ಬೆಂಗಳೂರು : ಉದ್ಯಮಿ ಸಿಜೆ ರಾಯ್ (C.J. Roy) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡ (SIT) ಅವರ ಪತ್ನಿ ಮತ್ತು ಮಗನನ್ನು ವಿಚಾರಣೆಗೆ ಒಳಪಡಿಸುತ್ತಿದೆ.
ಹೌದು, ಪತ್ನಿ ಹಾಗೂ ಪುತ್ರ ರೋಹಿತ್ ಗೆ ಎಸ್ ಐ ಟಿ ಬುಲಾವ್ ನೀಡಿದ್ದು, ಡೈರಿಯಲ್ಲಿ ಸಿಕ್ಕ ಬಗ್ಗೆ ಮಾಹಿತಿ ಪಡೆಯಲು ಎಸ್ ಐ ಟಿ ವಿಚಾರಣೆಗೆ ಕರೆದಿದೆ. ಡೈರಿ ಬರೆದಿದ್ದು ರಾಯ್ ಅವರೇನಾ ಎಂಬುದನ್ನು ಖಚಿತ ಪಡಿಸಲು ರಾಯ್ ಅವರ ಬೇರೆ ಬರವಣಿಗೆಯನ್ನು ಜೊತೆಗೆ ತರಲು ಸೂಚನೆ ನೀಡಲಾಗಿದೆ.
ಸಿಜೆ ರಾಯ್ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಹೆಸರುಗಳಿವೆಯೇ ಮತ್ತು ಆ ಪತ್ರಕ್ಕೂ ಇವರ ಸಾವಿಗೂ ಏನು ಸಂಬಂಧ ಎಂಬ ಬಗ್ಗೆ ಕುಟುಂಬಸ್ಥರಿಂದ ಎಸ್ಐಟಿ ವಿವರಣೆ ಪಡೆಯುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಅವರ ರಾಯ್ ಅವರ ಪತ್ನಿ ಮತ್ತು ಮಗನಿಗೂ ಎಸ್ ಐ ಟಿ ಬುಲಾವ್ ನೀಡಿದೆ.
ಸಿಜೆ ರಾಯ್ ಅವರ ಸಾವಿನ ಹಿಂದೆ ಆರ್ಥಿಕ ವ್ಯವಹಾರಗಳು, ಕೌಟುಂಬಿಕ ಕಲಹ ಅಥವಾ ಬೇರೆ ಯಾವುದಾದರೂ ಒತ್ತಡಗಳಿವೆಯೇ ಎಂಬ ಬಗ್ಗೆ ಸ್ಪಷ್ಟತೆ ಪಡೆಯಲು ಎಸ್ಐಟಿ ಅಧಿಕಾರಿಗಳು ಅವರ ಪತ್ನಿ ಮತ್ತು ಮಗನನ್ನು ವಿಚಾರಣೆಗೆ ಕರೆದಿದ್ದಾರೆ. ರಾಯ್ ಅವರ ಕೊನೆಯ ದಿನಗಳ ನಡವಳಿಕೆ ಮತ್ತು ಅವರು ಬರೆದಿದ್ದಾರೆ ಎನ್ನಲಾದ ಡೈರಿ ಬಗ್ಗೆ ಮಾಹಿತಿ ಪಡೆಯುವುದು ತನಿಖಾ ತಂಡದ ಉದ್ದೇಶವಾಗಿದೆ.
ಆರ್ಥಿಕ ಲಾಬಿ: ರಾಯ್ ಅವರ ಉದ್ಯಮ ಮತ್ತು ಹಣಕಾಸು ವ್ಯವಹಾರಗಳಲ್ಲಿ ಯಾರಾದರೂ ಕಿರುಕುಳ ನೀಡುತ್ತಿದ್ದರೇ ಎಂಬ ಬಗ್ಗೆ ಅವರ ಮಗನಿಗೆ ಹೆಚ್ಚಿನ ಮಾಹಿತಿ ಇರಬಹುದು ಎಂದು ಎಸ್ಐಟಿ ಶಂಕಿಸಿದೆ.ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ದೊಡ್ಡ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ರಾಜಕೀಯ ಹಾಗೂ ಉದ್ಯಮ ರಂಗದ ಕೆಲವು ದೊಡ್ಡ ಹೆಸರುಗಳು ಕೇಳಿಬಂದ ಕಾರಣ ಸರ್ಕಾರವು ತನಿಖೆಯನ್ನು ಎಸ್ಐಟಿಗೆ ಹಸ್ತಾಂತರಿಸಿದೆ.ವಿಚಾರಣೆಯ ನಂತರ ಎಸ್ಐಟಿ ಅಧಿಕಾರಿಗಳು ಈ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸುವ ಸಾಧ್ಯತೆ ಇದೆಯೇ ಅಥವಾ ಹೊಸ ಸಾಕ್ಷ್ಯಗಳು ಸಿಕ್ಕಿವೆಯೇ ಎಂಬ ಬಗ್ಗೆ ಅಧಿಕೃತ ಪ್ರಕಟಣೆ ನೀಡಲಿದ್ದಾರೆ.

