ಮುಂಬೈ ಆಹಾರ ಪ್ರಿಯರೇ, ಇಂದಿನ ನಿಮ್ಮ ಡಿನ್ನರ್ ಪ್ಲಾನ್ ಕ್ಯಾನ್ಸಲ್ ಮಾಡಿ! ಬೆಂಗಳೂರಿನ ಫೇಮಸ್ ‘ದ ರಾಮೇಶ್ವರಂ ಕೆಫೆ’ ಈಗ ಅಧಿಕೃತವಾಗಿ ಮಾಯಾನಗರಿ ಮುಂಬೈಗೆ ಲಗ್ಗೆ ಇಟ್ಟಿದೆ. ವಿಶೇಷವೆಂದರೆ, ತನ್ನ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭಿಸುವ ಮುನ್ನ ಮುಂಬೈ ನಿವಾಸಿಗಳಿಗೆ ‘ಉಚಿತ ಆಹಾರ’ (Free Food Trials) ಸವಿಯುವ ಭರ್ಜರಿ ಆಫರ್ ನೀಡಿದೆ.
https://www.instagram.com/p/DVWK9R1iSTj/?utm_source=ig_web_copy_link&igsh=MzRlODBiNWFlZA==
ಎಲ್ಲಿ ಮತ್ತು ಯಾವಾಗ ಉಚಿತ ಆಹಾರ ಸಿಗುತ್ತೆ?
ದಕ್ಷಿಣ ಮುಂಬೈನ ಚರ್ಚ್ಗೇಟ್ನಲ್ಲಿ (Churchgate) ರಾಮೇಶ್ವರಂ ಕೆಫೆಯ ಹೊಸ ಶಾಖೆ ತೆರೆದಿದೆ. ಸಾರ್ವಜನಿಕರಿಗಾಗಿ ವಿಶೇಷ ಫುಡ್ ಟ್ರಯಲ್ಸ್ ಹಮ್ಮಿಕೊಳ್ಳಲಾಗಿದ್ದು, ಅದರ ವಿವರ ಇಲ್ಲಿದೆ:
ದಿನಾಂಕ: ಮಾರ್ಚ್ 2 ರಿಂದ ಮಾರ್ಚ್ 5, 2026 ರವರೆಗೆ.
ಸಮಯ: ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಫೆ ಆಡಳಿತ ಮಂಡಳಿ, “ಪ್ರೀತಿಯ ಮುಂಬೈಕರೇ, ನಿಮ್ಮ ಪ್ರೀತಿ ಮತ್ತು ತಾಳ್ಮೆಗೆ ಧನ್ಯವಾದಗಳು. ಮಾರ್ಚ್ 2 ರಿಂದ 5 ರವರೆಗೆ ನಮ್ಮ ರುಚಿಯನ್ನು ಉಚಿತವಾಗಿ ಸವಿಯಲು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ,” ಎಂದು ತಿಳಿಸಿದೆ.
ಮೆನುವಿನಲ್ಲಿ ಏನೆಲ್ಲಾ ಇರಲಿದೆ?
ಬೆಂಗಳೂರಿನಲ್ಲಿ ಜನರ ನಾಲಿಗೆಯ ಮೇಲೆ ನಲಿದಾಡುತ್ತಿರುವ ಅದೇ ಐಕಾನಿಕ್ ದಕ್ಷಿಣ ಭಾರತದ ಖಾದ್ಯಗಳು ಈಗ ಮುಂಬೈ ಮಂದಿಗೂ ಲಭ್ಯ:
ಘೀ ಪೋಡಿ ಇಡ್ಲಿ, ಬೆಣ್ಣೆ ಮಸಾಲ ದೋಸೆ, ಬಟರ್ ಇಡ್ಲಿ, ಘೀ ಆನಿಯನ್ ದೋಸೆ, ಸಕ್ಕರೆ ಪೊಂಗಲ್ ಮತ್ತು ರಾಮೇಶ್ವರಂ ಕೆಫೆಯ ಫೇಮಸ್ ಸಿಗ್ನೇಚರ್ ಫಿಲ್ಟರ್ ಕಾಫಿ
ಕುಳಿತು ಸವಿಯಲು ಇದು ಮೊದಲ ಔಟ್ಲೆಟ್
ರಾಮೇಶ್ವರಂ ಕೆಫೆಯ ಇತಿಹಾಸದಲ್ಲೇ ಇದೊಂದು ದೊಡ್ಡ ಬದಲಾವಣೆ. ಬೆಂಗಳೂರು ಅಥವಾ ಹೈದರಾಬಾದ್ನ ಯಾವುದೇ ಶಾಖೆಯಲ್ಲಿ ಕುಳಿತು ತಿನ್ನಲು ಜಾಗವಿರಲಿಲ್ಲ (Standing Only). ಆದರೆ ಮುಂಬೈನಲ್ಲಿ ತೆರೆದಿರುವ ಈ ಕೆಫೆಯಲ್ಲಿ ಗ್ರಾಹಕರು ಕುಳಿತು ಆರಾಮವಾಗಿ ಆಹಾರ ಸವಿಯಲು ಸೀಟಿಂಗ್ ವ್ಯವಸ್ಥೆ (Seating Space) ಮಾಡಲಾಗಿದೆ.
“ನನಗೆ ಹೋಟೆಲ್ ಎನ್ನುವುದು ದೇವಸ್ಥಾನದಂತೆ. ದೇವಸ್ಥಾನದಲ್ಲಿ ಪ್ರಸಾದವನ್ನು ಹೇಗೆ ನಿಂತು ಸ್ವೀಕರಿಸುತ್ತೇವೆಯೋ, ಹಾಗೆಯೇ ನಮ್ಮ ಕೆಫೆಯಲ್ಲೂ ಜನರು ನಿಂತು ತಿನ್ನಲಿ ಎಂಬುದು ನಮ್ಮ ಆಶಯವಾಗಿತ್ತು. ಆದರೆ ಮುಂಬೈನಲ್ಲಿ ಮೊದಲ ಬಾರಿಗೆ ಕುಳಿತು ತಿನ್ನುವ ವ್ಯವಸ್ಥೆ ಮಾಡಿದ್ದೇವೆ,” ಎಂದು ಮಾಲೀಕರು ತಿಳಿಸಿದ್ದಾರೆ.

