HomeLatest Newsಪೋಷಕರಿಗೆ ಮುಖ್ಯ ಮಾಹಿತಿ: 12 ಮಾರಕ ಕಾಯಿಲೆಗಳ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ತಪ್ಪದೇ...

ಪೋಷಕರಿಗೆ ಮುಖ್ಯ ಮಾಹಿತಿ: 12 ಮಾರಕ ಕಾಯಿಲೆಗಳ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ತಪ್ಪದೇ ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ

ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ದಡಾರ-ರುಬೆಲ್ಲಾ ಲಸಿಕೆ ಹಾಕಿಸಬೇಕು. ಬೇಸಿಗೆ ಪ್ರಾರಂಭವಾಗುತ್ತಿದ್ದು, ಮಕ್ಕಳಲ್ಲಿ ದಡಾರ ಪ್ರಕರಣಗಳು ಕಂಡುಬರುವ ಸಾಧ್ಯತೆ ಹೆಚ್ಚು. 12 ಮಾರಕ ಕಾಯಿಲೆಗಳ ವಿರುದ್ಧ ನಿಯಮಿತವಾಗಿ ಲಸಿಕೆ ಪಡೆಯಲು ಪೋಷಕರು ಮಕ್ಕಳಿಗೆ ತಪ್ಪದೇ ದಡಾರ ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ತಿಳಿಸಲಾಗಿದೆ.

ಲಕ್ಷಣಗಳು:

ದಡಾರದಲ್ಲಿ ತೀವ್ರ ಜ್ವರ, ಮೂಗು ಸೋರುವಿಕೆ, ಕೆಮ್ಮು, ಕಣ್ಣು ಕೆಂಪಾಗುವುದು ಮತ್ತು ಮುಖದಿಂದ ಆರಂಭವಾಗಿ ದೇಹದಾದ್ಯಂತ ಹರಡುವ ಕೆಂಪು ದದ್ದುಗಳು ಕಂಡುಬರುತ್ತವೆ. ರುಬೆಲ್ಲಾದಲ್ಲಿ ಸೌಮ್ಯ ಜ್ವರ, ದದ್ದುಗಳು, ತಲೆನೋವು, ಕಣ್ಣಿನ ಉರಿ ಲಕ್ಷಣ ಕಂಡುಬರುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಡಾರ-ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವ ಒಂದು ಪರಿಣಾಮಕಾರಿ ಲಸಿಕೆಯಾಗಿದೆ. ಇದು ಮಕ್ಕಳಲ್ಲಿ ಜ್ವರ, ದದ್ದು, ನ್ಯುಮೋನಿಯಾ, ಮತ್ತು ಮೆದುಳಿನ ಸೋಂಕನ್ನು ತಡೆಯುತ್ತದೆ. ಈ ಲಸಿಕೆ, ಗರ್ಭಾವಸ್ಥೆಯಲ್ಲಿ ರುಬೆಲ್ಲಾದಿಂದ ಉಂಟಾಗುವ ಜನ್ಮಜಾತ ದೋಷಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಲಸಿಕೆ ವಿಧಾನ:

ಇದು ಲೈವ್ ಅಟೆನ್ಯೂಯೇಟೆಡ್ ಲಸಿಕೆಯಾಗಿದ್ದು, ಇದನ್ನು ಇಂಜೆಕ್ಷನ್ ಮೂಲಕ ಸಾಮಾನ್ಯವಾಗಿ ಮೇಲಿನ ತೋಳಿನಲ್ಲಿ ನೀಡಲಾಗುತ್ತದೆ. 9 ತಿಂಗಳಿಂದ 12 ತಿಂಗಳ ನಡುವೆ ಮೊದಲನೇ ಡೋಸ್, ಎರಡನೇ ಡೋಸ್ 16 ತಿಂಗಳಿನಿಂದ 24 ತಿಂಗಳ ವರಗೆ  ಮಕ್ಕಳಿಗೆ ನೀಡಲಾಗುವುದು. ಎರಡು ಡೋಸ್‌ಗಳ ನಂತರ ಈ ಲಸಿಕೆಯು ದಡಾರ ಮತ್ತು ರುಬೆಲ್ಲಾ ವಿರುದ್ಧ ಸುಮಾರು ಶೇ.97 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಕೆಲವೊಮ್ಮೆ ಲಸಿಕೆ ಹಾಕಿದ ಸ್ಥಳಗಳಲ್ಲಿ ನೋವು ಜ್ವರ ಅಥವಾ ಸೌಮ್ಯವಾದ ದದ್ದುಗಳು ಕಂಡು ಬರಬಹುದು. ಇವು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತವೆ.

ಲಸಿಕೆಯ ಪ್ರಯೋಜನ:

ದಡಾರ ಲಸಿಕೆ ತೀವ್ರ ಜ್ವರ, ಕೆಮ್ಮು, ದದ್ದು ಮತ್ತು ಸಂಭಾವ್ಯ ನ್ಯುಮೋನಿಯಾ ಅಥವಾ ಮೆದುಳಿನ ಸೋಂಕನ್ನು ತಡೆಯುತ್ತದೆ. ರುಬೆಲ್ಲಾ ಲಸಿಕೆಯು ಗರ್ಭಿಣಿಯರಿಗೆ ರುಬೆಲ್ಲಾ ಸೋಂಕು ತಗುಲಿದರೆ, ಹುಟ್ಟುವ ಮಗುವಿನಲ್ಲಿ ಜನ್ಮಜಾತ ರುಬೆಲ್ಲಾ ಸಿಂಡ್ರೋಮ್ ಉಂಟಾಗಬಹುದು. ಲಸಿಕೆಯು ಇದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಡಿ ಸಾಮಾನ್ಯವಾಗಿ ಮೊದಲ ಡೋಸ್ 9-12 ತಿಂಗಳುಗಳ ನಡುವೆ ಮತ್ತು ಎರಡನೇ ಡೋಸ್ 16-24 ತಿಂಗಳುಗಳ ನಡುವೆ ನೀಡಲಾಗುತ್ತದೆ. ಇದು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಲಸಿಕೆ ನೀಡಿದ ನಂತರ ಸೌಮ್ಯವಾದ ಜ್ವರ ಅಥವಾ ಇಂಜೆಕ್ಷನ್ ಜಾಗದಲ್ಲಿ ನೋವು ಕಂಡುಬರಬಹುದು, ಆದರೆ ಇದು ಸಾಮಾನ್ಯವಾಗಿದೆ. ದಡಾರ-ರುಬೆಲ್ಲಾ ಲಸಿಕೆಯು ಮಕ್ಕಳ ಆರೋಗ್ಯ ಮತ್ತು ಸಮುದಾಯದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಗತ್ಯವಾಗಿದೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular