HomeBusinessGold Rate Rise:ವಾರದ ಆರಂಭವೇ ಚಿನ್ನ-ಬೆಳ್ಳಿ ಶಾಕ್: ಚಿನ್ನ ₹2,240 ಏರಿಕೆ,ಬೆಳ್ಳಿ ದರ ₹3 ಲಕ್ಷಕ್ಕೆ...

Gold Rate Rise:ವಾರದ ಆರಂಭವೇ ಚಿನ್ನ-ಬೆಳ್ಳಿ ಶಾಕ್: ಚಿನ್ನ ₹2,240 ಏರಿಕೆ,ಬೆಳ್ಳಿ ದರ ₹3 ಲಕ್ಷಕ್ಕೆ ಜಿಗಿತ

ಇನ್ನೇನು ಚಿನ್ನದ ಬೆಲೆ ಇಳಿಕೆಯಾಗಲಿದೆ ಸ್ವಲ್ಪ ಕಾದು ಆಮೇಲೆ ಖರೀದಿಸೋಣ ಎಂದು ಕಾದಿದ್ದ ಗ್ರಾಹಕರಿಗೆ ಇಂದು ದೊಡ್ಡ ಬರೆ ಬಿದ್ದಿದೆ. ಬಜೆಟ್ ನಂತರ ಇಳಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ಇಂದು ಬೆಂಗಳೂರಿನಲ್ಲಿ ಊಹೆಗೂ ಮೀರಿದಷ್ಟು ಏರಿಕೆ ಕಂಡು ಹೂಡಿಕೆದಾರರ ಜೇಬಿಗೆ ಕತ್ತರಿ ಹಾಕಿದೆ.ಫೆಬ್ರವರಿ ಎರಡನೇ ವಾರದ ಆರಂಭವೇ ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಕಹಿ ಸುದ್ದಿ ಹೊತ್ತು ತಂದಿದೆ. ಇಂದು (ಫೆಬ್ರವರಿ 9, 2026) ಮಾರುಕಟ್ಟೆಯಲ್ಲಿ ಬೆಲೆಗಳು ರಾಕೆಟ್ ವೇಗದಲ್ಲಿ ಏರಿವೆ.

ಇಂದಿನ ದರ ಪಟ್ಟಿ (ಬೆಂಗಳೂರು ಮಾರುಕಟ್ಟೆ):

24 ಕ್ಯಾರೆಟ್ ಚಿನ್ನ (ಅಪ್ಪಟ ಚಿನ್ನ):

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

    1 ಗ್ರಾಂ ಬೆಲೆ: ₹15,884 (ನಿನ್ನೆ ₹15,660 ಇತ್ತು) ಅಂದರೆ ಒಂದೇ ದಿನದಲ್ಲಿ ₹224 ಏರಿಕೆ

    10 ಗ್ರಾಂ ಬೆಲೆ: ₹1,58,840 (ನಿನ್ನೆ ₹1,56,600 ಇತ್ತು) ಅಂದರೆ ಹತ್ತೇ ಗ್ರಾಂ ಮೇಲೆ ₹2,240 ಹೆಚ್ಚಳ

    22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):

      10 ಗ್ರಾಂ ಬೆಲೆ: ₹1,45,600 ಕ್ಕೆ ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಪ್ರತಿ 10 ಗ್ರಾಂಗೆ ಬರೋಬ್ಬರಿ ₹2,050 ಏರಿಕೆ ಕಂಡಿದೆ.

      ಬೆಳ್ಳಿ ಬೆಲೆ:

      ಚಿನ್ನದ ಹಾದಿಯಲ್ಲೇ ಬೆಳ್ಳಿಯೂ ಕೂಡ ಭಾರಿ ಏರಿಕೆ ಕಂಡಿದ್ದು, ಖರೀದಿದಾರರಿಗೆ ಶಾಕ್ ನೀಡಿದೆ.ಮೇಲೆ ತಿಳಿಸಿದ ಬೆಲೆಗಳು ಕೇವಲ ಮಾರುಕಟ್ಟೆ ದರಗಳಾಗಿದ್ದು, ಇವುಗಳಿಗೆ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜ್‌ಗಳು ಸೇರಿರುವುದಿಲ್ಲ. ಆದ್ದರಿಂದ ಜ್ಯುವೆಲ್ಲರಿ ಮಳಿಗೆಗಳಲ್ಲಿ ಅಂತಿಮ ಬೆಲೆ ಇನ್ನು ಹೆಚ್ಚಿರಲಿದೆ.ಇಂದು ಬೆಳ್ಳಿ ಬೆಲೆಯಲ್ಲಿ ₹15 ಏರಿಕೆ ಕಂಡುಬಂದಿದ್ದು, ಗ್ರಾಂಗೆ ₹300 ಆಗಿದೆ. ಇದರೊಂದಿಗೆ ಕೆಜಿಗೆ ಬೆಳ್ಳಿ ದರದಲ್ಲಿ ₹15,000 ಹೆಚ್ಚಳವಾಗಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿ ಬೆಲೆ ₹3,00,000ಕ್ಕೆ ತಲುಪಿದೆ.

      ಕಳೆದ ವಾರವಷ್ಟೇ ಅಲ್ಪ ಇಳಿಕೆ ಕಂಡು ಭರವಸೆ ಮೂಡಿಸಿದ್ದ ಚಿನ್ನದ ಬೆಲೆ, ಇಂದು ಒಂದೇ ಸಮನೆ ಏರಿರುವುದು ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಲು ಪ್ಲಾನ್ ಮಾಡಿದ್ದವರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

      ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

      ಚೆನ್ನೈ: ₹15,982

      ಮುಂಬೈ: ₹15,884

      ದೆಹಲಿ: ₹15,899

      ಕೋಲ್ಕತ್ತಾ: ₹15,884

      ಬೆಂಗಳೂರು: ₹15,884

      ಹೈದರಾಬಾದ್: ₹15,884

      ಕೇರಳ: ₹15,884

      ಪುಣೆ: ₹15,884

      ವಡೋದರಾ: ₹15,889

      ಅಹಮದಾಬಾದ್: ₹15,889

      For Latest News Updates, Join Our Whatsapp Community🚩
      Abinandan
      Abinandan
      ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
      RELATED ARTICLES

      Most Popular