HomeAgricultureಜಮೀನಿನ ಹಕ್ಕು ಬದಲಾವಣೆ: ಸ್ವಯಂ ಚಾಲಿತ ಮ್ಯುಟೇಷನ್ ಅನಮೋದನೆಗೆ ಚಾಲನೆ

ಜಮೀನಿನ ಹಕ್ಕು ಬದಲಾವಣೆ: ಸ್ವಯಂ ಚಾಲಿತ ಮ್ಯುಟೇಷನ್ ಅನಮೋದನೆಗೆ ಚಾಲನೆ

ಹಾಸನ: ಜಮೀನಿನ ಹಕ್ಕು ಬದಲಾವಣೆಗೆ ಸಂಬಂಧಿಸಿದಂತೆ ತಂತ್ರಾಂಶದಲ್ಲಿ ಸ್ವಯಂಚಾಲಿತ ಮ್ಯುಟೇಷನ್ ಅನಮೋದನೆಯಾಗುವುದನ್ನು ಮಾರ್ಪಾಡು ಮಾಡಿರುವುದನ್ನು ಕಂದಾಯ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯದಾದ್ಯಂತ ಜಾರಿಗೆ ಬರುವಂತೆ ಚಾಲನೆ ನೀಡಿರುತ್ತಾರೆ.

ನೋಟೀಸು ರಹಿತ 9 ರೀತಿಯ ಮ್ಯುಟೇಷನ್‌ಗಳು ಸ್ವಯಂ ಚಾಲಿತವಾಗಿ ಅನುಮೋದನೆಯಾಗುವುದನ್ನು ಏಪ್ರಿಲ್ 2024 ರಿಂದಲೇ ಜಾರಿಗೆ ತರಲಾಗುತ್ತಾದೆ. ಆದರೆ 7 ದಿನಗಳ ಹಾಗೂ 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಷನ್‌ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋನೆ ನೀಡುವ ಪದ್ದತಿ ಮುಂದುವರೆದಿತ್ತು.

ಇದರಿಂದ ಮ್ಯುಟೇಷನ್ ಅನುಮೋದನೆಗೆ ಹೆಚ್ಚಿನ ಸಮಯ ತಗಲುತ್ತಿದ್ದುದರಿಂದ ಹಕ್ಕು ಬದಲಾವಣೆ ಪ್ರಕರಣಗಳು ಅನುಮೋದನೆ ವಿಳಂಬವಾಗುತ್ತಿತ್ತು. ಈ ವಿಳಂಬವನ್ನು ತಪ್ಪಿಸಲು ಹೊಸ ಪದ್ಧತಿಯನ್ನು ಇಂದಿನಿಂದ ಜಾರಿಗೆ ತಂದಿದ್ದು, ಈ ಹೊಸ ವದ್ಯತಿಯಲ್ಲಿ 7 ದಿನಗಳ ನೋಟೀಸ್ ಅವಧಿಯ ಹಾಗೂ 15 ದಿನಗಳ ನೋಟೀಸ್ ಅವಧಿಯ ಎಲ್ಲಾ ರೀತಿಯ ಹಕ್ಕು ಬದಲಾವಣೆಯ ಮುಟೇಷನ್‌ಗಳನ್ನು ನೋಟಿಸ್ ಅವಧಿಯು ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಯಾವುದೇ ಮಾನವ ಹಸ್ತಕ್ಷೇಪವಿಲ್ಲದ ಸರ್ವರ್ ಸಹಿ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿರುತ್ತದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

7 ಕೆಲಸ ದಿನಗಳು ಅಥವಾ 15 ಕೆಲಸದ ದಿನಗಳ ನೋಟೀಸ್ ಅವಧಿಯೊಳಗೆ ರಾಜಸ್ವ ನಿರೀಕ್ಷಕರು, ಸರ್ಕಾರಿ ಆಕ್ಷೇಪ ಅಥವಾ ಸಾರ್ವಜನಿಕರು ಯಾವುದೇ ತಕರಾರು ನೀಡಿದಲ್ಲಿ ಸದರಿ ಮ್ಯುಟೇಷನ್ ಅನ್ನು ಪೂರ್ಣಗೊಳಿಸದೆ ಆರ್.ಸಿ.ಎಂ.ಎಸ್ ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ಸದರಿ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರ್ ರವರು ವಿಚಾರಣೆ ನಡೆಸಿ ಆದೇಶ ಹೊರಡಿಸುವರು.

ಈ ರೀತಿಯ ತಂತ್ರಾಂಶದಲ್ಲಿ ಹೊಸದಾಗಿ ಮಾರ್ಪಾಡು ಮಾಡಿರುವುದರಿಂದ ಜಮೀನಿನ ಹಕ್ಕು ಬದಲಾವಣೆಯು ಯಾವುದೇ ರೀತಿಯ ವಿಳಂಬಕ್ಕೆ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ ಮ್ಯುಟೇಶನ್‌ ವ್ಯವಸ್ಥೆ: ಅನುಕೂಲತೆಗಳು

– ಆನ್‌ಲೈನ್‌ ಮೂಲಕ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ 7 ದಿನ ನೋಟಿಸ್‌ ಅವಧಿ ಇರಲಿದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದಡಿ ತಕರಾರು ಸಲ್ಲಿಸಬಹುದು. ಯಾವುದೇ ತಕರಾರು ಸಲ್ಲಿಕೆಯಾಗದಿದ್ದರೆ 8ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.

– ನೋಂದಣಿಯೇತರ ಖಾತೆ ಬದಲಾವಣೆಗೆ ಮನವಿ ಸಲ್ಲಿಕೆಯಾದ 15 ದಿನದ ನೋಟಿಸ್‌ ಅವಧಿ ಇದ್ದು ತಕರಾರು ಸಲ್ಲಿಸಬಹುದು. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.

ವಾರದೊಳಗೆ ಖಾತೆ ಬದಲಾವಣೆ

ಪ್ರಕ್ರಿಯೆ ಮತ್ತಷ್ಟು ಸರಳ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular