ಶಿವಮೊಗ್ಗ: ಬಹುತೇಕ ಕರಾವಳಿಯ ಕಲಾವಿದರನ್ನೊಳಗೊಂಡ ಹಾಗೂ ಶಿವಮೊಗ್ಗದ ಇಂಜಿನಿಯರ್ ಗಳು ಸೇರಿ ನಿರ್ಮಿಸಿರುವ ಚಿತ್ರ `ಮರಳಿ ಮನಸಾಗಿದೆ’ ಫೆ.12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಹರೀಶ್ ಎಸ್.ಎಂ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಚಿತ್ರೀಕರಣವನ್ನು ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವಾಗಿ ಕರಾವಳಿಯ ಪ್ರಕೃತಿ ಸೊಬಗಿನ ಸುಂದರ ತಾಣಗಳನ್ನು ಅತ್ಯಂತ ನವೀರಾಗಿ ಸೆರೆ ಹಿಡಿಯಲಾಗಿದೆ ಎಂದರು.
ಚಿತ್ರದ ನಾಯಕನಟರಾಗಿ ಪುತ್ತೂರಿನ ಅರ್ಜುನ್, ವೇದಾಂತ್, ನಾಯಕಿಯರಾಗಿ ನಿರೀಕ್ಷಾ ಶೆಟ್ಟಿ ಹಾಗೂ ಶ್ರುತಿ ವೆಂಕಟೇಶ್ ನಟಿಸಿದ್ದಾರೆ. ಕರಾವಳಿಯ ಪ್ರಸಿದ್ಧ ಹಾಸ್ಯನಟ ಬೋಜರಾಜ್ ವಾಮಂಜೂರು ಮತ್ತು ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ್, ಹಿರಿಯ ನಟ ನಾಗಾಭರಣ, ಸೀರುಂಡೆ ರಘು ನಟಿಸಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ನಾಗಾರಾಜ್ ಶಂಕರ್ ಅವರದ್ದಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೋಹನ್ ಪಟೇಲ್, ಪ್ರವೀಣ್, ಲೋಕೇಶ್, ನಾಗರಾಜ್ ಉಪಸ್ಥಿತರಿದ್ದರು.

