HomeLatest News'ಕ್ಯಾನ್ಸರ್' ರೋಗಿಗಳಿಗೆ ಗುಡ್ ನ್ಯೂಸ್ : 17 ಜೀವ ರಕ್ಷಕ ಔಷಧಗಳ ಬೆಲೆ ಇಳಿಕೆ, ಇಲ್ಲಿದೆ...

‘ಕ್ಯಾನ್ಸರ್’ ರೋಗಿಗಳಿಗೆ ಗುಡ್ ನ್ಯೂಸ್ : 17 ಜೀವ ರಕ್ಷಕ ಔಷಧಗಳ ಬೆಲೆ ಇಳಿಕೆ, ಇಲ್ಲಿದೆ ಸಂಪೂರ್ಣ ಪಟ್ಟಿ

ಕ್ಯಾನ್ಸರ್ ಚಿಕಿತ್ಸೆಯು ಅತ್ಯಂತ ದುಬಾರಿ ಎಂಬ ಆತಂಕದಲ್ಲಿರುವ ರೋಗಿಗಳಿಗೆ ಕೇಂದ್ರ ಸರ್ಕಾರವು ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ 17 ಪ್ರಮುಖ ಔಷಧಗಳ ಗರಿಷ್ಠ ಮಾರಾಟ ಬೆಲೆಯನ್ನು (MRP) ಸರ್ಕಾರ ಇಳಿಸಿದೆ.

ಕೇಂದ್ರ ಬಜೆಟ್ ನಲ್ಲಿ ‘ಬಯೋಫಾರ್ಮಾ ಶಕ್ತಿ’ (BioPharma Shakti) ಎಂಬ ಹೊಸ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದರಿಂದ ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ 17 ಬಗೆಯ ಕ್ಯಾನ್ಸರ್ ಔಷಧಗಳು ಮತ್ತು 7 ರೀತಿಯ ಅಪರೂಪದ ಕಾಯಿಲೆಗಳ ಮದ್ದುಗಳ ಮೇಲೆ ಕಸ್ಟಮ್ಸ್ ಸುಂಕವನ್ನು (Customs Duty) ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಇದರಿಂದ ಆಧುನಿಕ ಚಿಕಿತ್ಸೆಗಳು ಸಾಮಾನ್ಯರಿಗೂ ಕೈಗೆಟುಕುವಂತಾಗಲಿವೆ.

ಇಳಿಕೆಯಾಗಲಿರುವ 17 ಕ್ಯಾನ್ಸರ್ ಔಷಧಗಳ ಪಟ್ಟಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ರಿಬೋಸಿಸಿಲಿಬ್ (Ribociclib)
  2. ಅಬೆಮಾಸಿಸಿಲಿಬ್ (Abemaciclib)
  3. ಟಾಲಿಕಾಪ್ಟಾಜಿನ್ (Talicaubtagene)
  4. ಆಟೋಲ್ಯೂಸೆಲ್ (Autoleucel)
  5. ಟ್ರೆಮೆಲಿಮುಮಾಬ್ (Tremelimumab)
  6. ವೆನೆಟೊಕ್ಲಾಕ್ಸ್ (Venetoclax)
  7. ಸೆರಿಟಿನಿಬ್ (Ceritinib)
  8. ಬ್ರಿಗಾಟಿನಿಬ್ (Brigatinib)
  9. ಡರೋಲುಟಮೈಡ್ (Darolutamide)
  10. ಟೊರಿಪಾಲಿಮಾಬ್ (Toripalimab)
  11. ಸೆರ್ಪ್ಲುಲಿಮಾಬ್ (Serplulimab)
  12. ಟಿಸ್ಲೆಲಿಜುಮಾಬ್ (Tislelizumab)
  13. ಇನೋಟುಜುಮಾಬ್ ಓಜೋಗಾಮಿಸಿನ್ (Inotuzumab Ozogamicin)
  14. ಪೊನಾಟಿನಿಬ್ (Ponatinib)
  15. ಇಬ್ರುಟಿನಿಬ್ (Ibrutinib)
  16. ಡಬ್ರಾಫೆನಿಬ್ (Dabrafenib)
  17. ಟ್ರಾಮೆಟಿನಿಬ್ ಮತ್ತು ಇಪಿಲಿಮುಮಾಬ್ (Trametinib, Ipilimumab)

ಅಪರೂಪದ ಕಾಯಿಲೆಗಳ ಚಿಕಿತ್ಸೆಗೂ ಬೆಂಬಲ
ಕ್ಯಾನ್ಸರ್ ಮಾತ್ರವಲ್ಲದೆ, ಈ ಕೆಳಗಿನ ಅಪರೂಪದ ಕಾಯಿಲೆಗಳ ಔಷಧ ಮತ್ತು ಪೂರಕ ಆಹಾರಗಳ ಮೇಲೂ ಸುಂಕ ವಿನಾಯಿತಿ ನೀಡಲಾಗಿದೆ:


• ಜನ್ಮಜಾತ ಹೈಪರ್ ಇನ್ಸುಲಿನೆಮಿಕ್ ಹೈಪೋಗ್ಲೈಸೆಮಿಯಾ (CHI)
• ಫ್ಯಾಮಿಲಿಯಲ್ ಹೋಮೋಜೈಗಸ್ ಹೈಪರ್ ಕೊಲೆಸ್ಟ್ರಾಲೆಮಿಯಾ
• ಆಲ್ಫಾ ಮನ್ನೋಸಿಡೋಸಿಸ್
• ಪ್ರೈಮರಿ ಹೈಪರ್ ಆಕ್ಸಲೂರಿಯಾ
• ಸಿಸ್ಟಿನೋಸಿಸ್
• ವಂಶವಾಹಿ ಆಂಜಿಯೋಡೆಮಾ
• ಪ್ರೈಮರಿ ಇಮ್ಯೂನ್ ಡೆಫಿಷಿಯನ್ಸಿ ಡಿಸಾರ್ಡರ್ಸ್
• ಆಮದು ಸುಂಕ ವಿನಾಯಿತಿ: ವಿದೇಶಿ ಔಷಧಗಳ ಮೇಲಿನ ತೆರಿಗೆ ಕಡಿತದಿಂದ ಚಿಲ್ಲರೆ ಮಾರಾಟ ದರ ಗಣನೀಯವಾಗಿ ಇಳಿಯಲಿದೆ.

ವಿಶೇಷವಾಗಿ ವಿಮೆ ಸೌಲಭ್ಯವಿಲ್ಲದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ನಿರ್ಧಾರದಿಂದ ಲಕ್ಷಾಂತರ ರೂಪಾಯಿ ಉಳಿತಾಯವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular