ಹೈದರಾಬಾದ್: ದೀರ್ಘಕಾಲದ ವದಂತಿ ಹಾಗೂ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಟಾಲಿವುಡ್‌ನ ಕ್ರೇಜಿ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಈ ಜೋಡಿ, ಅಭಿಮಾನಿಗಳು ನೀಡಿದ ‘ವಿರೋಶ್’ (ViRoash) ಹೆಸರಿನಲ್ಲೇ ತಮ್ಮ ವಿವಾಹ ಸಮಾರಂಭವನ್ನು ಆಚರಿಸುವುದಾಗಿ ತಿಳಿಸಿದ್ದಾರೆ.
ಹೌದು. ದೀರ್ಘಕಾಲದ ವದಂತಿಗಳಿಗೆ ತೆರೆ ಎಳೆದಿರುವ ಈ ಜೋಡಿ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮದುವೆಯ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ.”ನಾವು ಏನನ್ನೂ ನಿರ್ಧರಿಸುವ ಮೊದಲೇ ನೀವು ನಮಗೆ ‘ವಿರೋಶ್’ ಎಂದು ಹೆಸರಿಟ್ಟಿದ್ದೀರಿ, ಅದೇ ಹೆಸರಿನಲ್ಲಿ ನಾವು ಹೊಸ ಜೀವನ ಆರಂಭಿಸುತ್ತಿದ್ದೇವೆ” ಎಂದು ಜೋಡಿ ತಿಳಿಸಿದೆ.ಮಾರ್ಚ್ 4ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ಧೂರಿ ಆರತಕ್ಷತೆ ಆಯೋಜಿಸಲಾಗಿದೆ.ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು, ‘ಗೀತ ಗೋವಿಂದಂ’ ಜೋಡಿಯ ರಿಯಲ್ ಲೈಫ್ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
ಅಭಿಮಾನಿಗಳು ಈ ಜೋಡಿಯನ್ನು ಪ್ರೀತಿಯಿಂದ ‘ವಿರೋಶ್’ (ವಿಜಯ್ + ರಶ್ಮಿಕಾ) ಎಂದು ಕರೆಯುತ್ತಿದ್ದರು. ಅಭಿಮಾನಿಗಳ ಈ ಪ್ರೀತಿಗೆ ಗೌರವ ಸಲ್ಲಿಸಲು ತಮ್ಮ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ಹೆಸರಿಟ್ಟಿದ್ದಾರೆ.
ಮದುವೆ ದಿನಾಂಕ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಮಂತ್ರಣ ಪತ್ರಿಕೆಯ ಪ್ರಕಾರ, ಈ ಜೋಡಿ 2026ರ ಫೆಬ್ರವರಿ 26ರಂದು ಸರಳ ಹಾಗೂ ಆಪ್ತ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ.ಮದುವೆಯ ನಂತರ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ (Reception) ನಡೆಯಲಿದೆ ಎಂದು ವರದಿಯಾಗಿದೆ. ವಿಜಯ್ ಅವರ ತೆಲುಗು ಸಂಪ್ರದಾಯ ಮತ್ತು ರಶ್ಮಿಕಾ ಅವರ ಕೊಡವ (Coorgi) ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ವರದಿಯಾಗಿದೆ.
ಅತಿಥಿಗಳಿಗೆ ಕಟ್ಟುನಿಟ್ಟಿನ ನಿಯಮ (Guest Rules)
- ‘ನೋ ಫೋನ್’ ಪಾಲಿಸಿ: ಮದುವೆಯ ಫೋಟೋಗಳು ಲೀಕ್ ಆಗಬಾರದು ಎಂಬ ಕಾರಣಕ್ಕೆ ಅತಿಥಿಗಳು ಸಮಾರಂಭದ ಒಳಗೆ ಮೊಬೈಲ್ ಫೋನ್ ಬಳಸುವಂತಿಲ್ಲ.
- ಆಮಂತ್ರಣ: ಉದಯಪುರದ ಮದುವೆಗೆ ಕೇವಲ ಕುಟುಂಬದವರು ಮತ್ತು ತೀರಾ ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಚಿತ್ರರಂಗದ ಗಣ್ಯರಿಗಾಗಿ ಹೈದರಾಬಾದ್‌ನಲ್ಲಿ ಪ್ರತ್ಯೇಕವಾಗಿ ಆರತಕ್ಷತೆ ಆಯೋಜಿಸಲಾಗಿದೆ.
ಅಭಿಮಾನಿಗಳಿಗೆ ಸಂದೇಶ: “ನಾವು ಯಾವುದೇ ಯೋಜನೆ ಮಾಡುವ ಮುನ್ನವೇ ನೀವು ನಮಗೆ ಹೆಸರಿಟ್ಟು ಹರಸಿದ್ದೀರಿ, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ” ಎಂದು ಈ ಜೋಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

