HomeLatest NewsSHOCKING : ಬೆಂಗಳೂರಲ್ಲಿ ಮಾವನಿಂದಲೇ ಸೊಸೆ ಮೇಲೆ 'ಲೈಂಗಿಕ ದೌರ್ಜನ್ಯ' : ಸೌಂದರ್ಯ ವರ್ಣಿಸಿ ಪತ್ರ...

SHOCKING : ಬೆಂಗಳೂರಲ್ಲಿ ಮಾವನಿಂದಲೇ ಸೊಸೆ ಮೇಲೆ ‘ಲೈಂಗಿಕ ದೌರ್ಜನ್ಯ’ : ಸೌಂದರ್ಯ ವರ್ಣಿಸಿ ಪತ್ರ ಓದುತ್ತಿದ್ದ ಕಾಮುಕ.!


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಸ್ಕಾರ ನೀಡಬೇಕಾದ ವ್ಯಕ್ತಿಯೊಬ್ಬ ತನ್ನ ಮನೆಯ ಸೊಸೆಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿರುವ ಹೀನಾಯ ಘಟನೆ ಬೆಳಕಿಗೆ ಬಂದಿದೆ. ಥಣಿಸಂದ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ, ಆಕೆಯ ಮಾವನೇ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ಹಿನ್ನೆಲೆ

ಬೆಂಗಳೂರಿನ ಕಾವ್ಲ ಭೈರಸಂದ್ರದಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ವ್ಯಕ್ತಿಯೇ ಈ ಪ್ರಕರಣದ ಆರೋಪಿ. ಸಂತ್ರಸ್ತ ಮಹಿಳೆಯು ಥಣಿಸಂದ್ರದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಸೊಸೆ ಒಬ್ಬಳೇ ಇದ್ದಾಗ ಮಾವ ತನ್ನ ಕಾಮದ ಅಟ್ಟಹಾಸ ಮೆರೆಯುತ್ತಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌಂದರ್ಯ ವರ್ಣಿಸಿ ಪತ್ರ: ಆರೋಪಿಯು ಸೊಸೆಯ ಸೌಂದರ್ಯದ ಬಗ್ಗೆ ಅಸಭ್ಯವಾಗಿ ಪತ್ರಗಳನ್ನು ಬರೆಯುತ್ತಿದ್ದ. ಅಷ್ಟೇ ಅಲ್ಲದೆ, ಆ ಪತ್ರಗಳನ್ನು ಸೊಸೆಯ ಮುಂದೆಯೇ ಓದಿ ತೋರಿಸಿ ವಿಕೃತ ಆನಂದ ಅನುಭವಿಸುತ್ತಿದ್ದ. ಕಿರುಕುಳ ಕೇವಲ ಮನೆಗೆ ಸೀಮಿತವಾಗಿರಲಿಲ್ಲ. ಸಂತ್ರಸ್ತೆಯ ಶಾಲೆಯ ಕ್ಯಾಬಿನ್ ಒಳಗೆ ನುಗ್ಗಿ, “ನೀನು ತುಂಬಾ ಸುಂದರವಾಗಿದ್ದೀಯಾ, ನನ್ನ ಆಸೆ ಈಡೇರಿಸು” ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.ಒಂದು ವೇಳೆ ಈ ವಿಷಯವನ್ನು ಪತಿಗೆ (ತನ್ನ ಮಗನಿಗೆ) ತಿಳಿಸಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿದ್ದ.

ಪತಿಯಿಂದ ಬುದ್ದಿವಾದ ಹೇಳಿದರೂ ನಿಲ್ಲದ ಕಿರುಕುಳ
ಮಾವನ ಕಾಟ ತಾಳಲಾರದೆ ಕೊನೆಗೆ ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ. ಮಗನು ತನ್ನ ತಂದೆಗೆ ಹಲವಾರು ಬಾರಿ ಬುದ್ಧಿವಾದ ಹೇಳಿ ತಿದ್ದಿಕೊಳ್ಳುವಂತೆ ಸೂಚಿಸಿದ್ದರೂ, ಆರೋಪಿ ತನ್ನ ವರ್ತನೆಯನ್ನು ಬದಲಿಸಿಕೊಳ್ಳದೆ ಕಿರುಕುಳ ಮುಂದುವರಿಸಿದ್ದ ಎನ್ನಲಾಗಿದೆ. ಆರೋಪಿ ಮಾವನ ಅತಿರೇಕದ ವರ್ತನೆಯಿಂದ ರೋಸಿಹೋದ ಮಹಿಳೆ, ಈಗ ಆರ್ಟಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮಾವನ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular