ಮೈಸೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಿದ್ಯಾರ್ಥಿಗೆ ನಂಬಿಸಿ 1.80 ಕೋಟಿ ರೂ. ವಂಚಿಸಲಾಗಿದೆ. ಮೈಸೂರಿನ ಪ್ರಶಾಂತ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಕೇರಳ ಮೂಲದ ವಿಶ್ವನಾಥನ್ ಮತ್ತು ಸ್ನೇಹ ಮರಿಯಾ ಎಂಬುವರ ಪರಿಚಯವಾಗಿದೆ.
ತಾವು ಅಮೆರಿಕದಲ್ಲಿ ಕೆಲಸದಲ್ಲಿ ಇರುವುದಾಗಿ ಪ್ರಶಾಂತ್ ಗೆ ಹೇಳಿದ ಅವರು ನಿನಗೂ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಪ್ರಶಾಂತ್ ನನ್ನು ನಂಬಿಸಿದ್ದಾರೆ. ನಂತರ ಆತನನ್ನು ಬೆಂಗಳೂರು, ಹಾಂಗ್ ಕಾಂಗ್, ದುಬೈಗೆ ಕರೆದೊಯ್ದು ಉದ್ಯೋಗ ಕೊಡಿಸುವ ಬಗ್ಗೆ ಪ್ರಶಾಂತ್ ಪೋಷಕರನ್ನು ನಂಬಿಸಿ ಹಂತ ಹಂತವಾಗಿ 1.80 ಕೋಟಿ ರೂ. ಪ್ರಶಾಂತ್ ಖಾತೆಗೆ ಹಾಕಿಸಿದ್ದಾರೆ. ನಂತರ ಪ್ರಶಾಂತನನ್ನು ಬೆದರಿಸಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಹಣವಿಲ್ಲದೆ ಕಂಗಾಲಾದ ಪ್ರಶಾಂತ್ ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಸಹಾಯದಿಂದ ದುಬೈನಿಂದ ವಾಪಸ್ ಆಗಿದ್ದಾರೆ. ವಂಚನೆಗೊಳಗಾದ ಬಗ್ಗೆ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

