HomeLatest Newsಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ವಿದೇಶದಿಂದ 40 ಗ್ರಾಂವರೆಗೆ ಚಿನ್ನ ತಂದ್ರೂ ಟ್ಯಾಕ್ಸ್ ಕಟ್ಟಬೇಕಿಲ್ಲ...

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ವಿದೇಶದಿಂದ 40 ಗ್ರಾಂವರೆಗೆ ಚಿನ್ನ ತಂದ್ರೂ ಟ್ಯಾಕ್ಸ್ ಕಟ್ಟಬೇಕಿಲ್ಲ !

ಕೇಂದ್ರ ಸರ್ಕಾರವು 2026ನೇ ಸಾಲಿನ ಹೊಸ ಬ್ಯಾಗೇಜ್ ನಿಯಮಗಳನ್ನು (Baggage Rules 2026) ಘೋಷಿಸಿದೆ. ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ, ವಿಶೇಷವಾಗಿ ಚಿನ್ನಾಭರಣ ತರುವವರಿಗೆ ಇದು ದೊಡ್ಡ ಸಮಾಧಾನ ತಂದಿದೆ.

ಹೌದು. ಹೊಸ ಬ್ಯಾಗೇಜ್ ನಿಯಮವು ವಿದೇಶದಿಂದ ಬರುವವರಿಗೆ ಬಂಪರ್ ಆಫರ್ ನೀಡಿದೆ.ಮಹಿಳೆಯರಿಗೆ 40 ಗ್ರಾಂ, ಪುರುಷರಿಗೆ 20 ಗ್ರಾಂ ಚಿನ್ನದ ಆಭರಣಗಳ ಮೇಲೆ ಇನ್ಮುಂದೆ ತೆರಿಗೆ ಇಲ್ಲ. ಸುಂಕ ರಹಿತ ಮಿತಿ 50,000 ರೂ.ನಿಂದ 75,000 ರೂ.ಗೆ ಏರಿಕೆಯಾಗಿದೆ.

ಕೇಂದ್ರ ಹಣಕಾಸು ಸಚಿವಾಲಯವು ಫೆಬ್ರವರಿ 2, 2026 ರಿಂದ ಜಾರಿಗೆ ಬರುವಂತೆ ಹೊಸ ಬ್ಯಾಗೇಜ್ ನಿಯಮಗಳನ್ನು ಜಾರಿಗೆ ತಂದಿದೆ. ದಶಕದ ಹಳೆಯ ನಿಯಮಗಳನ್ನು ಬದಲಿಸಿ, ವಿದೇಶಿ ಪ್ರಯಾಣಿಕರಿಗೆ ಹಲವು ರಿಯಾಯಿತಿಗಳನ್ನು ನೀಡಲಾಗಿದೆ.
ಚಿನ್ನದ ಆಭರಣಗಳ ಮಿತಿ (Gold Jewellery Limit): ವಿದೇಶದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಾಸವಿದ್ದು ಭಾರತಕ್ಕೆ ಮರಳುವ ಭಾರತೀಯರಿಗೆ ಈ ಕೆಳಗಿನಂತೆ ತೆರಿಗೆ ವಿನಾಯಿತಿ ಸಿಗಲಿದೆ. 40 ಗ್ರಾಂ ವರೆಗಿನ ಚಿನ್ನದ ಆಭರಣಗಳನ್ನು ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ತರಬಹುದು. 20 ಗ್ರಾಂ ವರೆಗಿನ ಚಿನ್ನದ ಆಭರಣಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

(ಗಮನಿಸಿ: ಈ ಮಿತಿಯು ಕೇವಲ ಆಭರಣಗಳಿಗೆ ಮಾತ್ರ ಅನ್ವಯಿಸುತ್ತದೆ, ಚಿನ್ನದ ಬಿಸ್ಕೆಟ್ ಅಥವಾ ಕಾಯಿನ್ ಗಳಿಗೆ ಅಲ್ಲ).

ಸಾಮಾನ್ಯ ಸಾಮಗ್ರಿಗಳ ಮಿತಿ ಏರಿಕೆ (Duty-Free Allowance):
• ಇಲ್ಲಿಯವರೆಗೆ ವಿದೇಶದಿಂದ ಬರುವಾಗ ತರಬಹುದಾದ ವಸ್ತುಗಳ ಸುಂಕ ರಹಿತ ಮಿತಿ 50,000 ರೂ. ಇತ್ತು. ಇದನ್ನು ಈಗ 75,000 ರೂ. ಗೆ ಏರಿಸಲಾಗಿದೆ.
• ವಿದೇಶಿ ಪ್ರವಾಸಿಗರಿಗೆ ಈ ಮಿತಿಯನ್ನು 15,000 ರೂ.ನಿಂದ 25,000 ರೂ. ಗೆ ಹೆಚ್ಚಿಸಲಾಗಿದೆ.

ಇತರ ಪ್ರಮುಖ ಬದಲಾವಣೆಗಳು:
• ಲ್ಯಾಪ್ಟಾಪ್: 18 ವರ್ಷ ಮೇಲ್ಪಟ್ಟ ಪ್ರಯಾಣಿಕರು ಈಗ ಒಂದು ಹೊಸ ಲ್ಯಾಪ್ಟಾಪ್ ಅನ್ನು ತೆರಿಗೆ ಇಲ್ಲದೆ ತರಬಹುದು.
• ವೈಯಕ್ತಿಕ ವಸ್ತುಗಳು: ದಿನಬಳಕೆಯ ವಸ್ತುಗಳು ಮತ್ತು ಬಳಸಿದ ವೈಯಕ್ತಿಕ ಸಾಮಗ್ರಿಗಳಿಗೆ ಯಾವುದೇ ಸುಂಕ ಇರುವುದಿಲ್ಲ.
• ತೆರಿಗೆ ದರ ಕಡಿತ: ವೈಯಕ್ತಿಕ ಬಳಕೆಗೆ ತರುವ ಇತರ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ. 20 ರಿಂದ ಶೇ. 10 ಕ್ಕೆ ಇಳಿಸಲಾಗಿದೆ.
ಈ ಹೊಸ ನಿಯಮಗಳು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಸರಳಗೊಳಿಸಲು ಮತ್ತು ಪ್ರಯಾಣಿಕರ ಅಲೆದಾಟವನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular