HomeLatest NewsBREAKING : ಬೆಂಗಳೂರಿನ ಧರ್ಮರಾಯಸ್ವಾಮಿ ದೇಗುಲದಲ್ಲಿ ಚಿನ್ನಾಭರಣ ಕಳವು : ಮುಜರಾಯಿ ಇಲಾಖೆ ವಿರುದ್ಧ ಆರೋಪ.!

BREAKING : ಬೆಂಗಳೂರಿನ ಧರ್ಮರಾಯಸ್ವಾಮಿ ದೇಗುಲದಲ್ಲಿ ಚಿನ್ನಾಭರಣ ಕಳವು : ಮುಜರಾಯಿ ಇಲಾಖೆ ವಿರುದ್ಧ ಆರೋಪ.!

ಬೆಂಗಳೂರು: ಸಿಲಿಕಾನ್ ಸಿಟಿಯ ಐತಿಹಾಸಿಕ ಪ್ರಸಿದ್ಧ ಮತ್ತು ಕರಗ ಶಕ್ತ್ಯೋತ್ಸವಕ್ಕೆ ಹೆಸರಾದ ಧರ್ಮರಾಯಸ್ವಾಮಿ ದೇಗುಲದಲ್ಲಿ ಚಿನ್ನಾಭರಣ ಕಳವಾಗಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ದೇಗುಲದ ಆಡಳಿತ ಮಂಡಳಿಯು ಕಳ್ಳತನಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.

ದೇಗುಲಕ್ಕೆ ಸೇರಿದ ಅಂದಾಜು 100 ಗ್ರಾಂ ಗೂ ಹೆಚ್ಚು ತೂಕದ ಚಿನ್ನದ ಒಡವೆಗಳನ್ನು ಕದ್ದಿರುವ ಗಂಭೀರ ಆರೋಪ ಕೇಳಿಬಂದಿದೆ.ಈ ಕಳ್ಳತನದ ಪ್ರಕರಣದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳ ಕೈವಾಡವಿದೆ ಅಥವಾ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆಡಳಿತ ಮಂಡಳಿ ನೇರವಾಗಿ ಆರೋಪಿಸಿದೆ.

ಐತಿಹಾಸಿಕ ಧರ್ಮರಾಯಸ್ವಾಮಿ ದೇಗುಲದಲ್ಲಿ ಕಾಣಿಕೆ ರೂಪದಲ್ಲಿ ಬಂದಿದ್ದ ಚಿನ್ನದ ನೆಕ್ಲೆಸ್ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ದೇಗುಲದ ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆಯ ನಡುವೆ ಜಟಾಪಟಿ ಆರಂಭವಾಗಿದೆ. ಈ ವಿವಾದದ ಕೇಂದ್ರಬಿಂದುವಾಗಿರುವ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪವೇನು?
ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನದ ನೆಕ್ಲೆಸ್ ಅನ್ನು ಬದಲಾವಣೆ ಮಾಡಲಾಗಿದೆ ಮತ್ತು ಅದರ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಆಡಳಿತ ಮಂಡಳಿ ದೂರಿದೆ. ಈ ಕೃತ್ಯದಲ್ಲಿ ಇಒ ನಾಗರಾಜ್ ಅವರ ಕೈವಾಡವಿದೆ ಎಂದು ನೇರವಾಗಿ ಆರೋಪಿಸಲಾಗಿದೆ.

ಇಒ ನಾಗರಾಜ್ ನೀಡಿದ ಸ್ಪಷ್ಟನೆ

ಅಕ್ಟೋಬರ್ 6 ರಂದು ನಡೆದ ಹುಂಡಿ ಎಣಿಕೆಯ ಸಂದರ್ಭದಲ್ಲಿ ಈ ಚಿನ್ನಾಭರಣ ಪತ್ತೆಯಾಗಿತ್ತು.ಆಭರಣದ ಗುಣಮಟ್ಟ ಪರೀಕ್ಷಿಸಲು ಬ್ಯಾಂಕ್ ಸಿಬ್ಬಂದಿ ಬಾರದ ಕಾರಣ, ವಿಳಂಬ ಮಾಡದೆ ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿ ಬಳಿಕ ಬ್ಯಾಂಕಿಗೆ ಜಮೆ ಮಾಡಲಾಗಿದೆ.

ನಿಯಮದ ಪ್ರಕಾರ ಆಭರಣಗಳನ್ನು ಬಿ ದರ್ಜೆ ಅರ್ಚಕರ ಸುಪರ್ದಿಗೆ ನೀಡಬೇಕು. ಆದರೆ, ಆ ಸಮಯದಲ್ಲಿ ಪ್ರಧಾನ ಅರ್ಚಕರು ಮತ್ತು ಸಹಾಯಕ ಅರ್ಚಕರು ಅಮಾನತು/ವಜಾಗೊಂಡಿದ್ದರಿಂದ ಅವರ ಸುಪರ್ದಿಗೆ ನೀಡಲು ಸಾಧ್ಯವಾಗಲಿಲ್ಲ ದೇವಸ್ಥಾನದಲ್ಲಿ ಸುಸಜ್ಜಿತ ಲಾಕರ್ ವ್ಯವಸ್ಥೆ ಇಲ್ಲದ ಕಾರಣ, ಬ್ಯಾಂಕ್ ಸಿಬ್ಬಂದಿ ಮೂಲಕವೇ ಅಧಿಕೃತವಾಗಿ ಪರೀಕ್ಷೆ ನಡೆಸಿ ಹುಂಡಿಗೆ ಹಾಕಿದ್ದೇವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಕಳ್ಳತನ ನಡೆದಿರುವುದನ್ನು ಪುಷ್ಟೀಕರಿಸುವ ಕೆಲವು ಆಂತರಿಕ ದಾಖಲೆಗಳನ್ನು ಆಡಳಿತ ಮಂಡಳಿ ಈಗಾಗಲೇ ಸಾರ್ವಜನಿಕಗೊಳಿಸಿದೆ.ಈ ಹಗರಣದ ಕುರಿತು ಸಂಪೂರ್ಣ ಮಾಹಿತಿ ನೀಡಲು ಮತ್ತು ಮುಂದಿನ ಕಾನೂನು ಹೋರಾಟದ ಬಗ್ಗೆ ವಿವರಿಸಲು ಆಡಳಿತ ಮಂಡಳಿಯು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದೆ. ಶತಮಾನಗಳ ಇತಿಹಾಸವಿರುವ ಈ ದೇಗುಲದಲ್ಲಿ ಇಂತಹ ಘಟನೆ ನಡೆದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular