HomeKarnatakaಜೈಲುಗಳ ಮೇಲೆ ನಿಗಾ: ಕಮಾಂಡ್ ಸೆಂಟರ್ ಗೆ ಚಾಲನೆ: 8 ಕೇಂದ್ರ ಜೈಲುಗಳು ಮತ್ತು 4...

ಜೈಲುಗಳ ಮೇಲೆ ನಿಗಾ: ಕಮಾಂಡ್ ಸೆಂಟರ್ ಗೆ ಚಾಲನೆ: 8 ಕೇಂದ್ರ ಜೈಲುಗಳು ಮತ್ತು 4 ಜಿಲ್ಲಾ ಜೈಲುಗಳ ಮೇಲೆ 24/7 ಕಣ್ಗಾವಲು

ಬೆಂಗಳೂರು: ರಾಜ್ಯದ ಜೈಲುಗಳ ಮೇಲೆ ನಿಗಾ ವಹಿಸಲು ನೂತನ ಕಮಾಂಡ್ ಸೆಂಟರ್ ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದ್ದಾರೆ.

ಜೈಲುಗಳಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಸರಬರಾಜು, ಮದ್ಯ ತಯಾರಿಕೆ, ಅಕ್ರಮವಾಗಿ ಹುಟ್ಟುಹಬ್ಬ ಆಚರಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಮಾಂಡ್ ಸೆಂಟರ್ ಗೆ ಚಾಲನೆ ನೀಡಲಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಇತ್ತೀಚೆಗೆ ನಡೆದ ಕೆಲ ಅಕ್ರಮಗಳು ಭಾರಿ ಸುದ್ದಿಯಾಗಿದ್ದವು, ಇದರ ಬೆನ್ನಲ್ಲೇ ಕಮಾಂಡ್ ಸೆಂಟರ್ ಆರಂಭವಾಗಿದ್ದು, ಇನ್ಮುಂದೆ ಜೈಲುಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಿತೇಂದ್ರ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿ ನೀಡಿದ ವರದಿ ಹಿನ್ನೆಲೆಯಲ್ಲಿ ಜೈಲುಗಳಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಅವುಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸಿ ಜೈಲುಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವ ನಿಟ್ಟಿನಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ.

ಪ್ರಸ್ತುತ 8 ಕೇಂದ್ರ ಜೈಲುಗಳು ಮತ್ತು 4 ಜಿಲ್ಲಾ ಜೈಲುಗಳನ್ನು ಈ ಕಮಾಂಡ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕು ಮಟ್ಟದ ಜೈಲುಗಳನ್ನು ಸಹ ಇದೇ ರೀತಿಯಲ್ಲಿ ಸಂಪರ್ಕಿಸಲಾಗುವುದು. 24/7 ಕಣ್ಗಾವಲಿಗಾಗಿ 1076 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಸೂಕ್ಷ್ಮ ಘಟನೆಗಳನ್ನು ಸಹ ಪತ್ತೆ ಹಚ್ಚುವ ಸಾಮರ್ಥ್ಯ ಈ ಕೇಂದ್ರಕ್ಕಿದೆ. ಜೈಲಿನಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇದು ಪರಿಣಾಮಕಾರಿಯಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular