HomeLatest News'ಬ್ಯುಸಿನೆಸ್' ಮಾಡೋ ಆಸೆ ಇದೆಯೇ ? ಕೇವಲ 20,000 ದಲ್ಲಿ ಶುರು ಮಾಡಿ ಲಕ್ಷಾಧಿಪತಿಯಾಗಬಹುದು.!

‘ಬ್ಯುಸಿನೆಸ್’ ಮಾಡೋ ಆಸೆ ಇದೆಯೇ ? ಕೇವಲ 20,000 ದಲ್ಲಿ ಶುರು ಮಾಡಿ ಲಕ್ಷಾಧಿಪತಿಯಾಗಬಹುದು.!

ಬೆಂಗಳೂರು : ಸ್ವಂತ ಉದ್ಯೋಗ ಮಾಡುವ ಹಂಬಲವಿದ್ದು, ಬಂಡವಾಳದ ಕೊರತೆ ಎದುರಿಸುತ್ತಿರುವವರಿಗೆ ‘ನಾಟಿಕೋಳಿ ಸಾಕಣೆ’ ಒಂದು ಅತ್ಯುತ್ತಮ ಮಾರ್ಗವಾಗಿದೆ. ಕೇವಲ 20,000 ರೂಪಾಯಿ ಹೂಡಿಕೆಯೊಂದಿಗೆ ಈ ಉದ್ಯಮವನ್ನು ಆರಂಭಿಸಿ, ಲಕ್ಷಾಂತರ ರೂಪಾಯಿ ಗಳಿಸಬಹುದು ಎಂದು ತಜ್ಞರು ಮತ್ತು ಅನುಭವಿ ರೈತರು ಸಲಹೆ ನೀಡಿದ್ದಾರೆ.

200 ಅಪ್ಪಟ ನಾಟಿಕೋಳಿ ಮರಿಗಳನ್ನು ಖರೀದಿಸಲು (ಒಂದಕ್ಕೆ ಅಂದಾಜು 60 ರೂ.ನಂತೆ) 12,000 ರೂ. ಬೇಕಾಗುತ್ತದೆ.: ಮೊದಲ ಮೂರು ತಿಂಗಳ ಮೇವಿಗಾಗಿ ಸುಮಾರು 8,000 ರೂ. ಮೀಸಲಿಡಬೇಕು.ಒಟ್ಟು ಆದಾಯ: 200 ಮರಿಗಳಲ್ಲಿ 30 ಮರಿಗಳು ಅನಿವಾರ್ಯ ಕಾರಣಗಳಿಂದ ಸಾವನ್ನಪ್ಪಿದರೂ, ಉಳಿದ 170 ಕೋಳಿಗಳು 6 ತಿಂಗಳ ಅವಧಿಯಲ್ಲಿ ತಲಾ 1.5 ರಿಂದ 2 ಕೆಜಿ ತೂಕ ಬರುತ್ತವೆ.

ಲಾಭ: ಮಾರುಕಟ್ಟೆಯಲ್ಲಿ ನಾಟಿಕೋಳಿ ಕೆಜಿಗೆ 400-500 ರೂ. ಬೆಲೆ ಇರುತ್ತದೆ. 170 ಕೋಳಿಗಳಿಂದ ಸುಮಾರು 1,02,000 ರೂ. ಆದಾಯ ಬರಬಹುದು. ಎಲ್ಲಾ ಖರ್ಚುಗಳನ್ನು ಕಳೆದರೂ 60,000 ರೂ.ಗಿಂತ ಅಧಿಕ ನಿವ್ವಳ ಲಾಭ ಪಡೆಯಲು ಸಾಧ್ಯವಿದೆ.
ತಳಿಗಳ ಆಯ್ಕೆ ಮುಖ್ಯ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಿರಿರಾಜ, ವನರಾಜ ಅಥವಾ ಕ್ರಾಸ್ಬ್ರೀಡ್ಗಳಿಗಿಂತ ‘ಅಪ್ಪಟ ನಾಟಿಕೋಳಿ ‘ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ಒಂದು ಹುಂಜವು 1,000 ದಿಂದ 1,500 ರೂಪಾಯಿವರೆಗೂ ಮಾರಾಟವಾಗುತ್ತದೆ.

ಪಾಲನೆ ಮತ್ತು ಆಹಾರ ಕ್ರಮ:
ಕೋಳಿ ಮರಿಗಳಿಗೆ ಮೊದಲ ದಿನಗಳಲ್ಲಿ ಉಷ್ಣಾಂಶ ಬಹಳ ಮುಖ್ಯ. 200 ವಾಟ್ನ ಬಲ್ಬ್ಗಳನ್ನು ಬಳಸಿ 34-36 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಕಾಯ್ದುಕೊಳ್ಳಬೇಕು.ಮೊದಲ ಮೂರು ತಿಂಗಳು ‘ಸ್ಟಾರ್ಟರ್ ಫೀಡ್’ ನೀಡಬೇಕು. ನಂತರ ಮನೆಯಲ್ಲೇ ತಯಾರಿಸಿದ ಜೋಳ, ಸಜ್ಜೆ ಅಥವಾ ರಾಗಿಯ ನುಚ್ಚನ್ನು ನೀಡಬಹುದು. ಅಕ್ಕಿ ನುಚ್ಚು ನೀಡಿದರೆ ಮರಿಗಳಿಗೆ ಅತಿಸಾರ (Loose motion) ಉಂಟಾಗುವ ಸಾಧ್ಯತೆ ಇರುತ್ತದೆ.ಮಳೆನೀರು ಸಾಕಾಣಿಕಾ ಕೇಂದ್ರದ ಒಳಗೆ ಬರದಂತೆ ಮತ್ತು ಕಾಗೆ, ಗುಬ್ಬಚ್ಚಿಗಳಂತಹ ಹೊರಗಿನ ಪಕ್ಷಿಗಳಿಂದ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕು.

ನಿರೋಧಕ ಲಸಿಕೆಗಳು:
ಕೋಳಿ ಸಾಕಣೆಯಲ್ಲಿ ಲಸಿಕೆ ಹಾಕಿಸುವುದು ಅತ್ಯಗತ್ಯ.
• 5ನೇ ದಿನ: ಲಸೋಟಾ (ಕೊಕ್ಕೆ ರೋಗ ಅಥವಾ ರಾಣಿಖೇತ್ ತಡೆಗೆ).
• 14ನೇ ದಿನ: ಗಂಬೋರೋ ಲಸಿಕೆ.
• 35ನೇ ದಿನ: ಫೌಲ್ ಪಾಕ್ಸ್ (ಮಶೂಚಿ) ಲಸಿಕೆ.

ಗಮನಿಸಿ: ಈ ಮಾಹಿತಿಯು ಕೇವಲ ಮಾಹಿತಿಗಾಗಿ ಮಾತ್ರ. ಉದ್ಯಮ ಆರಂಭಿಸುವ ಮೊದಲು ಪಶು ವೈದ್ಯರ ಅಥವಾ ತಜ್ಞರ ಸಲಹೆ ಪಡೆಯುವುದು ಉತ್ತಮ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular