HomeLatest Newsರೈಡ್ ಬುಕ್ ಆದ ಬೆನ್ನಲ್ಲೇ ಚಾಲಕನಿಗೆ ಶಾಕ್: 'ದೈಹಿಕ ಸಂಬಂಧ ಬೆಳೆಸ್ತೀರಾ?' ಎಂದು ಮೆಸೇಜ್ ಮಾಡಿದ...

ರೈಡ್ ಬುಕ್ ಆದ ಬೆನ್ನಲ್ಲೇ ಚಾಲಕನಿಗೆ ಶಾಕ್: ‘ದೈಹಿಕ ಸಂಬಂಧ ಬೆಳೆಸ್ತೀರಾ?’ ಎಂದು ಮೆಸೇಜ್ ಮಾಡಿದ ಗ್ರಾಹಕ |VIDEO

ಗುರುಗ್ರಾಮ : ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವು ನಗಿಸಿದರೆ, ಇನ್ನು ಕೆಲವು ಬೆಚ್ಚಿಬೀಳಿಸುತ್ತವೆ. ಆದರೆ, ಈಗ ವೈರಲ್ ಆಗುತ್ತಿರುವ ವಿಡಿಯೋವೊಂದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಹರಿಯಾಣದ ಗುರುಗ್ರಾಮದ ಕ್ಯಾಬ್ ಚಾಲಕನೊಬ್ಬ, ಗ್ರಾಹಕನೋರ್ವ ರೈಡ್ ಬುಕ್ ಮಾಡಿದ ನಂತರ ಕಳುಹಿಸಿದ ಅಸಭ್ಯ ಸಂದೇಶಗಳ ಲೈವ್ ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ.

ಏನಿದು ಘಟನೆ..? ಆಗಿದ್ದೇನು

ವಿಶಾಲ್ ಎಂಬ ಕ್ಯಾಬ್ ಚಾಲಕ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. “ಹಿಂದೆ ಇಂತಹ ಅನುಭವಗಳು ರಾಪಿಡೋ (ಬೈಕ್ ಟ್ಯಾಕ್ಸಿ) ಚಾಲಕರಿಗೆ ಮಾತ್ರ ಆಗುತ್ತಿತ್ತು. ಆದರೆ ಈಗ ಕ್ಯಾಬ್ ಚಾಲಕರಿಗೂ ಇದು ತಪ್ಪಿಲ್ಲ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಗ್ರಾಹಕರು ಹೆಚ್ಚಾಗಿ ದೇವಸ್ಥಾನಗಳಿಗೆ ಹೋಗಲು ರೈಡ್ ಬುಕ್ ಮಾಡುತ್ತಾರೆ. ಆದರೆ ಕ್ಯಾಬ್ ಕನ್ಫರ್ಮ್ ಆಗುತ್ತಿದ್ದಂತೆ ಚಾಲಕನಿಗೆ ಮೆಸೇಜ್ ಕಳುಹಿಸಿ, “ಹಲೋ ಬ್ರೋ, ಸೆ (ದೈಹಿಕ ಸಂಬಂಧ) ಮಾಡ್ತೀರಾ? ಆಸಕ್ತಿ ಇದ್ದರೆ ವಾಟ್ಸಾಪ್ ನಂಬರ್ ಶೇರ್ ಮಾಡಿ”* ಎಂದು ಅಶ್ಲೀಲ ಬೇಡಿಕೆ ಇಡುತ್ತಾರೆ ಎಂದು ವಿಶಾಲ್ ವಿಡಿಯೋದಲ್ಲಿ ತೋರಿಸಿದ್ದಾರೆ.ವೈರಲ್ ವಿಡಿಯೋದಲ್ಲಿ ಚಾಲಕ ಅಶ್ಲೀಲ ಸಂದೇಶಕ್ಕೆ ‘ನೋ’ (ಇಲ್ಲ) ಎಂದು ಉತ್ತರಿಸಿದ ತಕ್ಷಣ, ಗ್ರಾಹಕನು ರೈಡ್ ಕ್ಯಾನ್ಸಲ್ ಮಾಡಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಒಂದು ವೇಳೆ ಕ್ಯಾಬ್ ಚಾಲಕ ಪ್ರಯಾಣಿಕರಿಗೆ ಇಂತಹ ಸಂದೇಶ ಕಳುಹಿಸಿದ್ದರೆ ಕಂಪನಿಗಳು ತಕ್ಷಣ ಕ್ರಮ ಕೈಗೊಳ್ಳುತ್ತಿದ್ದವು. ಆದರೆ ಚಾಲಕರಿಗೆ ಪ್ರತಿದಿನ ಇಂತಹ ಅನುಭವವಾದರೂ ಕಂಪನಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ” ಎಂದು ವಿಶಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಆಕ್ರೋಶ:

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಒಬ್ಬ ಬಳಕೆದಾರ “ಬುಲಾವತಿ ಹೈ.. ಮಗರ್ ಜಾನೆಕಾ ನಹಿ” (ಕರೆಯುತ್ತಾರೆ, ಆದರೆ ಹೋಗಬಾರದು) ಎಂದು ಕಾಮೆಂಟ್ ಮಾಡಿದ್ದಾರೆ.ಇನ್ನೊಬ್ಬ ಚಾಲಕ ಪ್ರತಿಕ್ರಿಯಿಸಿ, “ನನ್ನ ಜೊತೆಗೂ ದ್ವಾರಕಾದಲ್ಲಿ ಇಂತಹದ್ದೇ ಘಟನೆ ನಡೆದಿತ್ತು, ನಾನು ನಿರಾಕರಿಸಿದಾಗ ಆತ ರೈಡ್ ಕ್ಯಾನ್ಸಲ್ ಮಾಡಿದ್ದ” ಎಂದು ತನ್ನ ಅನುಭವ ಹಂಚಿಕೊಂಡಿದ್ದಾನೆ.

ಇತ್ತೀಚೆಗಷ್ಟೇ ಚಂಡೀಗಢದಲ್ಲಿ ಕ್ಯಾಬ್ ಚಾಲಕನೊಬ್ಬ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿ, ಉಚಿತ ಪ್ರಯಾಣದ ಬದಲಿಗೆ ದೈಹಿಕ ಸಂಬಂಧಕ್ಕೆ ಬೇಡಿಕೆಯಿಟ್ಟಿದ್ದ ಘಟನೆ ದೊಡ್ಡ ಸುದ್ದಿಯಾಗಿತ್ತು. ಈಗ ಅದರ ಉಲ್ಟಾ ಅಂದರೆ, ಗ್ರಾಹಕರೇ ಚಾಲಕರಿಗೆ ಇಂತಹ ಬೇಡಿಕೆ ಇಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

View this post on Instagram

A post shared by 𝐕𝐢𝐬𝐡𝐚𝐥 𝐜𝐚𝐛 𝐝𝐫𝐢𝐯𝐞𝐫🚕 (@travelwith_vishalcab)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular