HomeBusinessಚಿನ್ನಾಭರಣ ಪ್ರಿಯರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ: ವಿದೇಶದಿಂದ ತೆರಿಗೆ ರಹಿತವಾಗಿ 40 ಗ್ರಾಂ ಚಿನ್ನ ತರಲು...

ಚಿನ್ನಾಭರಣ ಪ್ರಿಯರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ: ವಿದೇಶದಿಂದ ತೆರಿಗೆ ರಹಿತವಾಗಿ 40 ಗ್ರಾಂ ಚಿನ್ನ ತರಲು ಅವಕಾಶ

ನವದೆಹಲಿ: ಕೇಂದ್ರ ಸರ್ಕಾರ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ವಿದೇಶದಿಂದ ಭಾರತಕ್ಕೆ ಮರಳುವ ಪ್ರಯಾಣಿಕರು ತರುವ ಚಿನ್ನದ ಆಭರಣದ ಮೌಲ್ಯದ ಬಗ್ಗೆ ಚಿಂತಿಸದೆ ಗರಿಷ್ಠ 40 ಗ್ರಾಂ ಚಿನ್ನ ತರಬಹುದಾಗಿದೆ.

ವಿದೇಶಗಳಿಂದ ಬರುವಾಗ, ಹೋಗುವಾಗ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಹೊಸ ಬ್ಯಾಗೇಜ್ ನೀತಿ 2026 ಜಾರಿಗೊಳಿಸಿದ್ದು, ಫೆಬ್ರವರಿ 2ರಿಂದ ಇದು ಅನುಷ್ಠಾನಕ್ಕೆ ಬರಲಿದೆ.

ಮಹಿಳೆಯರು ಗರಿಷ್ಠ 40 ಗ್ರಾಂ ಮತ್ತು ಇತರರು ಗರಿಷ್ಠ 20 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ತೆರಿಗೆ ರಹಿತವಾಗಿ ತರಬಹುದಾಗಿದೆ. ಚಿನ್ನದ ದರ ಭಾರಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶದಿಂದ ತರುವ ಚಿನ್ನಕ್ಕೆ ಮೌಲ್ಯದ ಮಿತಿ ಇರುವುದಿಲ್ಲ. ಈ ಹಿಂದೆ ಮಹಿಳಾ ಪ್ರಯಾಣಿಕರು 40 ಗ್ರಾಂ ವರೆಗೆ ಚಿನ್ನಾಭರಣ ತರಲು ಅವಕಾಶ ನೀಡಿದ್ದರೂ ಅದರ ಗರಿಷ್ಠ ಮಿತಿ 1 ಲಕ್ಷ ರೂ. ಇತ್ತು. ಪುರುಷರು 20 ಗ್ರಾಂ ವರೆಗಿನ ಗರಿಷ್ಠ 50 ಸಾವಿರ ರೂಪಾಯಿ ಮೌಲ್ಯದ ಆಭರಣಗಳನ್ನು ತರಲು ಅವಕಾಶವಿದ್ದು, ಇದರಿಂದ ಸಮಸ್ಯೆ ಎದುರಾಗಿದ್ದರಿಂದ ಸರ್ಕಾರದಿಂದ ಹೊಸ ನಿಯಮ ಜಾರಿಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೌಲ್ಯದ ಮಿತಿ ಇಲ್ಲದೆ ಮಹಿಳೆಯರು 40 ಗ್ರಾಂ, ಪುರುಷರು 20 ಗ್ರಾಂ ಚಿನ್ನಾಭರಣವನ್ನು ತೆರಿಗೆ ವಿನಾಯಿತಿಯಡಿ ತರಬಹುದಾಗಿದೆ. ಚಿನ್ನದ ಗಟ್ಟಿ ಅಥವಾ ಬಿಸ್ಕೆಟ್ ರೂಪದಲ್ಲಿ ತಂದರೆ ಅದನ್ನು ಹೂಡಿಕೆ ಎಂದು ಪರಿಗಣಿಸಿ ಸೀಮಾ ಸುಂಕ ವಿಧಿಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular