HomeKarnatakaBIG NEWS: ಗ್ಯಾಸ್ ಸಬ್ಸಿಡಿ ರೀತಿಯಲ್ಲೇ ಉಳ್ಳವರು ಗ್ಯಾರಂಟಿ ತ್ಯಜಿಸಲು 'ಗಿವ್ ಇಟ್ ಅಪ್' ಸೂತ್ರ...

BIG NEWS: ಗ್ಯಾಸ್ ಸಬ್ಸಿಡಿ ರೀತಿಯಲ್ಲೇ ಉಳ್ಳವರು ಗ್ಯಾರಂಟಿ ತ್ಯಜಿಸಲು ‘ಗಿವ್ ಇಟ್ ಅಪ್’ ಸೂತ್ರ ಪ್ರಕಟ: ಸರ್ಕಾರ ಗಂಭೀರ ಚಿಂತನೆ

ಬೆಂಗಳೂರು: ಗ್ಯಾಸ್ ಸಬ್ಸಿಡಿ ರೀತಿಯಲ್ಲಿಯೇ ಗೃಹಜ್ಯೋತಿ, ಶಕ್ತಿ ಗ್ಯಾರಂಟಿಗಳನ್ನು ಸರ್ಕಾರಿ ನೌಕರರು, ಶ್ರೀಮಂತರು ತ್ಯಜಿಸುವ ಬಗ್ಗೆ ಮಾರ್ಚ್ 6ರ ರಾಜ್ಯ ಬಜೆಟ್ ನಲ್ಲಿ ಗಿವ್ ಇಟ್ ಅಪ್ ಸೂತ್ರ ಪ್ರಕಟಿಸುವ ಸಾಧ್ಯತೆ ಇದೆ. ಈ ಮೂಲಕ ಗ್ಯಾರಂಟಿ ಹೊರೆ ಕಡಿಮೆ ಮಾಡಿಕೊಳ್ಳಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಫಲಾನುಭವಿಗಳು ಉಚಿತ ಗ್ಯಾರಂಟಿಗಳನ್ನು ಸ್ವಯಂ ಪ್ರೇರಿತವಾಗಿ ಬಿಟ್ಟು ಕೊಡುವಂತೆ ರಾಜ್ಯ ಬಜೆಟ್ ನಲ್ಲಿ ಸೂತ್ರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಂಚ ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ಇದುವರೆಗೂ 1,18,433 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಗೃಹಲಕ್ಷ್ಮಿ ಮತ್ತು ಯುವನಿಧಿ ಫಲಾನುಭವಿಗಳಿಗೆ ಕೆಲವು ತಿಂಗಳ ಹಣ ಬಾಕಿ ಉಳಿದಿದೆ. ತೆರಿಗೆ ಸಂಗ್ರಹದ ಹೆಚ್ಚಿನ ಪಾಲು ಗ್ಯಾರಂಟಿ ಯೋಜನೆಗಳಿಗೆ ವೆಚ್ಚವಾಗುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದ್ದು, ಪರ್ಯಾಯ ಮತ್ತು ಹೆಚ್ಚುವರಿ ಆದಾಯ ಮೂಲ ನಂತರವೂ ಗ್ಯಾರಂಟಿಗಳ ಭಾರ ಕಡಿಮೆಯಾಗಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆ ನಿಲ್ಲಿಸುವ ಬದಲಿಗೆ ಉಳ್ಳವರು ಯೋಜನೆಗಳನ್ನು ತ್ಯಜಿಸಲು ಮನಸ್ಸು ಮಾಡುವಂತೆ ಮನವಿ ರೂಪದ ನೀತಿಯೊಂದನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular