HomeKarnatakaಐತಿಹಾಸಿಕ ವೀರಾಂಜನೇಯ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಮಾಂಸದ ತುಂಡು ಪತ್ತೆ: ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟನೆ...

ಐತಿಹಾಸಿಕ ವೀರಾಂಜನೇಯ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಮಾಂಸದ ತುಂಡು ಪತ್ತೆ: ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟನೆ ಮುಖಂಡರ ಆಕ್ರೋಶ

ಬಳ್ಳಾರಿ: ಐತಿಹಾಸಿಕ ವೀರಾಂಜನೇಯ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿರುವ ಘಟನೆ ಬಳ್ಳಾರಿ ನಗರದ ನಾಗಲಕೇರಿಯಲ್ಲಿ ನಡೆದಿದೆ.

ಪ್ರಸಿದ್ಧ ವೀರಾಂಜನೇಯ ದೇವಸ್ಥಾನದ ಒಳಭಾಗದಲ್ಲಿ ನೆಲದ ಮೇಲೆ ಕಪ್ಪು ಕವರ್ ನಲ್ಲಿ ಮಾಂಸದ ತುಂಡು, ಮೂಳೆಗಳು ಪತ್ತೆಯಾಗಿದ್ದು, ಬೆಳಿಗ್ಗೆ ಎಂದಿನಂತೆ ದೇವಸ್ಥಾನಕ್ಕೆ ಪೂಜೆಗೆಂದು ಬಂದ ಅರ್ಚಕರು ಇದನ್ನು ಕಂಡು ಶಾಕ್ ಆಗಿದ್ದಾರೆ. ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಕಿಡಿಗೇದಿಗಳು ಉದ್ದೇಶಪೂರ್ವಕವಾಗಿ ನಡೆಸಿರುವ ಕೃತ್ಯವಿದು. ಈ ಬಗ್ಗೆ ತನಿಖೆಯಾಗಿ ಕಿಡಿಗೇಡಿಗಳನ್ನು ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಾಸರಾಜರ ಕಾಲದಲ್ಲಿ ಸ್ಥಾಪನೆಯಾದಂತಹ ಐತಿಹಾಸಿಕ ವೀರಾಂಜನೇಯ ದೇವಸ್ಥಾನ ಇದಾಗಿದ್ದು, ಇದೇ ದೇವಾಲಯದಲ್ಲಿ ವೆಂಕಟೇಶ್ವರ ದೇವಸ್ಥಾನ, ಅಮ್ಮನವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿವೆ. ವೈಕುಂಟ ಏಕಾದಶಿಯ ದಿವಸ ತಿರುಪತಿಗೆ ಹೋಗಲು ಸಾಧ್ಯವಾಗದವರು ಇಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಇಂತಹ ಐತಿಹಾಸಿಕ ದೇವಸ್ಥಾನದ ಪ್ರಾಂಗಣದಲ್ಲಿ ಕವರ್ ನಲ್ಲಿ ಮಾಂಸದ ತುಂಡು ಪತ್ತೆಯಾಗಿರುವುದು ಹಿಂದೂಗಳ ಭಾವನೆಗೆ ಧಕ್ಕೆತಂದಿದೆ. ಭಕ್ತರು, ಸ್ಥಳೀಯ ಜನರ ಮನಸ್ಸಿಗೆ ಘಾಸಿಯುಂಟುಮಾಡಿದೆ. ಇದು ಯಾವುದೋ ಪ್ರಾಣಿ ಎಳೆದು ತಂದು ಹಾಕಿರುವುದಂತೂ ಅಲ್ಲ. ಕವರ್ ನಲ್ಲಿ ಮಾಂಸದ ತುಂಡು, ಮೂಳೆಗಳಿರುವುದನ್ನು ನೋಡಿದರೆ ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ತಂದು ಹಾಕಿರುವ ಕೃತ್ಯ ಎಂದು ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಕೃತ್ಯವೆಸಗಿರುವ ಕಿಡಿಗೇದಿಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular