಳಿತ 557, ಕೃಷಿ 553, ಗ್ರಾಮೀಣಾಭಿವೃದ್ಧಿ 351, ವೈದ್ಯಕೀಯ ಶಿಕ್ಷಣ 333,  ಪರಿಶಿಷ್ಟ ಪಂಗಡ 200, ಸಹಕಾರ 180, ನಗರಾಭಿವೃದ್ಧಿ 185, ಪರಿಸರ 92, ಉನ್ನತ ಶಿಕ್ಷಣ 60, ವಸತಿ 38, ಪಶುಸಂಗೋಪನೆ 31 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಶೇ 60ರಷ್ಟು ಹುದ್ದೆಗಳನ್ನು ಮೊದಲ ಹಂತದಲ್ಲಿ ಭರ್ತಿ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಇದರಲ್ಲಿ ಯಾವ ಇಲಾಖೆಗೆ ಎಷ್ಟು ಹುದ್ದೆಗಳ ಭರ್ತಿಗೆ ಅನುಮೋದನೆ ಸಿಗಲಿದೆ? ಎಂದು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular