HomeBusinessಗಗನಕ್ಕೇರಿದ ಬಂಗಾರ: 10 ಗ್ರಾಂ ಚಿನ್ನದ ಸರ ಮಾಡಿಸಲು ಈಗ 1.70 ಲಕ್ಷ ರೂ. ಬೇಕಾ?...

ಗಗನಕ್ಕೇರಿದ ಬಂಗಾರ: 10 ಗ್ರಾಂ ಚಿನ್ನದ ಸರ ಮಾಡಿಸಲು ಈಗ 1.70 ಲಕ್ಷ ರೂ. ಬೇಕಾ? ಪಕ್ಕಾ ಲೆಕ್ಕ ಇಲ್ಲಿದೆ

ಬಂಗಾರ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಹಬ್ಬ ಇರಲಿ, ಮದುವೆ ಇರಲಿ ಅಥವಾ ಕುತ್ತಿಗೆಗೊಂದು ಸಿಂಪಲ್ ಆದ ಗೋಲ್ಡ್ ಚೈನ್ ಇರಲಿ ಅಂತ ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಚಿನ್ನದ ಅಂಗಡಿಗೆ ಹೋದಾಗ ಅಂಗಡಿಯವರು ಕೊಡುವ ಬಿಲ್ ನೋಡಿ ತಲೆ ಸುತ್ತುವುದು ಗ್ಯಾರಂಟಿ ಯಾಕೆಂದರೆ ನಾವು ಕೇಳುವ ಗ್ರಾಂ ರೇಟ್ ಒಂದಾದರೆ ಅಂತಿಮವಾಗಿ ಬಿಲ್ ಆಗುವುದೇ ಬೇರೆ.ನಿಮ್ಮ ಪ್ಲಾನ್ 10 ಗ್ರಾಂ ಚಿನ್ನದ ಸರ ಮಾಡಿಸುವುದಾಗಿದ್ದರೆ ನಿಮ್ಮ ಜೇಬಿಂದ ಎಷ್ಟು ಹಣ ಖಾಲಿಯಾಗುತ್ತೆ ಅನ್ನೋ ಕಂಪ್ಲೀಟ್ ಬಿಲ್ ಇಲ್ಲಿದೆ ನೋಡಿ

1.ಚಿನ್ನದ ಅಸಲಿ ರೇಟ್: ₹1,43,450


ನಮ್ಮ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ 22 ಕ್ಯಾರೆಟ್ ಆಭರಣದ ಚಿನ್ನದ ಬೆಲೆ ಸದ್ಯಕ್ಕೆ ಪ್ರತಿ ಗ್ರಾಂಗೆ ಅಂದಾಜು ₹14,345 ಇದೆ. ಅಂದರೆ ಬರೀ ಬಂಗಾರಕ್ಕೇ ನೀವು ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ದಾಟಿಸಿ ಹಣ ಎತ್ತಿಡಬೇಕು!

2.ಡಿಸೈನ್ ಕೂಲಿ (Making Charges): ₹14,345


ಅಂಗಡಿಯವರು ಬಂಗಾರವನ್ನು ಕರಗಿಸಿ ಸರದ ವಿನ್ಯಾಸ ಮಾಡಲು ಕೂಲಿ ಅಥವಾ ಮೇಕಿಂಗ್ ಚಾರ್ಜ್ ಹಾಕುತ್ತಾರೆ. ನೀವು ಸಾಧಾರಣ ಚೈನ್ ಮಾಡಿಸಿದರೂ ಕನಿಷ್ಠ 10% ಕೂಲಿ ಕೊಡಲೇಬೇಕು. ಡಿಸೈನ್ ಗ್ರಾಂಡ್ ಆಗಿದ್ದರೆ ಈ ಖರ್ಚು ಇನ್ನು ಹೆಚ್ಚಾಗುತ್ತೆ ಅನ್ನೋದು ನಿಮ್ಮ ಗಮನಕ್ಕಿರಲಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3.ಸರ್ಕಾರದ ಪಾಲು – GST (3%): ₹4,734


ಇಲ್ಲಿಗೆ ಮುಗಿಯಿತು ಅನ್ಕೋಬೇಡಿ ನೀವು ಹೊಸ ಒಡವೆ ತಗೊಂಡ ಮೇಲೆ ಸರ್ಕಾರಕ್ಕೆ ಕಡ್ಡಾಯವಾಗಿ 3% ತೆರಿಗೆ ಕಟ್ಟಬೇಕು. ವಿಶೇಷ ಅಂದ್ರೆ, ಈ ತೆರಿಗೆ ಕೇವಲ ಚಿನ್ನದ ಮೇಲಲ್ಲ, ನೀವು ಕೊಡುವ ಕೂಲಿಯ (Making Charges) ಮೇಲೂ ಲೆಕ್ಕ ಹಾಕಲಾಗುತ್ತದೆ.

4.ಹಾಲ್‌ಮಾರ್ಕ್ ಫೀಸ್: ₹50


ನಿಮ್ಮ ಚಿನ್ನ ಅಪ್ಪಟವಾಗಿದೆ ಅನ್ನೋದಕ್ಕೆ ಸಾಕ್ಷಿಯೇ ಹಾಲ್‌ಮಾರ್ಕ್ ಸೀಲ್. ಇದಕ್ಕೆ ಅತಿ ಕಡಿಮೆ ಅಂದ್ರೆ ಕೇವಲ 50 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇದು ನಿಮ್ಮ ಚಿನ್ನದ ಕ್ವಾಲಿಟಿಗೆ ಸಿಗುವ ಗ್ಯಾರಂಟಿ.

10 ಗ್ರಾಂ ಸರದ ಮೊತ್ತ (ಅಂದಾಜು)

ಚಿನ್ನದ ಬೆಲೆ (10 ಗ್ರಾಂ)₹1,43,450

ಮೇಕಿಂಗ್ ಚಾರ್ಜ್ (10%)₹14,345

GST ತೆರಿಗೆ (3%)₹4,734

ಹಾಲ್‌ಮಾರ್ಕ್ ಸೀಲ್₹50

ಒಟ್ಟು ಬಿಲ್ (Total)₹1,62,579

ಕೂಲಿ ಫ್ರೀ ಅಂತ ಬೋರ್ಡ್ ಹಾಕಿರೋ ಅಂಗಡಿಗಳಲ್ಲಿ ಚಿನ್ನದ ಗ್ರಾಂ ರೇಟ್ ಚೆಕ್ ಮಾಡಿ. ಅಲ್ಲಿ ದರ ಹೆಚ್ಚಿರೋ ಸಾಧ್ಯತೆ ಇರುತ್ತೆ.ಬಿಲ್ ತಗೋವಾಗ ಬರೀ ‘ಟೋಟಲ್ ಅಮೌಂಟ್’ ನೋಡಬೇಡಿ. ಚಿನ್ನದ ರೇಟ್ ಎಷ್ಟು? ಕೂಲಿ ಎಷ್ಟು? ಟ್ಯಾಕ್ಸ್ ಎಷ್ಟು ಅಂತ ಸಪರೇಟ್ ಆಗಿ ಬರೆಸಿಕೊಳ್ಳಿ ಚಿನ್ನದ ದರ ಪ್ರತಿದಿನ ಏರಿಳಿತ ಆಗ್ತಾ ಇರುತ್ತೆ, ಹಾಗಾಗಿ ಸ್ವಲ್ಪ ಮಾರ್ಕೆಟ್ ಸ್ಟಡಿ ಮಾಡಿ ಖರೀದಿಸುವುದು ಜಾಣತನ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular