ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (AKSGEF) ಕೋರಿಕೆಯಂತೆ ಕರ್ನಾಟಕದ ಸರ್ಕಾರಿ ನೌಕರರು ಒಂದು ದಿನದ ಹೋರಾಟವನ್ನು ನಡೆಸಲಿದ್ದಾರೆ. ಎಲ್ಲಾ ನೌಕರ ಬಾಂಧವರು ಭಾಗವಹಿಸಿ ಇದನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕರೆಯ ಮೇರೆಗೆ ಫೆಬ್ರವರಿ 26ರ ಗುರುವಾರ ಒಂದು ದಿನದ ಹೋರಾಟ ಮಾಡಲಾಗುತ್ತಿದೆ. NPS, UPS ಪದ್ಧತಿ ಮತ್ತು PFRDA ಕಾಯ್ದೆಯನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಪದ್ಧತಿ (OPS) ಮರುಸ್ಥಾಪನೆಗಾಗಿ ಒತ್ತಾಯಿಸಿ ಈ ಹೋರಾಟ ಮಾಡಲಾಗುತ್ತಿದೆ.
ಪ್ರಮುಖ ಬೇಡಿಕೆಗಳು
* NPS, UPS ಪದ್ಧತಿ ಮತ್ತು PFRDA ಕಾಯ್ದೆಯನ್ನು ರದ್ದುಗೊಳಿಸಿ. ಇದುವರೆಗೂ ಠೇವಣಿ ಮಾಡಿದ ಹಣವನ್ನು ರಾಜ್ಯ ಸರ್ಕಾರಗಳಿಗೆ ಹಿಂದಿರುಗಿಸಲು PFRDA ನಿಧಿ ವ್ಯವಸ್ಥಾಪಕರಿಗೆ ನಿರ್ದೇಶಿಸುವುದು. OPS ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸುವುದು.
* EPS-95 ಅಡಿಯಲ್ಲಿ ಇರುವ ಎಲ್ಲಾ ನೌಕರರನ್ನೂ ಹಳೇ ಪಿಂಚಣಿ ವ್ಯವಸ್ಥೆOPS (Defined Benefit Pension System) ಅಡಿಗೆ ತರಬೇಕು.
* ದೇಶದ ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಮಂಜೂರಾಗಿ ಖಾಲಿ ಇರುವ ಎಲ್ಲಾ 64 ಲಕ್ಷ ಖಾಲಿ ಹುದ್ದೆಗಳನ್ನು ಖಾಯಂ ಆಗಿ ಭರ್ತಿ ಮಾಡಬೇಕು.
* ಗುತ್ತಿಗೆ/ ಹೊರಗುತ್ತಿಗೆ ನೌಕರರಿಗೆ ಸೇವಾಭದ್ರತೆ ನೀಡಿ, ಅವರುಗಳಿಗೆ ನೇರ ನೇಮಕಾತಿಯಲ್ಲಿ ನಿಯಮಾನುಸಾರ ಪ್ರಾತಿನಿಧ್ಯ ನೀಡುವುದು.
* ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದರ ಮೂಲಕ ಬಲಪಡಿಸಿ. ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನು ಕೈಬಿಟ್ಟು, ಶಿಕ್ಷಕರಿಗೆ ಕಡ್ಡಾಯಗೊಳಿಸಿರುವ TET ಆದೇಶವನ್ನು ಹಿಂಪಡೆಯಬೇಕು.
* ಬಾಕಿ ಇರುವ 18 ತಿಂಗಳ ತುಟ್ಟಿಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವುದು.
* ಪ್ರತಿ ವೇತನ ಆಯೋಗಗಳ ನಂತರ ಪಿಂಚಣಿದಾರರ ಪಿಂಚಣಿಗಳ ಪರಿಷ್ಕರಣೆಗಳನ್ನು ತಡೆಯಲು 25 ಮೇ 2025ರಂದು FINANCE CODE (ಪಿಂಚಣಿ ಕಾಯ್ದೆ- 2025)ಗೆ ತಂದಿರುವ ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯುವುದು.
* ನೌಕರ ವಿರೋಧಿ/ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು
* ನಿಯಮಿತವಾಗಿ 5 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಯನ್ನು ಖಚಿತಪಡಿಸುವುದು.
* ಪಿಂಚಣಿದಾರರಿಗೆ, ಗುತ್ತಿಗೆ/ ಹೊರಗುತ್ತಿಗೆ ನೌಕರರಿಗೆ ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು
* ಸಾರ್ವಜನಿಕ ಇಲಾಖೆಗಳ ಖಾಸಗೀಕರಣವನ್ನುನಿಲ್ಲಿಸುವುದು
* ಸಂವಿಧಾನ ವಿಧಿ 310, 311(2), (ಎ) (ಬಿ) (ಸಿ) ರದ್ದುಪಡಿಸುವುದು
* ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯಾತೀತತೆಯನ್ನು ಎತ್ತಿಹಿಡಿದು ಕೋಮುವಾದವನ್ನು ನಿಲ್ಲಿಸುವುದು.

