HomeLatest NewsGOOD NEWS : ರಾಜ್ಯದ  'ಆಸ್ತಿ ಮಾಲೀಕ'ರಿಗೆ ಗುಡ್ ನ್ಯೂಸ್ : ಆನ್'ಲೈನ್ ಮ್ಯುಟೇಷನ್ ವ್ಯವಸ್ಥೆ...

GOOD NEWS : ರಾಜ್ಯದ  ‘ಆಸ್ತಿ ಮಾಲೀಕ’ರಿಗೆ ಗುಡ್ ನ್ಯೂಸ್ : ಆನ್’ಲೈನ್ ಮ್ಯುಟೇಷನ್ ವ್ಯವಸ್ಥೆ ರಾಜ್ಯಾದ್ಯಂತ  ವಿಸ್ತರಣೆ.!

ಬೆಂಗಳೂರು : ರಾಜ್ಯದ ಜನತೆಗೆ ಕಂದಾಯ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಇನ್ಮುಂದೆ ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ವತ್ತಿನ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.

ನಿಗದಿತ ನೋಟಿಸ್ ಅವಧಿ ಮುಗಿದ ತಕ್ಷಣ ಆನ್‌ಲೈನ್ ಮೂಲಕವೇ ‘ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ’ (Auto-Mutation) ಮಾಡುವ ನೂತನ ವ್ಯವಸ್ಥೆಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ರಾಜ್ಯಾದ್ಯಂತ ಜಾರಿಗೆ ತಂದಿದ್ದಾರೆ. ಈ ವ್ಯವಸ್ಥೆಯಡಿ ಯಾವುದೇ ತಕರಾರು ಇಲ್ಲದಿದ್ದಲ್ಲಿ ಕೇವಲ 8 ರಿಂದ 16 ದಿನಗಳಲ್ಲಿ ನಿಮ್ಮ ಆಸ್ತಿಯ ಖಾತೆ ದಾಖಲೆಗಳು ನಿಮ್ಮ ಕೈಸೇರಲಿವೆ.

ಇನ್ಮುಂದೆ ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ವತ್ತಿನ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ನಿಗದಿತ ನೋಟಿಸ್ ಅವಧಿ ಮುಗಿದ ತಕ್ಷಣ ಆನ್‌ಲೈನ್ ಮೂಲಕವೇ ‘ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ’ (Auto-Mutation) ಮಾಡುವ ನೂತನ ವ್ಯವಸ್ಥೆಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ರಾಜ್ಯಾದ್ಯಂತ ಜಾರಿಗೆ ತಂದಿದ್ದಾರೆ. ಈ ವ್ಯವಸ್ಥೆಯಡಿ ಯಾವುದೇ ತಕರಾರು ಇಲ್ಲದಿದ್ದಲ್ಲಿ ಕೇವಲ 8 ರಿಂದ 16 ದಿನಗಳಲ್ಲಿ ನಿಮ್ಮ ಆಸ್ತಿಯ ಖಾತೆ ದಾಖಲೆಗಳು ನಿಮ್ಮ ಕೈಸೇರಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದರ ಪ್ರಯೋಜನ

·  ಸರಳ ಪ್ರಕ್ರಿಯೆ: ಭೂಮಿ ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು.

·  7 ದಿನಗಳ ನೋಟಿಸ್: ಆನ್‌ಲೈನ್ ಅರ್ಜಿ ಸಲ್ಲಿಕೆಯಾದ 7 ದಿನಗಳವರೆಗೆ ತಕರಾರು ಸಲ್ಲಿಸಲು ಅವಕಾಶವಿರುತ್ತದೆ. ಯಾವುದೇ ಆಕ್ಷೇಪಣೆ ಬರದಿದ್ದರೆ 8ನೇ ದಿನವೇ ಖಾತೆ ಬದಲಾವಣೆಯಾಗಲಿದೆ.

·  ನೋಂದಣಿಯೇತರ ಖಾತೆ: ಇತರೆ ಪ್ರಕರಣಗಳಲ್ಲಿ 15 ದಿನಗಳ ನೋಟಿಸ್ ಅವಧಿ ಇರಲಿದ್ದು, 16ನೇ ದಿನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

·  ಪಾರದರ್ಶಕತೆ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಜನಸಾಮಾನ್ಯರಿಗೆ ಶೀಘ್ರವಾಗಿ ಸೇವೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular