HomeLatest Newsಆಂಧ್ರ ಪ್ರದೇಶಕ್ಕೆ ಆಗಮಿಸಿದ ಬಿಲ್ ಗೇಟ್ಸ್: ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಚರ್ಚೆ

ಆಂಧ್ರ ಪ್ರದೇಶಕ್ಕೆ ಆಗಮಿಸಿದ ಬಿಲ್ ಗೇಟ್ಸ್: ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಚರ್ಚೆ

ಗೇಟ್ಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಲ್ ಗೇಟ್ಸ್ ಸೋಮವಾರ ಆಂಧ್ರ ಪ್ರದೇಶಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಐಟಿ ಸಚಿವ ನಾರಾ ಲೋಕೇಶ್ ಬಿಲ್ ಗೇಟ್ಸ್ ಅವರನ್ನು ಸ್ವಾಗತಿಸಿದರು.

ಈ ಕುರಿತು ನಾರಾ ಲೋಕೇಶ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು, ಅಮರಾವತಿಗೆ ಸುಸ್ವಾಗತ, ಶ್ರೀ ಬಿಲ್ ಗೇಟ್ಸ್ ಅವರೇ. ಗನ್ನವರಂ ವಿಮಾನ ನಿಲ್ದಾಣದಲ್ಲಿ ಇಂದು ಗೇಟ್ಸ್ ಫೌಂಡೇಶನ್‌ನ ಅಧ್ಯಕ್ಷರನ್ನು ನನ್ನ ಸಹೋದ್ಯೋಗಿಗಳಾದ ಗೃಹ ಸಚಿವೆ ಶ್ರೀಮತಿ ಅನಿತಾ ಗಾರು, ಕೃಷಿ ಸಚಿವ ಶ್ರೀ ಅಚ್ಚನ್ನಾಯ್ಡು ಗಾರು ಮತ್ತು ಆರೋಗ್ಯ ಸಚಿವ ಶ್ರೀ ಸತ್ಯ ಕುಮಾರ್‌ಗಾರು ಅವರೊಂದಿಗೆ ಸ್ವಾಗತಿಸಿದ್ದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಆರೋಗ್ಯ, ಕೃಷಿ, ಶಿಕ್ಷಣ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದಲ್ಲಿ ಸಹಭಾಗಿತ್ವವನ್ನು ಬಲಪಡಿಸುವ ಕುರಿತು ಚರ್ಚಿಸಲು ನಾವು ಈಗ ಸಚಿವಾಲಯಕ್ಕೆ ತೆರಳಿದ್ದೇವೆ. ನಮ್ಮ ಜನರಿಗಾಗಿ ಗೇಟ್ಸ್ ಫೌಂಡೇಶನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ಆಂಧ್ರಪ್ರದೇಶ ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೇಟ್ಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಲ್ ಗೇಟ್ಸ್ ಆಂಧ್ರ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದೊಂದಿಗೆ ಸಹಯೋಗವನ್ನು ವಿಸ್ತರಿಸುವ ಕುರಿತು ಸೋಮವಾರ ಸಭೆಗಳನ್ನು ನಡೆಸಲಿದ್ದಾರೆ.

ಮಾಹಿತಿಗಳ ಪ್ರಕಾರ ಗೇಟ್ಸ್ ಫೌಂಡೇಶನ್‌ನ ಬೆಂಬಲದೊಂದಿಗೆ ಪ್ರಸ್ತುತ ನಡೆಯುತ್ತಿರುವ ಯೋಜನೆಗಳನ್ನು ವಿಸ್ತರಿಸುವ ಕುರಿತು ಗೇಟ್ಸ್ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಐಟಿ ಸಚಿವ ನಾರಾ ಲೋಕೇಶ್ ಅವರೊಂದಿಗೆ ವಿವರವಾದ ಚರ್ಚೆ ನಡೆಸಲಿದ್ದಾರೆ.

ಬಿಲ್ ಗೇಟ್ಸ್ ಮೊದಲು ಅಮರಾವತಿಯ ರಾಜ್ಯ ಸಚಿವಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯನ್ನು ಪರಿಶೀಲನೆ ನಡೆಸಲು ರಿಯಲ್ ಟೈಮ್ ಗವರ್ನೆನ್ಸ್ ಸಿಸ್ಟಮ್ (RTGS) ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.

ಅಲ್ಲಿ ಮುಖ್ಯಮಂತ್ರಿಗಳು ರಾಜ್ಯದ ರಿಯಲ್ ಟೈಮ್ ಮಾನಿಟರಿಂಗ್ ಫ್ರೇಮ್‌ವರ್ಕ್ ಮತ್ತು ಅದರ ಫಲಿತಾಂಶಗಳ ಬಗ್ಗೆ ಬಿಲ್ ಗೇಟ್ಸ್ ಅವರಿಗೆ ವಿವರಣೆ ನೀಡಲಿದ್ದಾರೆ. ಬಿಲ್ ಗೇಟ್ಸ್ ಜೊತೆ ರಾಜ್ಯದಲ್ಲಿ ಇಂದು ಸರಣಿ ಸಭೆಗಳು ನಿಗದಿಯಾಗಿವೆ.

ಬಿಲ್ ಗೇಟ್ಸ್ ಅವರಿಗೆ ಮುಖ್ಯಮಂತ್ರಿಗಳು ‘ಸ್ವರ್ಣ ಆಂಧ್ರ 2047’ ವಿಷನ್ ಅನ್ನು ವಿವರಿಸಲಿದ್ದಾರೆ. ಇದರಲ್ಲಿ ಸಾರ್ವಜನಿಕ ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗಳ ಜೊತೆಗೆ ಮೆಡ್-ಟೆಕ್, ರೋಗನಿರ್ಣಯ ಸೇವೆಗಳು ಮತ್ತು ಸಂಜೀವಿನಿ ಡಿಜಿಟಲ್ ಆರೋಗ್ಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಿದ್ದಾರೆ.

ಮತ್ತೊಂದು ಕಡೆ ಗೇಟ್ಸ್ ಫೌಂಡೇಶನ್ ತಂಡ ಉಂಡವಲ್ಲಿ ಗ್ರಾಮದ ಸಮೀಪವಿರುವ ಕೃಷಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಡ್ರೋನ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನಗಳನ್ನು ಬಳಸುವ ಕೃಷಿ ಪದ್ಧತಿಗಳನ್ನು ವೀಕ್ಷಿಸಲಿದ್ದಾರೆ.

ಗೇಟ್ಸ್ ಫೌಂಡೇಶನ್ ಈಗಾಗಲೇ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಆರೋಗ್ಯ ಸಂಬಂಧಿತ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇಂದಿನ ಮಾತುಕತೆಗಳ ಸಂದರ್ಭದಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸುವತ್ತ ಘೋಷಣೆ ಮಾಡುವ ನಿರೀಕ್ಷೆ ಇದೆ.

ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ಗೇಟ್ಸ್ ಅವರು ಆಂಧ್ರ ಪ್ರದೇಶಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಈ ಭೇಟಿ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular