HomeIndiaALERT : ಇಂದು ದೇಶಾದ್ಯಂತ ಓಲಾ , ಉಬರ್, ರ್ಯಾಪಿಡೋ ಸೇವೆ ಬಂದ್ : ರಸ್ತೆಗಿಳಿಯುವ ಮುನ್ನ...

ALERT : ಇಂದು ದೇಶಾದ್ಯಂತ ಓಲಾ , ಉಬರ್, ರ್ಯಾಪಿಡೋ ಸೇವೆ ಬಂದ್ : ರಸ್ತೆಗಿಳಿಯುವ ಮುನ್ನ ಈ ಸುದ್ದಿ ಓದಿ.!

ಬೆಂಗಳೂರು : ದೇಶಾದ್ಯಂತ ಆಪ್ ಆಧಾರಿತ ಸಾರಿಗೆ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಚಾಲಕರ ಒಕ್ಕೂಟಗಳು ಫೆಬ್ರವರಿ 7ರಂದು (ಶನಿವಾರ) ಇಂದು ದೇಶಾದ್ಯಂತ ಮುಷ್ಕರ ನಡೆಸಲಿದ್ದಾರೆ.

ಇಂದು ಶನಿವಾರ = ಓಲಾ, ಉಬರ್, ರ್ಯಾಪಿಡೋ ಚಾಲಕರು ದೇಶಾದ್ಯಂತ ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕ್ಯಾಬ್ ಮತ್ತು ಆಟೋ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಪ್ರತಿ ಕಿಲೋಮೀಟರ್ಗೆ ಕನಿಷ್ಠ 25 ರೂಪಾಯಿ ಬಾಡಿಗೆ ದರವನ್ನು ಸರ್ಕಾರವೇ ನಿಗದಿಪಡಿಸಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ.ಕಂಪನಿಗಳು ಪಡೆಯುತ್ತಿರುವ ಹೆಚ್ಚಿನ ಕಮಿಷನ್ನಿಂದ ಚಾಲಕರಿಗೆ ಲಾಭ ಸಿಗುತ್ತಿಲ್ಲ. ಈ ಕಮಿಷನ್ ದರವನ್ನು ಕಡಿಮೆ ಮಾಡಬೇಕೆಂಬುದು ಮುಖ್ಯ ಆಗ್ರಹವಾಗಿದೆ.ಬಿಳಿ ಬೋರ್ಡ್ (ಖಾಸಗಿ) ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಅಧಿಕೃತ ಕ್ಯಾಬ್ ಚಾಲಕರ ಆದಾಯಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ. ಇದನ್ನು ತಕ್ಷಣವೇ ನಿಷೇಧಿಸಬೇಕು. ಮೋಟಾರು ವಾಹನ ಮಾರ್ಗಸೂಚಿ 2025ರ ಅಡಿಯಲ್ಲಿ ಚಾಲಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಚಾಲಕರಿಗೆ ಮತ್ತು ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತೆ ಹಾಗೂ ವಿಮಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಷ್ಕರದ ಪ್ರಮುಖ ಕಾರಣಗಳು:

ಪ್ರತಿ ಕಿ.ಮೀಗೆ ಕನಿಷ್ಠ ₹25 ಬಾಡಿಗೆ ನಿಗದಿಪಡಿಸಲು ಒತ್ತಾಯ.
ಬಿಳಿ ಬೋರ್ಡ್ (ಖಾಸಗಿ) ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸುವುದಕ್ಕೆ ನಿಷೇಧ.
ಕಂಪನಿಗಳು ಪಡೆಯುತ್ತಿರುವ ಅತಿಯಾದ ಕಮಿಷನ್ ದರಕ್ಕೆ ಬ್ರೇಕ್ ಹಾಕಲು ಆಗ್ರಹ.
ಚಾಲಕರಿಗೆ ವಿಮೆ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ಬೇಡಿಕೆ.
ಪ್ರಯಾಣಿಕರ ಗಮನಕ್ಕೆ: ಈ ಮುಷ್ಕರದಿಂದಾಗಿ ಫೆಬ್ರವರಿ 7ರಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಓಲಾ, ಉಬರ್, ರ್ಯಾಪಿಡೋ ಮತ್ತು ಪೋರ್ಟರ್ (Porter) ಸೇವೆಗಳು ಲಭ್ಯವಿರುವುದು ಅನುಮಾನ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಉತ್ತಮ.

ಪ್ರಯಾಣಿಕರ ಗಮನಕ್ಕೆ:

  1. ಸಾರಿಗೆ ಲಭ್ಯತೆ: ಆಪ್‌ಗಳಲ್ಲಿ ಬುಕಿಂಗ್ ಮಾಡಿದರೂ ರೈಡ್ ಸಿಗುವುದು ವಿಳಂಬವಾಗಬಹುದು ಅಥವಾ ಕ್ಯಾನ್ಸಲ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
  2. ಪರ್ಯಾಯ ವ್ಯವಸ್ಥೆ: ಬಿಎಂಟಿಸಿ (BMTC) ಬಸ್‌ಗಳು ಅಥವಾ ನಮ್ಮ ಮೆಟ್ರೋ ಸೇವೆಯನ್ನು ಅವಲಂಬಿಸುವುದು ಇಂದಿನ ದಿನ ಸುರಕ್ಷಿತ.
  3. ಹೆಚ್ಚುವರಿ ದರ: ಬೇಡಿಕೆ ಹೆಚ್ಚಾದಂತೆ ಕೆಲವು ಕಡೆ ‘ಸರ್ಜ್ ಪ್ರೈಸಿಂಗ್’ (Surge Pricing) ಇರುವ ಸಾಧ್ಯತೆ ಇರುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular