HomeKarnatakaವೈದ್ಯರ ಸಲಹಾ ಚೀಟಿ ಇಲ್ಲದೇ ಅನುಸೂಚಿತ ಔಷಧಗಳ ಮಾರಾಟ ಮಾಡಿದರೆ ಮೆಡಿಕಲ್ ಶಾಪ್ ಗಳ ಮೇಲೆ...

ವೈದ್ಯರ ಸಲಹಾ ಚೀಟಿ ಇಲ್ಲದೇ ಅನುಸೂಚಿತ ಔಷಧಗಳ ಮಾರಾಟ ಮಾಡಿದರೆ ಮೆಡಿಕಲ್ ಶಾಪ್ ಗಳ ಮೇಲೆ ಕ್ರಮ

ವೈದ್ಯರ ಸಲಹಾ ಚೀಟಿ ಇಲ್ಲದೇ ಅನುಸೂಚಿತ ಔಷಧಗಳನ್ನು ಮಾರಾಟ ಮಾಡುವ ಔಷಧ ಅಂಗಡಿಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ  ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಥೋಡ ಅವರು ಸೂಚನೆ ನೀಡಿದ್ದಾರೆ.

ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರ ಅಡಿಯಲ್ಲಿ ಅನುಸೂಚಿ ಹೆಚ್, ಹೆಚ್1 ಮತ್ತು ಎಕ್ಸ್ ಅಡಿಯಲ್ಲಿ ಬರುವ ಮತ್ತುಬರಿಸುವ, ಅಮಲುಕಾರಕ ಅಥವಾ ರೋಗ ನಿರೋಧಕ ಮತ್ತು ಇತರೆ ಅನುಸೂಚಿತ ಔಷಧಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೇ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮಾದಕ ವ್ಯಸನ ನಿಯಂತ್ರಣ(ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್) ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಹಾಯಕ ಔಷಧ ನಿಯಂತ್ರಕರು ಹಾಗೂ ಉಪ ಔಷಧ ನಿಯಂತ್ರಕರು ಜಿಲ್ಲೆಯಲ್ಲಿನ ಔಷಧ ಅಂಗಡಿಗಳನ್ನು ಪರಿವೀಕ್ಷಣೆ ಕೈಗೊಂಡಿದ್ದು, ಈ ಅವಧಿಯಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೇ ಅನುಸೂಚಿತ ಔಷಧಗಳನ್ನು ಮಾರಾಟ ಮಾಡಿರುವ ಒಟ್ಟು ಒಂದು ಸಂಸ್ಥೆಯ ಪರವಾನಿಗೆ ರದ್ದುಗೊಳಿಸಲಾಗಿದೆ ಮತ್ತು ಒಟ್ಟು ನಾಲ್ಕು ಸಂಸ್ಥೆಗಳ ಪರವಾನಿಗೆಗಳನ್ನು ಅಮಾನತ್ತುಗೊಳಿಸಿ ಆದೇಶಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದ್ದರಿಂದ ಜಿಲ್ಲೆಯ ಎಲ್ಲಾ ಚಿಲ್ಲರೆ ಔಷಧ ವ್ಯಾಪಾರಸ್ಥರು ಅನುಸೂಚಿತ ಹೆಚ್, ಹೆಚ್1 ಮತ್ತು ಎಕ್ಸ್ ಅಡಿಯಲ್ಲಿ ಬರುವ ಮತ್ತುಬರಿಸುವ, ಅಮಲುಕಾರಕ, ರೋಗ ನಿರೋಧಕ ಮತ್ತು ಇತರೆ ಅನುಸೂಚಿತ ಔಷಧಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೇ ಮಾರಾಟ ಮಾಡಬಾರದು ಹಾಗೂ ಇದರ ಕುರಿತು ಎಚ್ಚರಿಕೆ ಫಲಕವನ್ನು ಸಾರ್ವಜನಿಕರಿಗೆ ಕಾಣುವಂತೆ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಕೊಪ್ಪಳ ಜಿಲ್ಲಾ  ಸಹಾಯಕ ಔಷಧ ನಿಯಂತ್ರಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular