ಚಾಮರಾಜನಗರ: ಚಾಮರಾಜನಗರದಲ್ಲಿ ವಿಷಪ್ರಾಶನದಿಂದ ಹಸುಗಳ ಸರಣಿ ಸಾವಿನ ಪ್ರಕರಣ ಮುಂದುವರೆದಂತಿದೆ. 6 ಹಸುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
6 ಹಸುಗಳು ಗ್ರಾಮದಲ್ಲಿ ರಸ್ತೆಯ ಮೇಲೆ, ಮನೆಗಳ ಮುಂದೆ ಎಲ್ಲೆಂದರಲ್ಲಿ ಸಾವನ್ನಪ್ಪಿವೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹನೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಪರಶಿವ ಎಂಬುವವರಿಗೆ ಸೇರಿದ 6 ಹಸುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿವೆ. ದುಷ್ಕರ್ಮಿಗಳ್ಯಾರೋ ಹಸುಗಳಿಗೆ ವಿಷವಿಟ್ಟು ಸಾಯಿಸಿರುವ ಅನುಮಾನ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

