HomeKarnatakaBIG NEWS: ಬೆಂಗಳೂರಿನಲ್ಲಿ ಮುಂದುವರೆದ ಕಸದ ಸಮಸ್ಯೆ: ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು

BIG NEWS: ಬೆಂಗಳೂರಿನಲ್ಲಿ ಮುಂದುವರೆದ ಕಸದ ಸಮಸ್ಯೆ: ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಮುಂದುವರೆದಿದೆ. ಬೆಂಗಳೂರು ನಗರದಲ್ಲಿ ಸಂಗ್ರಹಿಸುವ ತ್ಯಾಜ್ಯವಿಲೇವಾರಿಗೆ ಅವಕಾಶ ನೀಡದೇ ಗ್ರಾಮಸ್ಥರು ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಗ್ರಹಿಸುವ ವಾಹನಗಳು ನಿಂತಲ್ಲೇ ನಿಂತಿವೆ.

ಅಭಿವೃದ್ಧಿ ಶುಲ್ಕದ ವಿಚಾರವಾಗಿ ಜಿಬಿಎ ಮತ್ತು ಗ್ರಾಮಸ್ಥರ ನಡುವೆ ಉಂಟಾಗಿರುವ ಭಿನ್ನಮತದಿಂದ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆಉದ್ಭವಿಸಿದ್ದು, ಬಾಗಲೂರು, ಮಹದೇವಪುರ, ದೊಡ್ಡಬಳ್ಳಾಪುರದ ಹಲವೆಡೆಗಳಲ್ಲಿ ಕಸದ ವಾಹನಗಳು ಸಾಲು ಸಾಲಾಗಿ ನಿಂತಿವೆ. ನಗರದಲ್ಲಿ ಮತ್ತೆ ಎಲ್ಲೆಂದರಲ್ಲಿ ಕಸದ ರಾಶಿಗಳು ರಾರಾಜಿಸುತ್ತಿವೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಕೆ.ಆರ್. ಮಾರುಕಟ್ಟೆ ಬಳಿ 25-30ಕ್ಕೂ ಹೆಚ್ಚು ಆಟೋಗಳು ಮತ್ತು ಲಾರಿಗಳು ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ನಿನ್ನೆಯಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಬೆಂಗಳೂರಿನಿಂದ ಹೊರಟಿರುವ ಕಸ ತುಂಬಿದ ಲಾರಿಗಳನ್ನು ಬೆಳ್ಳಹಳ್ಳಿ ಮತ್ತು ದೊಡ್ಡಬಳ್ಳಾಪುರದಲ್ಲಿ ಡಂಪ್ ಮಾಡಲು ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಅಡ್ಡಿಪಡಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಶುಲ್ಕ ಬಿಡುಗಡೆ ಮಾಡಿಲ್ಲ ಎಂಬುದು ಅವರ ಆರೋಪ.

ದೊಡ್ಡಬಳ್ಳಾಪುರದಲ್ಲಿ ಕಸವೂ ಬೇಡ, ಹಣವೂ ಬೇಡ ಎಂಬ ವಾದವಿದ್ದರೆ, ಇತರೆ ಡಂಪಿಂಗ್ ಯಾರ್ಡ್‌ಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಬೇಡಿಕೆಯಿದೆ. ಹೀಗಾಗಿ ಕಸದ ಲಾರಿಗಳು ಡಂಪಿಂಗ್ ಯಾರ್ಡ್‌ಗಳ ಹೊರಗೆ ನಿಂತಿವೆ. ಇದರಿಂದಾಗಿ ಹೊಸ ಕಸ ಸಂಗ್ರಹಿಸಲು ಲಾರಿಗಳ ಕೊರತೆ ಎದುರಾಗಿದ್ದು, ಮತ್ತೆ ನಗರದಲ್ಲಿ ಕಸದ ಸಮಸ್ಯೆ ತಲೆ ಎತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular