HomeJobsಲಕ್ಷಾಂತರ ರೂಪಾಯಿ ಪ್ಯಾಕೇಜ್ ಪಡೆಯಬೇಕೆ? ಹಾಗಾದರೆ ಬೆಂಗಳೂರಿನ ಈ 5 ಸಾಫ್ಟ್‌ವೇರ್ ದೈತ್ಯ ಕಂಪನಿಗಳ ಮೇಲೆ...

ಲಕ್ಷಾಂತರ ರೂಪಾಯಿ ಪ್ಯಾಕೇಜ್ ಪಡೆಯಬೇಕೆ? ಹಾಗಾದರೆ ಬೆಂಗಳೂರಿನ ಈ 5 ಸಾಫ್ಟ್‌ವೇರ್ ದೈತ್ಯ ಕಂಪನಿಗಳ ಮೇಲೆ ಕಣ್ಣಿಡಿ

ಬೆಂಗಳೂರು: ಪೋಷಕರು ಸಾಲಸೋಲ ಮಾಡಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿರುತ್ತಾರೆ. ಆದರೆ ಓದು ಮುಗಿಸಿ ಹೊರಬಂದಾಗ ಅಂದುಕೊಂಡ ಸಂಬಳದ ಕೆಲಸ ಸಿಗುವುದು ಸುಲಭವಲ್ಲ. ಒಂದು ವೇಳೆ ನೀವು ಪ್ರತಿಭಾವಂತರಾಗಿದ್ದು, ಈಗಷ್ಟೇ ಪದವಿ ಮುಗಿಸಿ ಕೆಲಸ ಹುಡುಕುತ್ತಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಇದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಕೆಲವು ಟಾಪ್ ಕಂಪನಿಗಳು ಫ್ರೆಶರ್‌ಗಳಿಗೆ ಮೊದಲ ಕೆಲಸದಲ್ಲೇ ಲಕ್ಷಾಂತರ ರೂಪಾಯಿ ಪ್ಯಾಕೇಜ್ ನೀಡುತ್ತಿವೆ.ಹಾಗಾದರೆ, ಫ್ರೆಶರ್‌ಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಆ ಟಾಪ್ 5 ಕಂಪನಿಗಳು ಯಾವುವು? ಇಲ್ಲಿದೆ ನೋಡಿ ಮಾಹಿತಿ

1.ಅಟ್ಲಾಸಿಯನ್ (Atlassian) 🇦🇺🇺🇸
ಇದು ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಉಪಕರಣಗಳನ್ನು ತಯಾರಿಸುವ ಪ್ರಸಿದ್ಧ ಕಂಪನಿ. ಇಲ್ಲಿ ನೀವು ಫ್ರೆಶರ್ ಆಗಿ ಸೇರಿದರೆ ವರ್ಷಕ್ಕೆ 32 ರಿಂದ 100 ಲಕ್ಷ ರೂಪಾಯಿ (LPA) ವರೆಗೂ ಸಂಬಳ ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2.ಅಡೋಬ್ (Adobe) 🇺🇸
ಡಿಜಿಟಲ್ ಕ್ರಿಯೇಶನ್ ಮತ್ತು ಮಾರ್ಕೆಟಿಂಗ್ ಸಾಫ್ಟ್‌ವೇರ್‌ಗಳಲ್ಲಿ ಜಗತ್ತಿನಲ್ಲೇ ಹೆಸರುವಾಸಿಯಾಗಿರುವ ಅಡೋಬ್ ಕಂಪನಿಯು, ಪ್ರತಿಭಾವಂತ ಫ್ರೆಶರ್‌ಗಳಿಗೆ ವರ್ಷಕ್ಕೆ ಸುಮಾರು 62 ಲಕ್ಷ ರೂಪಾಯಿ (LPA) ವರೆಗೂ ವೇತನ ನೀಡುತ್ತದೆ.

3.ಗೂಗಲ್ (Google)
ಇಂಟರ್ನೆಟ್ ಲೋಕದ ದೈತ್ಯ ಗೂಗಲ್ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಸುಮಾರು 30 ಲಕ್ಷ ರೂಪಾಯಿ (LPA) ವರೆಗೂ ಸ್ಯಾಲರಿ ಪ್ಯಾಕೇಜ್ ನೀಡುತ್ತಿದೆ.

4.ಮೈಕ್ರೋಸಾಫ್ಟ್ (Microsoft)
ಮೈಕ್ರೋಸಾಫ್ಟ್ ಕಂಪನಿಯು ಬೆಂಗಳೂರಿನಲ್ಲಿ ಫ್ರೆಶರ್‌ಗಳಿಗಾಗಿ ಬಾಗಿಲು ತೆರೆದಿದ್ದು, ಆರಂಭಿಕ ಹಂತದಲ್ಲೇ ಸುಮಾರು 15 ರಿಂದ 30 ಲಕ್ಷ ರೂಪಾಯಿ (LPA) ವರೆಗೂ ಸಂಬಳದ ಆಫರ್ ನೀಡುತ್ತಿದೆ.

5.ಅಮೆಜಾನ್ (Amazon)
ಇ-ಕಾಮರ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದ ಅಧಿಪತಿ ಅಮೆಜಾನ್ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ವರ್ಷಕ್ಕೆ 20 ಲಕ್ಷ ರೂಪಾಯಿ (LPA) ಜೊತೆಗೆ ಆಕರ್ಷಕ ಬೋನಸ್‌ಗಳನ್ನು ಕೂಡ ನೀಡುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular