HomeLatest Newsಇನ್ನು ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಪ್ರಚಾರ ತಪ್ಪು ಮಾಹಿತಿ ತಡೆಗೆ ಎಐ ನಿಗಾ: ಸಚಿವ...

ಇನ್ನು ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಪ್ರಚಾರ ತಪ್ಪು ಮಾಹಿತಿ ತಡೆಗೆ ಎಐ ನಿಗಾ: ಸಚಿವ ಸಂಪುಟ ಮಹತ್ವದ ನಿರ್ಧಾರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ರಾಜ್ಯ ಸರ್ಕಾರ ನಿರ್ಧರಿಸಿದೆ.

67.26 ಕೋಟಿ ರೂ. ವೆಚ್ಚದಲ್ಲಿ ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್ ತಂತ್ರಾಂಶ ಅಭಿವೃದ್ದಿಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಪ್ರಚಾರ, ಕಾನೂನು ಸುವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುವ ವಿಷಯಗಳನ್ನು ಹರಡಿದಲ್ಲಿ ಕಮಾಂಡಿಂಗ್ ಸೆಂಟರ್ ಮೂಲಕ ರಾಜ್ಯ ಸರ್ಕಾರ ಸ್ಕ್ಯಾನ್ ಮಾಡಲಿದೆ. ಇದು ಕೃತಕ ಬುದ್ಧಿಮತ್ತೆಯಿಂದ ಚಾಲಿತ ಸಾಫ್ಟ್ವೇರ್ ಆಗಿದ್ದು, ಪ್ರತಿ ಜಿಲ್ಲೆಗೆ ರಿಯಲ್ ಟೈಮ್ ನಲ್ಲಿ ಸಂದೇಶ ರವಾನಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ಗಳ ಮೂಲ ದಾಖಲೆ ಸಂಗ್ರಹಿಸಿ ಪೊಲೀಸರ ತನಿಖೆಗೆ ನೆರವು ನೀಡಲಿದೆ. ದೂರು ದಾಖಲಿಸಲು ಅಗತ್ಯ ಇರುವ ಮಾಹಿತಿ ಇದರಿಂದ ಲಭ್ಯವಾಗಲಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳು ವೆಬ್ಸೈಟ್ ಗಳು, ವಾಟ್ಸಪ್ ನಂತಹ ಮೆಸೆಂಜರ್ ವೇದಿಕೆಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಭಾಷಣ, ತಪ್ಪು ಮಾಹಿತಿ ಹರಡಲು ಬ್ರೇಕ್ ಬೀಳಲಿದೆ. ಇಂತಹ ಸುದ್ದಿಗಳನ್ನು ಪತ್ತೆ ಮಾಡಲು ನಿರಂತರ ನಿಗಾ ವಹಿಸಲು ಪೂರಕವಾದ ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್ ತಂತ್ರಾಂಶವನ್ನು ಗೃಹ ಇಲಾಖೆಯಲ್ಲಿ ಅಳವಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯ ವಾಹಿನಿಯ, ನೈಜ, ಮಾನ್ಯತೆ ಪಡೆದ ಮಾಧ್ಯಮಗಳು ಮತ್ತು ಆ ಮಾಧ್ಯಮಗಳ ಡಿಜಿಟಲ್ ವೇದಿಕೆಗಳನ್ನು ಈ ತಂತ್ರಾಂಶದ ನಿಗಾ ವ್ಯವಸ್ಥೆಯಿಂದ ಹೊರಗಿಡಲು ನಿರ್ಧರಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular