ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗೇ ಆಗ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮತ್ತೆ ಭವಿಷ್ಯ ನುಡಿದಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್, ಗುರುಗಳು ಧ್ಯಾನದಿಂದ ಎದ್ದಿಲ್ಲ, ಎದ್ದ ತಕ್ಷಣ ಡೇಟ್ ಹೇಳುತ್ತಾರೆ. ಅವರು ಕೊಟ್ಟ ದಿನಾಂಕದೊಳಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ನಾನು ನಿಜವಾಗಿಯೂ ಹೇಳುತ್ತಿದ್ದೇನೆ, ನಾನು ಸುಳ್ಳು ಹೇಳುತ್ತಿಲ್ಲ. ಗುರುಗಳು ಧ್ಯಾನದಿಂದ ಎದ್ದ ತಕ್ಷಣ ಒಂದು ಡೇಟ್ ಕೊಡುತ್ತಾರೆ. ಆ ದಿನಾಂಕವೇ ಅಂತಿಮವಾಗಿರುತ್ತದೆ. ಗುರುಗಳು ಹೇಳಿದಂತೆ ಆಗಿಲ್ಲ ಅಂದರೆ ನನಗೆ ರಾಜಕಾರಣ ಬೇಡ ಎಂದಿದ್ದಾರೆ. ಆ ಮೂಲಕ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಬಗ್ಗೆ ಇಕ್ಬಾಲ್ ಹುಸೇನ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

