ನಮಕ್ಕಲ್: ಶಾಲೆಯ ಪದವಿ ಪ್ರದಾನ ಸಮಾರಂಭ (Convocation) ಎಂದರೆ ಸಾಮಾನ್ಯವಾಗಿ ಗಂಭೀರವಾದ ವಾತಾವರಣ ನೆನಪಾಗುತ್ತದೆ. ಆದರೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ‘ವೇದಲೋಕ ವಿದ್ಯಾಲಯ’ದಲ್ಲಿ ನಡೆದ ಕಾರ್ಯಕ್ರಮವೊಂದು ಈ ಕಲ್ಪನೆಯನ್ನೇ ಬದಲಿಸಿದೆ. ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಗೆ ಪ್ರಮಾಣಪತ್ರ ವಿತರಿಸುವಾಗ ಶಾಲೆಯ ಪ್ರಮುಖರೊಬ್ಬರು ವಿದ್ಯಾರ್ಥಿಗಳಿಗಿಂತಲೂ ಹೈ-ಎನರ್ಜಿಯಿಂದ ವರ್ತಿಸಿ ಸಖತ್ ಸುದ್ದಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಶಾಲೆಯ ಮುಖ್ಯಸ್ಥರು ಗೋಲ್ಡನ್ ಬಣ್ಣದ ಕನ್ವೋಕೇಶನ್ ಗೌನ್ ಧರಿಸಿ ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಅಲ್ಲಿಗೆ ಪ್ರಮಾಣಪತ್ರ ಪಡೆಯಲು ಬರುವ ಪ್ರತಿಯೊಬ್ಬ ಮಗುವೂ ತನ್ನದೇ ಆದ ಶೈಲಿಯಲ್ಲಿ ಪೋಸ್ ನೀಡುತ್ತದೆ. ಒಬ್ಬ ಪುಟಾಣಿ ಬಾಲಕ ಅಲ್ಲು ಅರ್ಜುನ್ ಅವರ ‘ಪುಷ್ಪ’ ಚಿತ್ರದ ಸಿಗ್ನೇಚರ್ ಮ್ಯಾನರಿಸಂ ಮಾಡಿದರೆ, ಮರುಕ್ಷಣವೇ ಈ ಸರ್ ಕೂಡ ಅದೇ ರೀತಿ ಕೈ ಸನ್ನೆ ಮಾಡಿ ಎಲ್ಲರನ್ನೂ ರಂಜಿಸಿದ್ದಾರೆ.
https://www.instagram.com/reel/DU2SBLWEi2j/?utm_source=ig_web_copy_link

