HomeKarnataka26 ತಿಂಗಳ ಹಿಂಬಾಕಿ ಕೊಡ್ತಿರುವುದಕ್ಕೆ ಖುಷಿ ಪಡಬೇಕು: ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು: ಮುಷ್ಕರ ಕೈಬಿಡಲು...

26 ತಿಂಗಳ ಹಿಂಬಾಕಿ ಕೊಡ್ತಿರುವುದಕ್ಕೆ ಖುಷಿ ಪಡಬೇಕು: ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು: ಮುಷ್ಕರ ಕೈಬಿಡಲು ಸಾರಿಗೆ ನೌಕರರಿಗೆ ಡಿಸಿಎಂ ಡಿಕೆ ಮನವಿ

ಬೆಂಗಳೂರು: ಸಾರಿಗೆ ನೌಕರರು ಸರ್ಕಾರದ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು. 26 ತಿಂಗಳ ವೇತನ ಹಿಂಬಾಕಿ ಕೊಡುತ್ತಿರುವುದಕ್ಕೆ ಖುಷಿ ಪಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದು, ಸಾರಿಗೆ ನೌಕರರು ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ, ಸಾರಿಗೆ ನೌಕರರು ಸರ್ಕಾರದ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು. 26 ತಿಂಗಳ ಹಿಂಬಾಕಿ ಕೊಟ್ಟಿದ್ದಾರಲ್ಲ ಖುಷಿ ಪಡಬೇಕು. ಸಾರಿಗೆ ನೌಕರರು ದಯವಿಟ್ಟು ಮುಷ್ಕರ ಕೈ ಬಿಟ್ಟು ಸಹಕರಿಸಬೇಕು. 26ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಲಾಗಿದೆ. 1271.92 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಸೂಚನೆ ನೀಡಿದೆ. ಸದ್ಯ ಸಾರಿಗೆ ನೌಕರರಿಗೆ ಅಷ್ಟು ಹಣ ನೀಡಿದ್ದೇವಲ್ಲ ಖುಷಿ ಪಡಬೇಕು. ಸರ್ಕಾರದ ಪರಿಸ್ಥಿತಿಯನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು. ದಯವಿಟ್ಟು ಸಾರಿಗೆ ನೌಕರರು ಸಹಕಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular