HomeLatest News90 ಕೆಜಿ ಗೋಧಿ ಕದ್ದಿದ್ದ ಕಳ್ಳ 45 ವರ್ಷಗಳ ಬಳಿಕ ಅರೆಸ್ಟ್

90 ಕೆಜಿ ಗೋಧಿ ಕದ್ದಿದ್ದ ಕಳ್ಳ 45 ವರ್ಷಗಳ ಬಳಿಕ ಅರೆಸ್ಟ್

ಭೋಪಾಲ್: 45 ವರ್ಷಗಳ ಹಿಂದೆ 90 ಕೆಜಿ ಗೋಧಿ ಕಳ್ಳತನ ಮಾಡಿದ್ದ ಆರೋಪಿಯನ್ನು ಈಗ ಬಂಧಿಸಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಆರೋಪಿ ಸಲೀಂ(59)ಎಂದು ಗುರುತಿಸಲಾಗಿದೆ. 1980ರಲ್ಲಿ ಆರೋಪಿ 90 ಕೆಜಿ ಗೋಧಿ ಕಳ್ಳತನ ಮಾಡಿದ್ದ. ಘಟನೆ ಬಳಿಕ ಆತ ತಲೆಮರೆಸಿಕೊಂಡು ರಹಸ್ಯವಾಗಿ ವಾಸವಾಗಿದ್ದ. ತನ್ನ ಮಗನೊಂದಿಗೆ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ. ಕಳ್ಳತನ ನಡೆದ ಸಮಯದಲ್ಲಿ ಗೋಧಿಯ ಮೌಲ್ಯ 184 ರೂ. ಆಗಿದ್ದು, ಪ್ರತಿ ಕಿಲೋಗ್ರಾಂಗೆ 2.05 ರೂ. ದರ ಇತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1980 ರಲ್ಲಿ ಖಾರ್ಗೋನ್ ಜಿಲ್ಲೆಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬಾಲ್ಸಮುದ್ ಪ್ರದೇಶದ ಬಳಿಯ ಹೊಲದಲ್ಲಿ ಗೋಧಿಯನ್ನು ಕದ್ದಿದ್ದಕ್ಕಾಗಿ ಏಳು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು, ಆದರೆ ಅವರಲ್ಲಿ ಇಬ್ಬರು ತಲೆಮರೆಸಿಕೊಂಡಿದ್ದರು. ವರ್ಷಗಳಲ್ಲಿ, ಏಳು ಆರೋಪಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಇತರ ನಾಲ್ವರು ಜಾಮೀನು ಪಡೆದಿದ್ದಾರೆ.ಆದರೆ ಆರೋಪಿ ಸಲೀಂ ಇಲ್ಲಿಯವರೆಗೆ ಪತ್ತೆಯಾಗಿರಲಿಲ್ಲ.

ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಶಾಶ್ವತವಾಗಿ ತಲೆಮರೆಸಿಕೊಂಡಿರುವವರನ್ನು ಪತ್ತೆಹಚ್ಚಲು ವಿಶೇಶ ತಂಡ ರಚಿಸಲಾಗಿತ್ತು. 1980 ರ ಹಳೆಯ ಕಳ್ಳತನ ಪ್ರಕರಣವನ್ನು ಪರಿಶೀಲಿಸುವಾಗ, ಒಬ್ಬ ಆರೋಪಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತನಿಖೆ ಚುರುಕುಗೊಳಿಸುದ ಪೊಲೀಸರು ಧಾರ್ ಜಿಲ್ಲೆಯ ಬಾಗ್‌ನಿಂದ ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಎಸ್‌ಡಿಒಪಿ ಶ್ವೇತಾ ಶುಕ್ಲಾ ತಿಳಿಸಿದ್ದಾರೆ.

ಸಲೀಂ ತನ್ನ ಗುರುತನ್ನು ಬದಲಾಯಿಸಿಕೊಂಡು ಅಪರಾಧ ಸ್ಥಳದಿಂದ ಕೇವಲ 90 ಕಿ.ಮೀ ದೂರದಲ್ಲಿ ವಾಸವಿದ್ದ. ಕಿರಾಣಿ ಅಂಗಡಿ ನಡೆಸುತ್ತಿದ್ದ, ಬಂಧನದ ನಂತರ, ಆತನನ್ನು ಕಾಸ್ರಾವಾಡ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular