HomeLatest Newsಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಿದರೆ ಹುಷಾರ್: ಭಾರಿ ದಂಡ ಪಾವತಿಸಬೇಕಾಗುತ್ತೆ ಎಚ್ಚರ

ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಿದರೆ ಹುಷಾರ್: ಭಾರಿ ದಂಡ ಪಾವತಿಸಬೇಕಾಗುತ್ತೆ ಎಚ್ಚರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ಎಲ್ಲೆಂದರಲ್ಲಿ ಆಹಾರ ಹಾಕುವುದರಿಂದ ಬೀದಿನಾಯಿಗಳು ಇನ್ನಷ್ಟು ಆಟಾಟೋಪ ಮೆರೆಯುತ್ತಿವೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಶ್ವಾನಪ್ರೊಯರು ಭಾರಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು, ಮಹಿಳೆಯರು ಹಿರಿಯರ ಮೇಲೆ ನಾಯಿ ದಾಳಿಯೂ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ಕೊನೆಗೂ ಎಚ್ಚೆತ್ತುಕೊಂಡಿದೆ.

ಇನ್ಮುಂದೆ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕುವಂತಿಲ್ಲ. ಜಿಬಿಎ ಸೂಚಿಸಿದ ಜಾಗಗಳಲ್ಲಿ ಮಾತ್ರ ಆಹಾರವನ್ನು ಹಾಕಬೇಕು ಎಂದು ಹೊಸ ನಿಯಮ ರೂಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲೆಂದರಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವುದಕ್ಕೆ ಬ್ರೇಕ್ ಹಾಕಲಾಗಿದ್ದು, ಈ ಮೂಲಕ ಶ್ವಾನಪ್ರಿಯರು ಮತ್ತು ಸಾರ್ವಜನಿಕರ ಸಂಘರ್ಷ ತಪ್ಪಿಸಲು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳನ್ನು ಹೊರತಾಗಿ ಬೇರೆಡೆ ಬೀದಿನಾಯಿಗಳಿಗೆ ಆಹಾರ ನೀಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ಜಿಬಿಎ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಲ್ಲಿ ಪಶುಪಾಲನಾ ಇಲಾಖೆಯು ಒಟ್ಟು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ. ಶೀಘ್ರದಲ್ಲೇ ಈ ಗುರುತಿಸಲಾದ ಸ್ಥಳಗಳಲ್ಲಿ ಶ್ವಾನಗಳಿಗೆ ಆಹಾರ ನೀಡುವ ಸ್ಥಳ ಎಂಬ ಫಲಕಗಳನ್ನು ಅಳವಡಿಸಲಾಗುವುದು.

ಅಧಿಕೃತ ಸ್ಥಳಗಳನ್ನು ಬಿಟ್ಟು ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಕಡೆಗಳಲ್ಲಿ ಆಹಾರ ನೀಡಿದರೆ ದಂಡ ವಿಧಿಸಲು ಜಿಬಿಎ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ನೀಡುವವರು ಆ ಜಾಗವನ್ನು ಸ್ವಚ್ಛವಾಗಿಡಬೇಕು ಮತ್ತು ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಆಹಾರ ನೀಡಬೇಕು ಎಂಬ ಸೂಚನೆ ನೀಡಲಾಗಿದೆ.

ಪಾಲಿಕೆವಾರು ಗುರುತಿಸಲಾದ ಆಹಾರ ಕೇಂದ್ರಗಳು:
ಪಾಲಿಕೆ ವ್ಯಾಪ್ತಿ ಆಹಾರ ಕೇಂದ್ರಗಳ ಸಂಖ್ಯೆ
ಬೆಂಗಳೂರು ಪೂರ್ವ- 150
ಬೆಂಗಳೂರು ಕೇಂದ್ರ – 90
ಬೆಂಗಳೂರು ಪಶ್ಚಿಮ – 85
ಬೆಂಗಳೂರು ಉತ್ತರ – 70
ಬೆಂಗಳೂರು ದಕ್ಷಿಣ – 68

ಜಿಬಿಎ ಈ ನಿರ್ಧಾರಕ್ಕೆ ಶ್ವಾನಪ್ರಿಯರು ಮತ್ತು ಪ್ರಾಣಿ ಹಕ್ಕು ಹೋರಾಟಗಾರರಿಂದ ಅಸಮಾಧಾನ ವ್ಯಕ್ತವಾಗಿದೆ. ನಾಯಿಗಳು ಟೆರಿಟೋರಿಯಲ್ ಪ್ರವೃತ್ತಿ ಹೊಂದಿದ್ದು, ಒಂದು ಏರಿಯಾದ ನಾಯಿಗಳು ಮತ್ತೊಂದು ಕಡೆ ಹೋಗಿ ಆಹಾರ ಸೇವಿಸುವುದಿಲ್ಲ. ಹೀಗಾಗಿ, ಎಲ್ಲೋ ಒಂದು ಕಡೆ ಆಹಾರ ಕೇಂದ್ರ ಮಾಡಿದರೆ ನಾಯಿಗಳ ನಡುವೆ ಕಾದಾಟಕ್ಕೆ ಮತ್ತು ಹಸಿವಿನಿಂದ ಅವುಗಳು ಇನ್ನಷ್ಟು ಆಕ್ರೋಶಗೊಳ್ಳಲು ಕಾರಣವಾಗಬಹುದು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular