ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಗ್ರಾಹಕನ ಮೇಲೆ ಚಿಕ್ಕಬಳ್ಳಾಪುರದ ಡಿಮಾರ್ಟ್ ಸಿಬ್ಬಂದಿ ಗೂಂಡಾವರ್ತನೆ ತೋರಿಸಿದ ಆರೋಪ ಕೇಳಿ ಬಂದಿದೆ.
23,000 ರೂ. ಮೌಲ್ಯದ ಸಾಮಗ್ರಿ ಖರೀದಿಸಿದ ಗ್ರಾಹಕ ಚಂದ್ರಶೇಖರ್ ಸಾಮಗ್ರಿ ಜೊತೆಗೆ ಖಾಲಿ ಕವರ್ ತೆಗೆದುಕೊಂಡಿದ್ದಕ್ಕೆ ಗೂಂಡಾಗಿರಿ ನಡೆಸಲಾಗಿದೆ. ಗ್ರಾಹಕ ಚಂದ್ರಶೇಖರ್ ಗೆ ಆವಾಜ್ ಹಾಕಿ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
ಡಿಮಾರ್ಟ್ ಗೆ ಫುಡ್ ಸೇಫ್ಟಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫುಡ್ ಸೇಫ್ಟಿ ಅಧಿಕಾರಿ ಅಂಬಿಕಾ, ಡಿಮಾರ್ಟ್ ನಲ್ಲಿ ನಿಯಮ ಪಾಲಿಸುತ್ತಿಲ್ಲ. ಪದೇ ಪದೇ ದೂರುಗಳು ಬರುತ್ತಿವೆ ತರಾಟೆಗೆ ತೆಗೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

