HomeIndiaಗಲ್ಗೋಟಿಯಾಸ್ ಯೂನಿವರ್ಸಿಟಿ ಮರ್ಯಾದೆ ಹರಾಜು: ಹಳೆಯ ವಿಡಿಯೋದಿಂದಾಗಿ ಅನನ್ಯಾ ಪಾಂಡೆ ಈಗ ನೆಟ್ಟಿಗರ ಟಾರ್ಗೆಟ್!

ಗಲ್ಗೋಟಿಯಾಸ್ ಯೂನಿವರ್ಸಿಟಿ ಮರ್ಯಾದೆ ಹರಾಜು: ಹಳೆಯ ವಿಡಿಯೋದಿಂದಾಗಿ ಅನನ್ಯಾ ಪಾಂಡೆ ಈಗ ನೆಟ್ಟಿಗರ ಟಾರ್ಗೆಟ್!

ನವದೆಹಲಿಯಲ್ಲಿ ನಡೆದ ‘AI ಇಂಪ್ಯಾಕ್ಟ್ ಸಮ್ಮಿಟ್ 2026’ರಲ್ಲಿ ಚೀನಾ ಮೂಲದ ರೋಬೋಟ್ ಅನ್ನು ತನ್ನದೇ ಸಂಶೋಧನೆ ಎಂದು ಹೇಳಿಕೊಂಡು ಮುಖಭಂಗ ಅನುಭವಿಸಿದ ನೋಯ್ಡಾದ ‘ಗಲ್ಗೋಟಿಯಾಸ್ ಯೂನಿವರ್ಸಿಟಿ’ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈ ವಿವಾದದ ಬೆನ್ನಲ್ಲೇ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಹಳೆಯ ವಿಡಿಯೋವೊಂದು ಹೊರಬಂದಿದ್ದು, ನೆಟ್ಟಿಗರಿಗೆ ಹೊಸ ಆಹಾರ ಸಿಕ್ಕಂತಾಗಿದೆ.

ವಿಡಿಯೋದಲ್ಲೇನಿದೆ? ಕಳೆದ ವರ್ಷ ಅನನ್ಯಾ ಪಾಂಡೆ ಮತ್ತು ಕಾರ್ತಿಕ್ ಆರ್ಯನ್ ತಮ್ಮ ‘ತು ಮೇರಿ ಮೈ ತೇರಾ’ ಚಿತ್ರದ ಪ್ರಚಾರಕ್ಕಾಗಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅನನ್ಯಾ ಈ ಸಂಸ್ಥೆಯನ್ನು ಪ್ರಚಾರ ಮಾಡುತ್ತಾ, ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದ ವಿಡಿಯೋ ಈಗ ರೆಡ್ಡಿಟ್‌ನಲ್ಲಿ (Reddit) ಹರಿದಾಡುತ್ತಿದೆ. “ಗಲ್ಗೋಟಿಯಾಸ್ ಮತ್ತು ಅನನ್ಯಾ ಪಾಂಡೆ.. ವರ್ಷದ ಬೆಸ್ಟ್ ಕೊಲ್ಯಾಬರೇಶನ್” ಎಂದು ಬಳಕೆದಾರರು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ನೆಟ್ಟಿಗರ ಕಾಮೆಂಟ್ಸ್: ಈ ವಿಡಿಯೋ ನೋಡಿ ನೆಟ್ಟಿಗರು ನಟಿಯನ್ನು ತರಹೇವಾರಿ ಕಾಮೆಂಟ್ ಮೂಲಕ ಕಾಲೆಳೆಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಒಬ್ಬ ಬಳಕೆದಾರರು, “ಗಲ್ಗೋಟಿಯಾ.. ಗಲಾ ಘೋಟ್ ದಿಯಾ” (ಗಂಟಲು ಹಿಸುಕಿದಂತಿದೆ) ಎಂದು ಟ್ರೋಲ್ ಮಾಡಿದ್ದಾರೆ.
  • ಇನ್ನೊಬ್ಬರು, “ಈ ರೋಬೋಟ್ ಅನ್ನು ಅನನ್ಯಾ ಅವರೇ ತಯಾರಿಸಿದ್ದಾರೆ ಎಂದು ನನಗೆ ಮೊದಲೇ ಗೊತ್ತಿತ್ತು, ಆದರೆ ಹಿತಶತ್ರುಗಳು ಇದು ಚೀನಾದ್ದು ಎನ್ನುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.
  • “ಈ ಯೂನಿವರ್ಸಿಟಿಗೆ ಇಂತಹ ನಟಿಯೇ ಸರಿಯಾದ ಜೋಡಿ” ಎಂಬಂತಹ ಕಟು ಟೀಕೆಗಳು ಕೇಳಿಬರುತ್ತಿವೆ.

ಏನಿದು ಗಲ್ಗೋಟಿಯಾಸ್ ವಿವಾದ? AI ಶೃಂಗಸಭೆಯಲ್ಲಿ ಗಲ್ಗೋಟಿಯಾಸ್ ಯೂನಿವರ್ಸಿಟಿಯ ಪ್ರತಿನಿಧಿ ಪ್ರೊಫೆಸರ್ ನೇಹಾ ಸಿಂಗ್, ‘ಓರಿಯನ್’ ಎಂಬ ರೋಬೋಟಿಕ್ ನಾಯಿಯನ್ನು ತಮ್ಮದೇ ಸಂಸ್ಥೆಯ ಸಂಶೋಧನೆ ಎಂದು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದರು. ಆದರೆ ಅದು ಚೀನಾದ ‘Unitree’ ಕಂಪನಿಯ ರೋಬೋಟ್ ಎಂಬುದು ತಕ್ಷಣವೇ ಬಯಲಾಗಿತ್ತು. ವಿವಾದ ತಾರಕಕ್ಕೇರುತ್ತಿದ್ದಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಶ್ವವಿದ್ಯಾಲಯದ ಸ್ಟಾಲ್ ಅನ್ನು ತೆರವುಗೊಳಿಸುವಂತೆ ಸೂಚಿಸಿತು. ನಂತರ ಸಂಸ್ಥೆಯು ಕ್ಷಮೆಯಾಚಿಸಿ, “ನಮ್ಮ ಪ್ರತಿನಿಧಿಗೆ ತಾಂತ್ರಿಕ ಮಾಹಿತಿ ಇಲ್ಲದ ಕಾರಣ ಈ ಗೊಂದಲ ಉಂಟಾಗಿದೆ” ಎಂದು ಹೇಳಿಕೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular